fbpx
ಸಮಾಚಾರ

ವೈದ್ಯರ ಲಾಭಿಗೆ ಕಾಯ್ದೆ ತಡೆ ಹಿಡೆಯುವ ಪ್ರಯತ್ನದ ವಿರುದ್ಧ ಪ್ರತಿಯೋಬ್ಬ ಜನಸಾನ್ಯರು ಧ್ವನಿ ಎತ್ತಬೇಕಿದೆ

ವೈದ್ಯೋ ನಾರಾಯಣೋ ಹರಿಃ ಅಂತಾರೆ  ಅದ್ರೆ ಕೆಲವು ವೈದ್ಯರು ನರರಾಕ್ಷರು ಅಗುತ್ತಿದ್ದಾರೆ. ಸತ್ತ ಹೆಣವನ್ನು ಇಟ್ಟು ಕೊಂಡು ಬಡವರ ಬಳಿ ಲಕ್ಷಾಂತರ ಹಣ ಸುಲಿಗೆ ಮಾಡುತ್ತಾರೆ, ಇದರ ನಿಯಂತ್ರಣ್ನಕ್ಕೆ ಕಾಯ್ದೆ ತರಲು ಹೊಟರೆ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಂತ್ರಣ ಕಾಯ್ದೆ ಜಾರಿಗೆ ತಡೆಯೋಡ್ಡುತ್ತಿದ್ದಾರೆ, ಅದರ ವೈದ್ಯರ ಲಾಬಿ ಕಾಯ್ದೆಯನ್ನ ರದ್ದು ಗೋಳಿಸಲು ಇದರ ವಿರುದ್ಧ ಬಡವರು ಧ್ವನಿ ಎತ್ತಬೇಕಿದೆ

ರಾಜ್ಯ ಸರ್ಕಾರದ ನಿಲುವನ್ನ ಬೆಂಬಲಿಸಬೇಕಿದೆ ರಾಜಕೀಯಪಕ್ಷಳಲು ವೈದ್ಯರ ಲಾಭಿಗೆಪಡೆದು ಕಾಯ್ದೆ ತಡೆ ಹಿಡೆಯುವ ಪ್ರಯತ್ನ ಮಾಡುತ್ತಿವೆ ಇನ್ನು ಕೆಲವು ಶಸಕರು ಹಾಗೂ ಸಚಿವರು (ಎಲ್ಲಾ ಪಕ್ಷಗಳ ಸೇರಿ) ಈ ಕಾಯ್ದೆ ಯಿಂದ ತಮ್ಮ ಸಂಸ್ಥೆಗಳಿಗೆ ಏಟು ಬೀಳಲಿದೆ. ಬಡವರ ಸುಲಿಗೆ ಸಾಧ್ಯವಿಲ್ಲ ಎಂದು ತಂತ್ರ ರೂಪಿಸಿ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಂತ್ರಣ ಕಾಯ್ದೆ ಜಾರಿಗೆ ತಡೆಯೋಡ್ಡುತ್ತಿದ್ದಾರೆ.

ಇದರ ವಿರುದ್ಧ ಪ್ರತಿಯೋಬ್ಬ ಜನಸಾನ್ಯರು ಧ್ವನಿ ಎತ್ತಬೇಕಿದೆ.

ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರ ಕಾಯ್ದೆಯ ಪ್ರಮುಖ ಅಂಶಗಳು.

1) ಖಾಸಗಿ ಆಸ್ಪತ್ರೆಗಳಲ್ಲಿ ದೊರಕುವ ಚಿಕಿತ್ಸೆಗೆ ಬೇಕಾಬಿಟ್ಟಿ ದರ ವಿದಿಸಿ ಬಡವ ಶ್ರೀಮಂತರೆನ್ನದೆ ಹಣ ಕೀಳುವ ಆಸ್ಪತ್ರೆಗಳು ಇನ್ನ ಮುಂದೆ ಯಾವ ಚಿಕಿತ್ಸಗೆ ಯಾವ ದರ ಅಂತ ಸರ್ಕಾರ ನಿಗದಿಪಡಿಸಿದ ದರ ಆಸ್ಪತ್ರೆಗಳ ರಿಸೆಪಷನ್ ಹಾಲ್ನಲ್ಲಿ  ಹಾಕಬೇಕು.

2) ಯಲ್ಲಾ ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿದ ಏಕ ರೂಪದ ಚಿಕಿತ್ಸ ದರ ಅನುಸರಿಸಬೇಕು.

3) ರೋಗಿಗೆ ತಾನು ಪಡೆಯಲು ಬಯಸುವ ಚಿಕಿತ್ಸೆಯ ಸಂಪೂರ್ಣ ಚಿಕಿತ್ಸೆಯ ಮುನ್ನ ಬೆಡ್ ಚಾರ್ಜ್,ಚಿಕಿತ್ಸೆಯ ವೆಚ್ಚ ಹಾಗು ಔಷದಿಯ ವೆಚ್ಚದ ಎಸ್ಟಿಮೇಟ್ ಕಾಪೀ ನೀಡಬೇಕು.

4) ಎಮರ್ಜೆನ್ಸಿ ವೇಳೆ ಹಣ ಪಾವತಿಗೆ ಒತ್ತಾಯಿಸುವಂತಿಲ್ಲ.

5) ವೈದ್ಯರು ಇನ್ನ ಮುಂದೆ ರೋಗಿಗೆ ಬರೆಯುವ ಔಷದಿಗಳ ಹೆಸರನ್ನು ಹಾಗು ಚಿಕಿತ್ಸೆ ಕೊಡುತ್ತಿರುವ ವಿಷಯದ ಕುರಿತು ರೋಗಿಗೆ ಅರ್ಥವಾಗುವ ಹಾಗೆ ಬರೆಯಬೇಕು.

6) ರೋಗಿಯು ಚಿಕಿತ್ಸೆ ಫಲಕಾರಿಯಾಗದೆ ಮರಣಹೊಂದಿದ ಸಂದರ್ಭದಲ್ಲಿ ಬಿಲ್ ಪಾವತಿಗಾಗಿ ಸಂಭದಿಕರಿಗೆ ಹಿಂಸಿಸಬಾರದು ಹಾಗು ಬಿಲ್ ಪಾವತಿಯಾಗದೆ ಶವ ಕೊಡದೆ ನಿರಾಕರಿಸುವಂತಿಲ್ಲ.

7) ರೋಗಿಯ ಖಾಸಗಿತನ ಕಾಪಡಾಬೇಕು .

8) ವೈದ್ಯರು ಯಾವ ನಿರ್ದಾರಕ್ಕು ಮುನ್ನ ರೋಗಿಯ ಸಂಬಂದಿಕರ ಒಪ್ಪಿಗೆ ಪಡೆಯಬೇಕು.

9) ಇನ್ನ ಮುಂದೆ ಪ್ರಾರಂಭವಾಗುವ ಖಾಸಗಿ ಲ್ಯಾಬ್ ಗಳು ಸರ್ಕಾರಿ ಆಸ್ಪತ್ರೆಯಿಂದ 200 ಮಿಟರ್ ದೂರದಲ್ಲಿ ಇರಬೇಕು.

ಖಾಸಗಿ ಆಸ್ಪತ್ರೆಗಳು ಬಡವ ಶ್ರೀಮಂತರೆನ್ನದೆ ರೋಗಿಗಳಿಂದ ಹಣ ಕೀಳವ ದಂಧೆ ನೆಡೆಸುತ್ತಿರುವ ಈ ಸಂದರ್ಭದಲ್ಲಿ ಅವರ ಹೆಡೆಮುರಿ ಕಟ್ಟಲು ನಮ್ಮ ಜನ ಪರ ಆರೊಗ್ಯ ಮಂತ್ರಿಗಳಾದ ರಮೇಶ್ ಕುಮಾರ ರವರು ತರಲು ಹೊರಟಿರುವ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರ ಕಾಯ್ದೆ ಯನ್ನು ನಾನು ಬೆಂಬಲಿಸುತ್ತೆನೆ ಹಾಗು ರಾಜ್ಯದ ಯಲ್ಲ ವರ್ಗದ ಜನರು ಈ ಆಸ್ಪತ್ರೆಗಳ ತೊಂದರೆಗೆ ಒಳಾಗಾಗಿದ್ದು ನಾವೆಲ್ಲರೂ ಆರೋಗ್ಯ ಮಂತ್ರಿ ರಮೇಶ ಕುಮಾರ್ ಹಾಗೂ ಕಾಯ್ದೆಯನ್ನು ಬೆಂಬಲಿಸೋಣ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment
Muralidhar says:

Nijavagalu e ondu kayde Insha janasamanyrigi upayogavaguthe e kaydege sampoorna bembala ede sir

To Top