fbpx
ದೇವರು

ಶ್ರೀ ಗುರು ರಾಘವೇಂದ್ರಸ್ವಾಮಿಗಳ ಮಂತ್ರಾಕ್ಷತೆಯ ಪವಾಡ ತಿಳಿಸೋ ಈ ಕಥೆ ಕೇಳಿದ್ರೆ ರಾಯರ ಮೇಲಿನ ಭಕ್ತಿ ಇನ್ನು ಜಾಸ್ತಿ ಆಗುತ್ತೆ !

ಶ್ರೀ ಗುರು ರಾಘವೇಂದ್ರಸ್ವಾಮಿಗಳು ಮಾಡಿದ ಈ ಪವಾಡಗಳನ್ನ ತಿಳ್ಕೊಂಡ್ರೆ ಮೈ ರೋಮಾಂಚನವಾಗುತ್ತೆ!

 

 

ಗುರು ಶ್ರೇಷ್ಠರಲ್ಲೇ ಗುರು ಸಾರ್ವಭೌಮರಾದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಕಲಿಯುಗದ ಕಾಮದೇನು, ಕಲ್ಪವೃಕ್ಷ. ರಾಯರ ಒಂದೊಂದು ಪವಾಡಗಳ ಬಗ್ಗೆ ಕೇಳಿದ್ರೆ ಮೈ ರೋಮಾಂಚನವಾಗುತ್ತೆ. ರಾಯರ ಮಹಿಮೆಯನ್ನು ಅರಿತು ಅವರನ್ನು ಪರೀಕ್ಷೆ ಮಾಡಲೋಗಿ ಎಷ್ಟೋ ಜನ ಅವರಿಗೆ ಶರಣಾಗಿದ್ದಾರೆ. ಕಷ್ಟದಿಂದ ಭಕ್ತರನ್ನ ಅನುಗ್ರಹಿಸೋ ಗುರುಗಳಿಗೆ ಎಲ್ಲಾ ಜಾತಿ ಧರ್ಮದವರು ತಲೆಬಾಗಿದ್ದಾರೆ. ಅವರು ಮಾಡಿರುವ ಅದ್ಬುತ ಪವಾಡಗಳಲ್ಲಿ ಒಂದನ್ನು ಇವತ್ತು ಹೇಳುತ್ತೇವೆ ಕೇಳಿ.

 

 

ಶ್ರೀ ರಾಘವೇಂದ್ರ ಸ್ವಾಮಿಗಳ ಹತ್ತಿರ ಹಲವು ವಿದ್ದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು.ಆ ವಿದ್ಯಾರ್ಥಿಗಳಲ್ಲಿ ಒಬ್ಬ ಬಡ ವಿದ್ದ್ಯಾರ್ಥಿಯು ತನ್ನ ವಿದ್ಯಾಭ್ಯಾಸ ಮುಗಿಸಿಕೊಂಡು ಹೋಗುವಾಗ ಗುರುಗಳ ಹತ್ತಿರ ಬಂದು. ತನ್ನ ಬಡತನದ ಕಷ್ಟವನ್ನು ಗುರುಗಳಿಗೆ ಹೇಳಿ ತನ್ನನ್ನು ಕಷ್ಟದಿಂದ ಅನುಗ್ರಹಿಸಬೇಕೆಂದು ಕೇಳಿಕೊಂಡನು. ಸ್ನಾನದ ಸಮಯದಲ್ಲಿದ್ದ ರಾಯರು ತಮ್ಮ ಬಳಿ ಆ ವಿದ್ಯಾರ್ಥಿಗೆ ಕೊಡಲು ಏನೂ ಇಲ್ಲ ಎಂದು ಹೇಳಿದರು.ಆಗ ಆ ವಿದ್ಯಾರ್ಥಿಯು “ತಾವು ಏನು ಕೊಟ್ಟರು ನನಗೆ ಮಹಾ ಪ್ರಸಾದವೆಂದು ಒಂದು ಹಿಡಿ ಮಂತ್ರಾಕ್ಷತೆಯನ್ನದರು ಕೊಡಿ”ಎಂದು ರಾಯರಲ್ಲಿ ಭಕ್ತಿಯಿಂದ ಬೇಡಿದನು.ಆಗ ರಾಯರು ಆ ಹುಡುಗನಿಗೆ ಒಂದು ಹಿಡಿ ಮಂತ್ರಾಕ್ಷತೆಯನ್ನು ಕೊಟ್ಟರು.

 

 

 

 

ರಾಯರು ಕೊಟ್ಟ ಮಂತ್ರಾಕ್ಷತೆಯನ್ನೆ ಮಹಾ ಪ್ರಸಾದ ವೆಂದು ಸ್ವೀಕರಿಸಿದ ವಿದ್ಯಾರ್ಥಿಯು ತನ್ನ ಊರಿನ ಕಡೆಗೆ ಹೊರಟನು.ದಾರಿಯಲ್ಲಿ ಕತ್ತಲಾಗಿದ್ದರಿಂದ ಒಂದು ಮನೆಯ ಜಗಲಿಯ ಮೇಲೆ ಆ ಮನೆಯ ಮಾಲಿಕರಲ್ಲಿ ಅಪ್ಪಣೆ ಪಡೆದು ಮಲಗಿದನು. ಆ ಸಮಯದಲ್ಲಿ ಮನೆಯ ಮಾಲಿಕನ ಹೆಂಡತಿ ತುಂಬು ಗರ್ಭಿಣಿಯಾಗಿದ್ದಳು. ಆ ದಿನ ಮಧ್ಯರಾತ್ರಿಯಲ್ಲಿ ಒಂದು ಪಿಶಾಚಿಯು ಆ ಮನೆಯೊಳಗೆ ಹೋಗಿ, ಜನಿಸಲಿರುವ ಮಗುವನ್ನು ಸಾಯಿಸಬೇಕೆಂದು ಅಲ್ಲಿಗೆ ಬಂದಿತು.

 

 

ಮನೆಯೊಳಗೇ ಪ್ರವೇಶಿಸಲು ಪ್ರಯತ್ನಿಸಿದಾಗ ಜಗಲಿಯ ಮ್ಯಾಲೆ ಮಲಗಿದ್ದ ಭಕ್ತನ ಬಳಿಯಿರುವ ಮಂತ್ರಾಕ್ಷತೆ ಬೆಂಕಿಯಂತೆ ಕಂಡು ಬಂದಿತು. ಇದರಿಂದ ಗಾಬರಿಗೊಂಡ ಪಿಶಾಚಿಯು ವಿದ್ಯಾರ್ಥಿಯನ್ನು ನೋಡಿ ಮಂತ್ರಾಕ್ಷತೆ ದೂರ ಎಸೆಯಲು ಹೇಳಿತು. ಪಿಶಾಚಿಯನ್ನು ನೋಡಿ ಹೆದರಿದ ವಿದ್ಯಾರ್ಥಿಯು ಆ ಮಂತ್ರಾಕ್ಷತೆಯನ್ನು ಆ ಪಿಶಾಚಿಯ ಮೇಲೆ ಎಸೆದನು.ಮಂತ್ರಾಕ್ಷತೆಯು ಪಿಶಾಚಿಯ ಮೇಲೆ ಬಿದ್ದ ತಕ್ಷಣ ಪಿಶಾಚಿಯು ಚೀರುತ್ತಾ ಅಲ್ಲೆ ಸುಟ್ಟು ಬೂದಿಯಾಯಿತು. ಅದರ ಚೀತ್ಕಾರವನ್ನು ಕೇಳಿದ ಮನೆ ಮಂದಿಯಲ್ಲ ಹೊರಗೆ ಬಂದು ಆಶ್ಚರ್ಯಗೊಂಡರು. ಅಷ್ಟರಲ್ಲೆ ಮನೆ ಮಾಲೀಕನ ಹೆಂಡತಿಗೆ ಮಗುವಾದ ಸಂತಸದ ಸುದ್ದಿ ತಿಳಿಯಿತು. ಹೀಗೆ ರಾಯರು ಕೊಟ್ಟ ಮಂತ್ರಾಕ್ಷತೆಯ ಶಕ್ತಿಯಿಂದ ದುಷ್ಟ ಪಿಶಾಚಿಯಶಕ್ತಿ ನಾಶವಾಯಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top