fbpx
ಕಿರುತೆರೆ

ಬಿಗ್’ಬಾಸ್ ಮನೆಗೆ ಮತ್ತೆ ಬಂದ ತೇಜಸ್ವಿನಿ: ಇದು ಮೋಸ ಅಂತಿದ್ದಾರೆ ವೀಕ್ಷಕರು.

ಬಿಗ್’ಬಾಸ್ ಮನೆಗೆ ಮತ್ತೆ ಬಂದ ತೇಜಸ್ವಿನಿ: ಇದು ಮೋಸ ಅಂತಿದ್ದಾರೆ ವೀಕ್ಷಕರು.

 

 

ತಮ್ಮ ತಂದೆಗೆ ಆರೋಗ್ಯ ಸರಿ ಇಲ್ಲದ ಕರಣ ಬಿಗ್ ಬಾಸ್ ಮನೆಯಿಂದ ಹೊರಹೋಗಿದ್ದ ನಟಿ ತೇಜಸ್ವಿನಿ ಈಗ ಮತ್ತೆ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಹಾಗಾಗಿ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿರುವವರ ಪೈಕಿ ಯಾರು ಎಲಿಮಿನೇಟ್ ಆಗುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ.. ಮುಂದೆ ಓದಿ

 

 

ಹೊರ ಜಗತ್ತಿನ ಸಂಪರ್ಕವಿಲ್ಲದೆ ಬಿಗ್ ಬಾಸ್ ಮನೆಯಲ್ಲೇ ಬದುಕುವ ಈ ಆಟದಲ್ಲಿ ತೇಜಸ್ವಿನಿಯವರನ್ನು ಎರಡು ದಿನ ಹೊರಗೆ ಬಂದು ಕಾರ್ಯಕ್ರಮದ ಮೇಲಿನ ಅಭಿಪ್ರಾಯಗಳನ್ನು ತಿಳಿದು ಮತ್ತೆ ಬಿಗ್ ಬಾಸ್ ಗೆ ಹೋಗಿರುವುದು ಈಗ ವೀಕ್ಷಕರ ಕೋಪಕ್ಕೆ ಕಾರಣವಾಗಿದೆ.. ತೇಜಸ್ವಿನಿ ಆಚೆ ಬಂದಾಗ ಹೊರಗೆ ಯಾವ ರೀತಿಯ ವಾತಾವರಣವಿದೆ ಮತ್ತು ಯಾವ ಯಾವ ಸ್ಪರ್ಧಿಗಳ ಮೇಲೆ ಯಾವ ಯಾವ ಅಭಿಪ್ರಾಯಗಳಿವೆ ಎಂದು ತಿಳಿದುಕೊಂಡು ಮತ್ತೆ ಬಿಗ್ ಬಾಸ್ ಮನೆಗೆ ಹೋಗಿರುವುದು ಸರಿಯಲ್ಲ ನಿಜಕ್ಕೂ ಇದು ಮೋಸ. ಇದು ಆಟದ ದಿಕ್ಕನ್ನೇ ಬದಲಿಸುತ್ತದೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ವೀಕ್ಷಕರು ಹೇಳುತ್ತಿದ್ದಾರೆ.

 

 

ತೇಜಸ್ವಿನಿಯವರು ಹೊರಜಗತ್ತಿನ ಪರಿಸ್ಥಿತಿಗಳ ಬಗ್ಗೆ ಇತರ ಸದಸ್ಯರುಗಳ ಬಳಿ ಮಾತನಾಡದ ಹಾಗೆ ಬಿಗ್’ಬಾಸ್ ಆದೇಶಿಸಬೇಕು ಇಲ್ಲವಾದರೆ ಆಟಕ್ಕೆ ಅರ್ಥವಿರೋದಿಲ್ಲ ಎಂದು ವೀಕ್ಷಕಕರು ಹೇಳುತ್ತಿದ್ದಾರೆ. ತೇಜಸ್ವಿನಿ ಬಿಗ್ ಬಾಸ್ ಮನೆಗೆ ವಾಪಸ್ ಆಗುತ್ತಿದ್ದಂತೆಯೇ, ‘ಬಿಗ್ ಬಾಸ್’ ಮನೆಯಲ್ಲಿ ಸಂತಸ ಮನೆ ಮಾಡಿದೆ ಆದರೆ ವೀಎಕ್ಷಕರಿಗೆ ಮಾತ್ರ ಬೇಸರ ತಂದಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top