fbpx
ಕಿರುತೆರೆ

ಬಿಗ್ ಬಾಸ್ ಮನೆಯ ಆ ವಿಷಯಗಳು ನನಗೆ ಗೊತ್ತಿಲ್ಲ -ಕಿಚ್ಚ ಸುದೀಪ್

ಬಿಗ್ ಬಾಸ್ ಮನೆಯ ಆ ವಿಷಯಗಳು ನನಗೆ ಗೊತ್ತಿಲ್ಲ -ಕಿಚ್ಚ ಸುದೀಪ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಕನ್ನಡ ಕಿರುತೆರೆಯ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 5 ಪ್ರಾರಂಭಿಸಿರುವುದು ಎಲ್ಲರಿಗೂ 100 ದಿನಗಳ ಕಾಲ ಕಾರ್ಯಕ್ರಮ ನಡೆಯಲಿರುವ ಈ ಶೋ ಗೆ ಎಂದಿನಂತೆ ಸೆಲೆಬ್ರಿಟಿಗಳು , ಜನ ಸಾಮಾನ್ಯರಿಗೂ ಅವಕಾಶ ನೀಡಲಾಗಿದೆ..
ಸುದೀಪ್ ನಿರೂಪಣೆಯ ಬಗ್ಗೆ ಎರಡು ಮಾತಿಲ್ಲ , ಸುದೀಪ್ ನಿರೂಪಣೆ ಬಿಗ್ ಬಾಸ್ ಗೆ ಬೆಸ್ಟ್ ಅಂತ ಇಡೀ ಕರ್ನಾಟಕವೇ ಒಪ್ಪಿಕೊಂಡಿದೆ .

 

ಆದರೆ ಸುದೀಪ್ ಗೆ ಈ ವಿಷ್ಯ ಗೊತ್ತೇ ಇರಲ್ವಂತೆ !

ಹೌದು ನಿರೂಪಣೆಯ ಜವಾಬ್ದಾರಿಯನ್ನು ಹೊತ್ತಿಕೊಂಡಿದ್ದರು ಸಹ ಶೋ ಕುರಿತು ಕೆಲ ವಿಚಾರಗಳ ಬಗ್ಗೆ ಗೊತ್ತಿರೋದಿಲ್ವಂತೆ , ಪ್ರತಿ ಸೀಸನ್‌ ಶುರುವಾಗುವ ಮುಂಚೆ ಯಾವ ಅಭ್ಯರ್ಥಿ ಮನೆಯೊಳಗೆ ಹೋಗುತ್ತಾರೆ ಎನ್ನುವ ವಿಷಯ ಗೊತ್ತಿರುವುದಿಲ್ಲವಂತೆ ಅವರಿಗೆ ಸ್ಪರ್ಧಿಗಳ ಬಗ್ಗೆ ತಿಳಿಯೋದು ಬಿಗ್ ಬಾಸ್ ಕಾರ್ಯಕ್ರಮ ಶುರುವಾಗುವ ದಿನಾ ಮಾತ್ರವಂತೆ .

ಅಷ್ಟೇ ಅಲ್ಲದೆ ‘ಸೂಪರ್ ಸಂಡೇ ವಿಥ್‌ ಕಿಚ್ಚ ಸುದೀಪ’ ಸಮಯದಲ್ಲೂ ಕಿಚ್ಚ ಬಿಗ್ ಬಾಸ್ ಮನೆಯಿಂದ ಸ್ಪರ್ಧಿಗಳು ಯಾವ ಕಾರಣಕ್ಕೆ ಎಲಿಮಿನೇಟ್ ಆಗುತ್ತಾರೆ , ಮನೆಯಲ್ಲಿ ಉಳಿಯಬೇಕಾದ್ರೆ ಏನು ಮಾಡಬೇಕು ? ಯಾವ ವಿಷಯಕ್ಕೆ ಎಲಿಮಿನೇಟ್ ಆಗಿ ಹೊರ ಬರುತ್ತಾರೆ ಎಂಬ ವಿಷಯಗಳು ಗೊತ್ತಿರುವುದಿಲ್ಲವಂತೆ !

ಇಷ್ಟು ಗೌಪ್ಯತೆಯನ್ನು ಬಿಗ್ ಬಾಸ್ ತಂಡ ಮಾಡುವುದು ಆಶ್ಚರ್ಯವೇ ಸರಿ ಎನ್ನುತ್ತಾರೆ ವೀಕ್ಷಕರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top