fbpx
ಕಿರುತೆರೆ

ಬಿಗ್‌ಬಾಸ್ ಮನೆಯೊಳಗೆ ಕಿಲಾಡಿ ಕಿಡ್ಡೂ ನಿವೇದಿತಾ ಹವಾ!

ಬಿಗ್‌ಬಾಸ್ ಮನೆಯೊಳಗೆ ಕಿಲಾಡಿ ಕಿಡ್ಡೂ ನಿವೇದಿತಾ ಹವಾ!

 

 

ಪ್ರತೀ ಸಲವೂ ಚಿತ್ರವಿಚಿತ್ರ ಜನರ ಜೊತೆ ಭಯಂಕರ ವಿಚಿತ್ರ ಎಲಿಮೆಂಟುಗಳನ್ನೂ ಮನೆತುಂಬಿಸಿಕೊಳ್ಳೋದು ಬಿಗ್‌ಬಾಸ್ ಮಹಿಮೆ. ಈ ಬಾರಿ ಮೇಲುನೋಟಕ್ಕೇ ಹುಚ್ಚು ಕೆರಳಿಕೊಂಡಿರುವಂತೆ ಕಾಣಿಸೋ ಆಸಾಮಿಗಳ ಸಂಖ್ಯೆ ಕಡಿಮೆ ಇದ್ದರೂ ‘ವಿಚಿತ್ರಗಳಿಗೇನೂ ಕೊರತೆಯಿಲ್ಲ. ಅಂಥವರಲ್ಲಿ ಮೊದಲಿಗರ‍್ಯಾರು ಅಂತೊಂದು ಪ್ರಶ್ನೆ ಇಟ್ಟರೆ ಖುದ್ದು ಪ್ರೇಕ್ಷಕರೇ ನಿಸ್ಸಂದೇಹವಾಗಿ ಮೈಸೂರು ಹುಡುಗಿ ನಿವೇದಿತಾ ಗೌಡ ಹೆಸರು ಹೇಳುತ್ತಾರೆ!

 

 

ಪಕ್ಕಾ ಕನ್ನಡಿಗ ಕುಟುಂಬದಿಂದ ಬಂದಿರೋ ಈ ಹುಡುಗಿ ಭಾಷೆಯಲ್ಲಿ ಮಾತ್ರ ಇಂಗ್ಲಿಶ್ ಕ್ರಾಸ್ ಬ್ರೀಡಿನಂತೆ ನುಲಿಯುತ್ತಾ, ತಾನು ಮಾತಾಡಿದ್ದು ಕನ್ನಡವೋ ಇಂಗ್ಲಿಶೋ ಎಂಬ ಬಗ್ಗೆ ಖುದ್ದು ಆಕೆಗೇ ಸಂಶಯ ಕಾಡುವಂತೆ ವಿಚಿತ್ರವಾಗಿ ಮಾತಾಡೋ ಈಕೆ ಈ ಬಾರಿಯ ಬಿಗ್‌ಬಾಸ್ ಶೋದ ಪ್ರಮುಖ ಆಕರ್ಶಣೆಯಾಗಿ ಬದಲಾಗಿ ಬಿಟ್ಟಿದ್ದಾಳೆ!

 

 

ಕಾಮನ್‌ಮ್ಯಾನ್ ಕೋಟಾದಿಂದ ಈ ಹುಡುಗಿ ಬಿಗ್‌ಬಾಸ್ ಮನೆ ಸೇರೋ ಸೂಚನೆ ಸಿಕ್ಕಾಗ ಎಲ್ಲರೂ ಅವಾಕ್ಕಾಗಿದ್ದರು. ಆ ನಂತರ ಬಿಗ್‌ಬಾಸ್ ಮನೆ ಸೇರೋ ಮೊದಲು ಈಕೆಯ ಹಾವಭಾವ, ಕನ್ನಡ ಭಾಷೆಯ ಸೊಗಡು ಕಂಡು ಎಲ್ಲರೂ ಕಂಗಾಲಾಗಿದ್ದರು. ಪಕ್ಕಾ ಬಾಲಾಗ್ರಹ ಬಾಧೆ ಹೊಂದಿದಂತಿದ್ದ ಈಕೆಯನ್ನು ಇತರೇ ಸದಸ್ಯರಿರಲಿ, ಪ್ರೇಕ್ಷಕರೂ ಕೂಡಾ ಸ್ಪರ್ಧಿ ಅಂತ ಒಪ್ಪಿಕೊಳ್ಳಲು ಭಾಳಾ ಕಷ್ಟಪಟ್ಟಿದ್ದರು.

 

 

ಆರಂಭದ ವಾರದಲ್ಲಿ ಬೀದಿಯಲ್ಲಿ ಅಡ್ಡಾಡುತ್ತಿದ್ದ ಹೆಣ್ಮಗುವೊಂದು ಮಿಠಾಯಿ ಅಂಗಡಿಗೆ ಬಂದಂತೆ ನಡೆದುಕೊಂಡಿದ್ದ ನಿವೇದಿತಾ ಗೌಡ ಇದೀಗ ಅಚ್ಚರಿದಾಯಕವಾಗಿ ಬಿಗ್‌ಬಾಸ್ ಒಳಗೆ ನೆಲೆಯೂರಿದ್ದಾಳೆ. ಆಕೆಯನ್ನು ಹೆಣ್ಮಗುವಿನಂತೆಯೇ ನೋಡುತ್ತಾ ಕಿಡ್ಡೂ ಅಂತಂತಲೇ ಕರೆಯುತ್ತಿದ್ದ ಸದಸ್ಯರೆಲ್ಲ ಆಕೆಯನ್ನೀಗ ಪ್ರಭಲ ಸ್ಪರ್ಧಿ ಅಂತಲೇ ತೀರ್ಮಾನಿಸಿದ್ದಾರೆ.

 

 

ಮನೆಯೊಳಗಿರೋ ತೇಜಸ್ವಿನಿ ಮುಂತಾದ ಘಾಟಿ ಹುಡುಗೀರು ಈಕೆಯ ವಿರುದ್ಧ ಚರ್ಚೆ ನಡೆಸುವಷ್ಟರ ಮಟ್ಟಿಗೆ ಕಂಗ್ಲಿಶ್ ಸ್ಟಾರ್ ನಿವೇದಿತಾ ಗೌಡಳ ಹವಾ ಹೆಚ್ಚಿಕೊಂಡಿದೆ. ಮೆಚ್ಯೂರಿಟಿ, ಬುದ್ಧಿ ಮುಂತಾದವುಗಳು ಆಕೆ ತೊಡುವ ಬಟ್ಟೆಯಷ್ಟೇ ಕಡಿಮೆ ಎಂಬಂತೆ ಕಾಣಿಸೋ ಈ ಹುಡುಗಿ ಈ ಬಾರಿ ಬಿಗ್‌ಬಾಸ್ ಪ್ರೇಕ್ಷಕರ ಪಾಲಿಗೆ ಅಚ್ಚರಿಯ ವಿಚಾರ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top