fbpx
ಕಿರುತೆರೆ

ದುರಂಹಕಾರಿ ಜಗನ್ ವಿರುದ್ಧ ಬಿಗ್ ಬಾಸ್ ಪ್ರೇಕ್ಷಕರು ಕೆಂಡಾಮಂಡಲ!

ದುರಂಹಕಾರಿ ಜಗನ್ ವಿರುದ್ಧ ಬಿಗ್ ಬಾಸ್ ಪ್ರೇಕ್ಷಕರು ಕೆಂಡಾಮಂಡಲ!

 

 

ಜೆಕೆ ಅಲಿಯಾಸ್ ಜಯಕಾರ್ತಿಕ್ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟ ಮೊದಲಿಗೆ ಅವರನ್ನೇ ಅಹಂಕಾರಿ ಅಂದುಕೊಂಡಿದ್ದ ಪ್ರೇಕ್ಷಕರ ಅಭಿಪ್ರಾಯ ಖುಲ್ಲಂಖುಲ್ಲ ಬದಲಾಗಿದೆ. ಯಾಕೆಂದರೆ, ಆ ಅಹಂಕಾರದ ಪಟ್ಟವನ್ನು ಆರಕ್ಕೇರದ ಮೂರಕ್ಕಿಳಿಯದ ಕಿರುತೆರೆ ನಟ ಜಗನ್ ಅಲಿಯಾಸ್ ಜಗನ್ನಾಥ್ ಚಂದ್ರಶೇಖರ್ ಸಾರಾಸಗಟಾಗಿ ಕಬಳಿಸಿಕೊಂಡಿದ್ದಾನೆ!

 

 

ತನಗೆ ಸಿಟ್ಟು ಬಂದರೆ ಬಿಗ್‌ಬಾಸ್ ಮನೆಗೆ ಬೆಂಕಿ ಬೀಳುತ್ತದೆ ಎಂಬ ರೇಂಜಿಗೆ ಪೋಸು ಕೊಡುತ್ತಾ ಪದೇಪದೆ ಪುಟಗೋಸಿ ಕಳಚಿ ಬೀಳುವಂತೆ ಅಬ್ಬರಿಸುವಾತ ಜಗನ್. ಮೊದ ಮೊದಲು ನಿಷ್ಠುರವಾದಿ ಎಂಬಂತೆ ಬಿಂಬಿಸಿಕೊಂಡು ಬಂದಿದ್ದ ಈತನಿಗೀಗ ಅಹಂಕಾರ ಎಂಬುದೊಂದು ವ್ಯಾಧಿ ಎಂಬುದು ಎಲ್ಲರಿಗೂ ಅರ್ಥವಾಗಿದೆ!
ಸಿಹಿಕಹಿ ಚಂದ್ರು, ಜಯಶ್ರೀನಿವಾಸನ್, ಸಮೀರ್ ಆಚಾರ್ಯ ಸೇರಿದಂತೆ ಎಲ್ಲರನ್ನೂ ಆವಾಜು ಹಾಕಿ ಕೆಣಕೋ ಈತನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಭುಗಿಲೆದ್ದಿದೆ.

 

 

 

ಕೆಲವರಂತೂ ಯೂಟ್ಯೂಬ್ ವಿಡಿಯೋ ಮೂಲಕ ಜಗನ್‌ಗೆ ಉಗಿದು ಉಪ್ಪಾಕುತ್ತಿದ್ದಾರೆ. ಆದಷ್ಟು ಬೇಗನೆ ಈ ಅಹಂಕಾರಿಯನ್ನು ಮನೆಯಿಂದ ಹೊರ ಹಾಕಿ ಎಂಬಂತೆ ಪ್ರೇಕ್ಷಕರೇ ಆಗ್ರಹಿಸಲಾರಂಭಿಸಿದ್ದಾರೆ.

 

 

ಈ ಜಗನ್ ಎಂಬ ಸೀಮೆಗಿಲ್ಲದ ನಟನ ವರಸೆಗಳೇ ಅಂಥಾದ್ದಿದೆ. ಇವನು ಕೊಡೋ ಪೋಸಿಗೂ ಈತ ಮಾಡಿರೋ ಸಾಧನೆಗೂ ಸೂತ್ರ ಸಂಬಂಧವಿಲ್ಲ. ಇಂಥಾ ಜಗನ್ ಬಿಗ್‌ಬಾಸ್‌ಗೆ ಬರೋ ಮುನ್ನ ಗಾಂಧಾರಿ ಅಂತೊಂದು ತೋಪು ಸೀರಿಯಲ್ಲಿನ ನಾಯಕನಾಗಿದ್ದ. ಆದರೆ ಶುದ್ಧ ಅಹಂಕಾರಿಯಾದ ಜಗನ್ ಕಿರುತೆರೆಯಲ್ಲಿ ಮಿಂಚಿದ್ದೂ ಅಷ್ಟಕ್ಕಷ್ಟೇ. ಯಾಕೆಂದರೆ ಪ್ರೇಕ್ಷಕರು ಅಪ್ಪತಪ್ಪಿ ಚಾನೆಲ್ ಬದಲಾಯಿಸಿದಾಗ ಗಾಂಧಾರಿ ಬರುತ್ತಿದ್ದರೆ ಅರೇ ಇದಿನ್ನೂ ಮುಗಿದಿಲ್ವಾ ಅಂತ ಅಚ್ಚರಿ ಸೂಸಿ ಮುಂದಕ್ಕೆ ಹೋಗುತ್ತಿದ್ದರು.

 

 

ಇಂಥಾ ಜಗನ್ ಈಗ ಅದೇನೋ ಕಡಿದು ಕಟ್ಟೆ ಹಾಕಿದವನಂತೆ ಪೋಸು ಕೊಟ್ಟರೆ ಯಾರಿಗೆ ತಾನೇ ಉರಿ ಹತ್ತೋದಿಲ್ಲ? ಅಷ್ಟಕ್ಕೂ ಈತ ಟಾಸ್ಕ್‌ಗಳ ಸಂದರ್ಭದಲ್ಲೂ ಅಹಂಕಾರದಿಂದ ಹೊರಬರೋದಿಲ್ಲ. ದಿನಾ ಬೆಳಗ್ಗಿನಿಂದಲೇ ಕಿರಿಕ್ಕು ಮಾಡುತ್ತಾ ಲೈಟ್ ಆಫ್ ಆಗುತ್ತಲೇ ಹುಡುಗೀರ ಪದತಲದಲ್ಲಿ ಕೂತು ನುಲಿಯೋ ಜಗನ್ ಇತ್ತೀಚೆಗೆ ಇವನಂಥಾದ್ದೇ ಕಿರುತೆರೆ ನಟಿ ಅಶಿತಾಳೊಂದಿಗೆ ಸಲ್ಲಾಪದಲ್ಲಿ ತೊಡಗಿದ್ದಾನೆ.

 

 

ಕೆಲ ದಿನಗಳಿಂದ ಇವರಿಬ್ಬರ ನುಲಿದಾಟ ಕಂಡು ಬಿಗ್‌ಬಾಸ್ ಪ್ರೇಕ್ಷಕರೇ ಇದು ಅಸಹ್ಯ ಅನ್ನುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ತುಂಬಾ ಅದೇ ವಾತಾವರಣ ಜಾರಿಯಲ್ಲಿದೆ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top