fbpx
ಸಮಾಚಾರ

ಜಿಯೋ ಎಫೆಕ್ಟ್: ದೇಶದ 75,000 ಮಂದಿ ಕೆಲಸ ಕಳೆದುಕೊಂಡು ಕಂಗಾಲು.

ಜಿಯೋ ಎಫೆಕ್ಟ್: ದೇಶದ 75,000 ಮಂದಿ ಕೆಲಸ ಕಳೆದುಕೊಂಡು ಕಂಗಾಲು.

 

 

 

 

ಭಾರತ ಟೆಲಿಕಾಂ ಮಾರುಕಟ್ಟೆಯಲ್ಲಿ ವ್ಯಾಪಿಸುತ್ತಿರುವ ಜಿಯೋ ಪ್ರಭಾವವನ್ನು ಎದುರಿಸಲು ಜಿಯೋ ಸಿಮ್ ಬಂದಾಗಿನಿಂದಲೂ ತತ್ತರಿಸಿ ಹೋಗಿದ್ದ ಉಳಿದ ಟೆಲಿಕಾಂ ಸಂಸ್ಥೆಗಳು ಜಿಯೋಗೆ ಸೆಡ್ಡುಹೊಡೆಯಲು ಒಂದರ ಮೇಲೆಂದು ಆಫರ್ ಗಳನ್ನೂ ನೀಡುತ್ತಾ ಬಂದಿದ್ದವು ಆದರೀಗ ಜಿಯೋ ಸಿಮ್ ಪ್ರಭಾವದಿಂದಾಗಿ ಟೆಲಿಕಾಂ ಕ್ಷೇತ್ರದ ಲಕ್ಷಂತಾರ ಮಂದಿ ತಮ್ಮ ಕೆಲಸವನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

 

 

ಜಿಯೋ ಪ್ರಭಾವದಿಂದ ಒಂದೇ ವರ್ಷ ಈ ಕ್ಷೇತ್ರದಲ್ಲಿ 75,000 ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಹೌದು ಟೆಲಿಕಾಂ ಕ್ಷೇತ್ರದಲ್ಲಿ ಇತ್ತೀಚಿಗೆ ಉಂಟಾಗಿರುವ ತೀವ್ರ ಸ್ಪರ್ಧಾತ್ಮಕತೆಯಿಂದ ಟೆಲಿಕಾಂ ಆಪರೇಟರ್‌ಗಳು, ಟವರ್ ಕಂಪೆನಿಗಳು ಕೆಲವು ಕಂಪೆನಿಗಳೊಂದಿಗೆ ವಿಲೀನಗೊಳ್ಳುತ್ತಿವೆ.

 

 

ಈ ಹಿನ್ನೆಲೆಯಲ್ಲಿ ಟೆಲಿಕಾಂ ಕ್ಷೇತ್ರದಲ್ಲಿದ್ದ 3 ಲಕ್ಷ ಉದ್ಯೋಗಿಗಳ ಪೈಕಿ 75000 ಮಂದಿ ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದು ಪ್ರಸ್ತುತ ಉದ್ಯೋಗಿಗಳ ಸಂಖ್ಯೆ 2.25 ಲಕ್ಷಕ್ಕೆ ಇಳಿಕೆಯಾಗಿದೆ. ಸದ್ಯದ ಮಾಹಿತಿಯ ಪ್ರಕಾರ ಇನ್ನೂ ಬಹಳಷ್ಟು ಮಂದಿ ಉದ್ಯೋಗ ಕಳೆದುಕೊಳ್ಳುವ ನೀರಿಕ್ಷೆಯಿದೆ.

 

 

ಕಳೆದ ವರ್ಷ ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ರಿಲಯನ್ಸ್ ಜಿಯೋ ಬಂದಾಗಿನಿಂದ ಕಂಪೆನಿಗಳ ಆದಾಯ, ಲಾಭ, ಒಮ್ಮೆಲೆ ನಿಂತುಹೋಗಿತ್ತು ಹಾಗಾಗಿ ವೊಡಫೋನ್ ಇಂಡಿಯಾ, ಐಡಿಯಾ ಸೆಲ್ಯುಲಾರ್ ಸಂಸ್ಥೆಗಳು ಮತ್ತು ಏರ್ಟೆಲ್, ಟಾಟಾ ಡೊಕೊಮೊ ವಿಲೀನ ಮಾಡಿಕೊಳ್ಳಲು ಮುಂದಾಗಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top