fbpx
ಭವಿಷ್ಯ

ನಿಮ್ಮ ಜಾತಕದಲ್ಲಿ ಶುಕ್ರ ಗ್ರಹ ನೀಚ ಸ್ಥಾನದಲ್ಲಿ ಇದ್ದರೆ ಈ ಪರಿಹಾರಗಳು ಮಾಡ್ಕೊಳ್ಳಿ ಹಾಗೆ ಶುಕ್ರ ಗ್ರಹದ ಕಾರಕತ್ವಗಳು ತಿಳ್ಕೊಳ್ಳಿ

ಶುಕ್ರ ಗ್ರಹ.

 

ನವಗ್ರಹಗಳಲ್ಲಿ ಆರನೇ ಅತ್ಯದ್ಭುತವಾದ ಗ್ರಹವೇ ಶುಕ್ರಗ್ರಹ.

ಶುಕ್ರನ ಜನನ.

ಮನ್ಮಥನಾಮ ಸಂವತ್ಸರ ಚೈತ್ರ ಮಾಸ ಶುಕ್ಲ ಪಕ್ಷದ ಏಕಾದಶಿಯ ದಿನ ಶುಕ್ರನ ಜನನವಾಯಿತು.

ಜನ್ಮನಕ್ಷತ್ರ – ಮಖಾ

ಗೋತ್ರ – ಭಾರ್ಗವ ಗೋತ್ರ.

ಭೃಗು ಮಹರ್ಷಿಯ ಪರಂಪರೆ,ಶ್ವೇತ ವರ್ಣ.

ಹಸ್ತ ಸಂಖ್ಯೆ- ಆರು.

ಗ್ರಹ ಮಂಡಲದಲ್ಲಿ ಅಲಂಕರಿಸುವ ಸ್ಥಾನ ಪೂರ್ವ ದಿಕ್ಕು.

ಧಾನ್ಯ- ಅವರೇಕಾಳು.

ವಸ್ತ್ರ- ಬಿಳಿ ಮತ್ತು ಹಸಿರು ಮಿಶ್ರಿತ ಕಮಂಡಲ.

ವಾಹನ -ಶ್ವೇತಾಶ್ವ.

ಪಾಂಚಾಲ ದೇಶಕ್ಕೆ ಅಧಿಪತಿ.

ಪುಷ್ಪ -ಬಿಳಿ ತಾವರೆ.

ಆದಿದೇವತೆ- ಮಹಾಲಕ್ಷ್ಮೀ.

ಶುಕ್ರನು ಒಂದು ರಾಶಿಯಲ್ಲಿ ಮೂವತ್ತು ದಿನಗಳ ಕಾಲ ಸಂಚರಿಸುವನು.

ನಾಲ್ಕನೇ ಮನೆಯಲ್ಲಿ ದಿಗ್ಬಲನು.

ಹತ್ತನೇ ಮನೆಯಲ್ಲಿ ಬಲಹೀನನು.

ವೃಷಭ ಮತ್ತು ತುಲಾ ರಾಶಿಯು ಶುಕ್ರನ ರಾಶಿಗಳು.

ಮೀನ ರಾಶಿಯಲ್ಲಿ ಉಚ್ಚ ಸ್ಥಾನ.

ಕನ್ಯಾ ರಾಶಿಯಲ್ಲಿ ನೀಚ ಸ್ಥಾನ.

28 ಡಿಗ್ರಿಗಳಲ್ಲಿ ಪರಮೋಚ್ಚ ,27 ಡಿಗ್ರಿಗಳಲ್ಲಿ ಪರಮ ನೀಚನೂ.

ಭರಣಿ ಪುಬ್ಬ ಪೂರ್ವಾಷಾಢ ನಕ್ಷತ್ರಗಳಿಗೆ ಅಧಿಪತಿ ಶುಕ್ರ ಗ್ರಹ.

ಶುಕ್ರ ಗ್ರಹ ನೀಚನಾಗಿದ್ದರೆ ಹೀನ ಸ್ಥಾನದಲ್ಲಿದ್ದರೆ ಉದ್ವೇಗ ,ಮೂತ್ರಪಿಂಡ, ಗುಪ್ತಾಂಗಗಳ ಭಾಗ, ಮೂತ್ರ ಕೋಶಗಳಿಗೆ ತೊಂದರೆ  ಮತ್ತು ಕಣ್ಣುಗಳಿಗೆ ತೊಂದರೆ ಉಂಟಾಗುವುದು .

ಶುಕ್ರ ಗ್ರಹದ ಕಾರಕತ್ವಗಳು.

ಕಾಮಕಾರಕ, ಜ್ಞಾನಕಾರಕ, ವೀರ್ಯ ಕಾರಕ, ಐಷಾರಾಮಿ ಜೀವನ, ಭೋಗ ಪ್ರಧಾನ ಗ್ರಹ, ಲೌಕಿಕ ಸುಖ ನೀಡುವವನು.

ರಜೋಗುಣ ,ದ್ವಿಪಾದ  ಗ್ರಹ, ಮೃದು ಹಾಗೂ ಲಘು ಸ್ವಭಾವ, ಪರೋಪಕಾರಿ, ಹೆಂಡತಿ ಸುಖ ಇಂದ್ರಿಯ ಸುಖ ಮತ್ತು  ವಿವಾಹ ಭಾಗ್ಯ ನೀಡುವವನು.

ಸ್ತ್ರೀ ಗ್ರಹ  , ಕಪ್ಪಾದ ಗುಂಗುರು ಕೂದಲು ಹೊಂದಿರುವ ,ಯಜುರ್ವೇದಕ್ಕೆ ಅಧಿಪತಿಯಾಗಿರುವ, ಸ್ವದೇಶಾಭಿಮಾನಿ, ಜಲಮಯವಾದ ಪ್ರದೇಶ, ಸಂಗೀತ, ಸಾಹಿತ್ಯ, ನಾಟ್ಯ, ಅಲಂಕಾರಪ್ರಿಯ, ದಾಂಪತ್ಯ ಜೀವನದಲ್ಲಿ ಪರಸ್ಪರ ಹೊಂದಾಣಿಕೆ ಕೊಡುವವನು.

ಶ್ರೀಮಂತತನ, ಗೌರವ, ಗೃಹ ಸೌಖ್ಯ, ಅಭಿವೃದ್ಧಿ, ಮೋಹ ಕಾರಕ, ಸ್ತ್ರೀ ಮೂಲಕ ಲಾಭ, ದೈತ್ಯ ಗುರು ,ಆಗ್ನೇಯ ದಿಕ್ಕಿಗೆ ಅಧಿಪತಿ ,ಸುಂದರವಾದ ಗಮನ ಸೆಳೆಯುವ ಕಣ್ಣುಗಳು, ಮಧ್ಯಮ ಎತ್ತರ ,ಜಲತತ್ವ, ಬ್ರಾಹ್ಮಣ ಜಾತಿ ,ಅತ್ಯಾಕರ್ಷಕ ಶರೀರ, ರಾಕ್ಷಸರಿಗೆ ಗುರು, ಎಲ್ಲಾ ವಿಚಾರಗಳಲ್ಲೂ ಉನ್ನತ ಮಟ್ಟದ ಸುಖ, ಚಿತ್ರ ಚಿತ್ರವಾದ ಉಡುಪು ,ಒಡವೆ, ವಸ್ತ್ರಗಳು, ಮಂತ್ರಿ ಪದವಿ, ಪರಸ್ತ್ರೀ ಸಹವಾಸ, ಸೌಖ್ಯ  ಮತ್ತು  ಇನ್ನೂ  ಮುಂತಾದವುದಕ್ಕೆ ಶುಕ್ರನು ಕಾರಕನಾಗುತ್ತಾನೆ.

 

ಶುಕ್ರ ಗ್ರಹವನ್ನು ಸ್ತುತಿಸುವ ಮಂತ್ರ.

“ ಹಿಮಕುಂದ ಮೃಗಾಲಾಭಂ ಪರಮ೦ ಗುರು೦ ಸರ್ವಶಾಸ್ತ್ರ ಪ್ರವರ್ತಾರಾಮ್ ಭಾರ್ಗವ೦ ಪ್ರಣಮಾಮ್ಯಹಂ”

ಈ ಸ್ತೋತ್ರವನ್ನು ಪಠಣೆ ಮಾಡುವುದರಿಂದ ಶುಕ್ರಗ್ರಹದ ದೋಷ ನಿವಾರಣೆಯಾಗುವುದು.

 

 ಶುಕ್ರ ವೇದಾ ಪರಿಹಾರ ಮಂತ್ರ

 “ದೈತ್ಯಮಂತ್ರಿ   ಗುರುಸ್ಥ   ಶಾ೦ ಪ್ರಾಣದಶಚ ಮಹಾಮತಿಹಿ  ಪ್ರಭುಸ್ತಾರಾ ಗ್ರಹಣಾಯ ಪೀಡಾಂ ಹರತು ಮೇ ಭೃಗುಹ”

 

ಶುಕ್ರ ಗಾಯಿತ್ರಿ ಮಂತ್ರ.

“ ಓಂ ಭಾರ್ಗವಾಯ ವಿದ್ಮಹೇ,

ದಾನ ವಾಚಾರಯಾಯ  ಧೀಮಹಿ,

ತನ್ನೋ ಶುಕ್ರ ಪ್ರಚೋದಯಾತ್”

 

 ಏಕಾಕ್ಷರಿ ಬೀಜ ಮಂತ್ರ

 “ಓಂ ಶು೦ ಶುಕ್ರಾಯ ನಮಃ”

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top