fbpx
ಜೀವನ ಕ್ರಮ

ಶಾಸ್ತ್ರದ ಪ್ರಕಾರ ಈ ಸಮಯದಲ್ಲಿ ಕಾಲು ತೊಳೆಯಬೇಕು ಇಲ್ಲ ಅಂದ್ರೆ ಮನೆಗೆ ದರಿದ್ರ ಇದರ ಹಿಂದೆ ಇರೋ ವೈಜ್ಞಾನಿಕ ಕಾರಣಗಳು ತಿಳ್ಕೊಳ್ಳೆಬೇಕು

ಯಾವ ಯಾವ ಸಮಯದಲ್ಲಿ ಕಾಲುಗಳನ್ನು ತೊಳೆಯಬೇಕು ? ಇದಕ್ಕೆ ವೈಜ್ಞಾನಿಕ ಕಾರಣಗಳು ಏನೇನು ? ಎಂದು ನಿಮಗೆ ಗೊತ್ತಾ ?

 

 

ಸಾಮುದ್ರಿಕ ಶಾಸ್ತ್ರದಲ್ಲಿ ಕಾಲು ,ಕೈ, ಮಸ್ತಿಷ್ಕ ಹೀಗೆ ಎಲ್ಲಾ ಭಾಗಗಳಿಗೂ ಸಂಬಂಧಿಸಿದಂತೆ ಒಂದೊಂದು ಭವಿಷ್ಯವಿದೆ. ಬೇರೆ ಬೇರೆ ರೀತಿಯ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಬೇರೆ ಬೇರೆ ವಿಷಯಗಳಿವೆ ಆದರೆ  ಅದು ಕೆಲವು ಜನಗಳಿಗೆ ಮಾತ್ರ ತಿಳಿದಿದೆ. ಯಾವ ಸಂದರ್ಭದಲ್ಲಿ ನಾವು ಕಾಲು ತೊಳೆಯುವುದರಿಂದ ಏನು ಪ್ರಯೋಜನ ? ಎಂದು  ತಿಳಿಯೋಣ….

ಮನೆಯೊಳಗೆ ಪ್ರವೇಶ ಮಾಡುವ ಮುನ್ನ.

 

 

ನೀವು ಹೊರಗಡೆ ಸುತ್ತಾಡಿಕೊಂಡು ಮನೆಯ ಒಳಗೆ ಪ್ರವೇಶ ಮಾಡುವುದರಿಂದ ನಿಮ್ಮ ಮನೆಯೊಳಗೆ ನೀವೇ ನಕಾರಾತ್ಮಕ ಶಕ್ತಿಯನ್ನು ತೆಗೆದುಕೊಂಡು ಬಂದಂತಾಗುತ್ತದೆ. ನಿಮ್ಮ ಜೊತೆ  ಅದೂ ಸಹ ಮನೆಯೊಳಗೆ ಪ್ರವೇಶ  ಮಾಡುತ್ತದೆ. ನೀವು ಕಾಲು ತೊಳೆದು ಪ್ರವೇಶ ಮಾಡಿದರೆ ನಕಾರಾತ್ಮಕ ಶಕ್ತಿಯು ತೊಲಗಿ ಧನಾತ್ಮಕ ಶಕ್ತಿಯ ಜೊತೆಗೆ ನೀವು ಮನೆಯನ್ನು ಪ್ರವೇಶಿಸುತ್ತೀರಿ. ಆದ್ದರಿಂದ ಮನೆಯೊಳಗೆ ಪ್ರವೇಶ ಮಾಡುವ ಮುನ್ನ ಕಾಲುಗಳನ್ನು ಖಚಿತವಾಗಿ ತೊಳೆದುಕೊಂಡು ಹೋಗಬೇಕು.

ವೈಜ್ಞಾನಿಕ ಕಾರಣ.

ಇನ್ನೂ ವೈಜ್ಞಾನಿಕವಾಗಿ ಹೇಳುವುದಾದರೆ ಹೊರಗಿನಿಂದ ಬಂದಾಗ ಹೊರಗಿನ ಧೂಳು, ಕೊಳೆ ದೇಹದಲ್ಲಿ ಸೇರಿಕೊಳ್ಳುತ್ತದೆ. ಅದು ನಿಮ್ಮ ಜೊತೆಗೆ ಮನೆಯ ಪ್ರವೇಶ ಮಾಡುತ್ತದೆ.ಅಲ್ಲದೆ ಕೆಲವು ಕೀಟಾಣುಗಳನ್ನು ಸಹ ಆ ಧೂಳಿನಲ್ಲಿ ನೀವು ಮನೆಯೊಳಗೆ ತೆಗೆದುಕೊಂಡು ಬರುತ್ತೀರಾ… ಅದರಿಂದ ಅನೇಕ ಖಾಯಿಲೆಗಳು ಸಹ ಉಂಟಾಗುವ ಸಾಧ್ಯತೆ ಇದೆ . ಆದ್ದರಿಂದ ಕಾಲು ತೊಳೆದು ಮನೆಯ ಒಳಗೆ ಪ್ರವೇಶ ಮಾಡಬೇಕು .

ಪೂಜೆ ಮಾಡುವ ಮುನ್ನ.

 

 

ಪೂಜೆ ಎಂಬುದು ಒಂದು ಪವಿತ್ರ ಕ್ರಿಯೆಯಾಗಿದೆ. ಈ ಕಾರಣದಿಂದಾಗಿ ಅದನ್ನು ಸ್ವಚ್ಛ ತನು ಮನಸ್ಸಿನಿಂದ ಮಾಡಬೇಕೆಂದು ಹಿರಿಯರು ಹೇಳುತ್ತಾರೆ. ಇದರಿಂದ ಜೀವನದಲ್ಲಿ ಯಶಸ್ಸು, ಸಂತೋಷ ಮತ್ತು ಮನಸ್ಸಿಗೆ ನೆಮ್ಮದಿ ಸಿಗುವುದು. ಪೂಜೆಗೂ ಮುನ್ನ ಕಾಲು ತೊಳೆದರೆ ಏಕಾಗ್ರತೆ ಹೆಚ್ಚುತ್ತದೆ ಹಾಗೂ ಪೂಜೆಯ ಪರಿಣಾಮ ಬೇಗನೆ  ದೊರಕುತ್ತದೆ .

ವೈಜ್ಞಾನಿಕ ಕಾರಣ.

ಹೆಚ್ಚಾಗಿ ಕೆಲಸ ಮಾಡುವುದರಿಂದ ಮೈ ,ಕೈ ಮತ್ತು  ಮಾಂಸ ಖಂಡಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ಕಾಲನ್ನು ತೊಳೆಯುವುದರಿಂದ ರಕ್ತ ಸಂಚಾರ ಹೆಚ್ಚಾಗಿ ಅಗುವುದರ ಜೊತೆಗೆ  ಆಯಾಸವೂ ಸಹ ದೂರವಾಗುತ್ತದೆ. ಇದರಿಂದ ಧ್ಯಾನ ಮಾಡಲು ಸುಲಭವಾಗುತ್ತದೆ .

ಯೋಗ ಮಾಡುವ ಮುನ್ನ.

 

 

ಯೋಗದ ಪೂರ್ತಿ ಲಾಭ ಪಡೆಯಲು ಮೊದಲಿಗೆ ಕಾಲು ತೊಳೆಯಬೇಕು ನಂತರ ಯೋಗಾಭ್ಯಾಸ ಆರಂಭಿಸಬೇಕು. ಯೋಗ ನಮ್ಮ ಮನಸ್ಸನ್ನು ಶರೀರದ ಜೊತೆಗೆ ಜೋಡಿಸುತ್ತದೆ. ಇದಕ್ಕಾಗಿ ನಿಮಗೆ ಸಕಾರಾತ್ಮಕ ಶಕ್ತಿ  ಬೇಕಾಗುವುದು.

 ವೈಜ್ಞಾನಿಕ ಕಾರಣ .

ಪಾದಗಳ ಜೊತೆಗೆ ದೇಹದ ನರಮಂಡಲದ ಜೀವಕೋಶವೂ ನೇರವಾಗಿ ಜೋಡಣೆಯಾಗಿರುತ್ತದೆ. ಇದು ಶಕ್ತಿಯನ್ನು ನಿಯಂತ್ರಣ ಮಾಡುತ್ತದೆ. ಆದ್ದರಿಂದ  ಯೋಗಕ್ಕೂ ಮುನ್ನ ಕಾಲು ತೊಳೆಯುವುದು ಉತ್ತಮ ಇದರಿಂದ ನಿಮಗೆ ಹಲವಾರು ಲಾಭಗಳಿವೆ .

ಮಲಗುವ ಮುನ್ನ.

 

ಮಲಗುವ ಮುನ್ನ ಕಾಲನ್ನು ತೊಳೆದು ಮಲಗುವುದರಿಂದ ನಕಾರಾತ್ಮಕ ಶಕ್ತಿ ನಿಮ್ಮ ದೇಹದಿಂದ ದೂರವಾಗುತ್ತದೆ. ಇದರಿಂದ ನಿಮಗೆ ಬೇಗನೆ ಚೆನ್ನಾಗಿ ನಿದ್ದೆ ಬರುತ್ತದೆ. ಅಲ್ಲದೆ ನಿದ್ರೆಯಲ್ಲಿ ಕೆಟ್ಟ ಕನಸುಗಳು ಬೀಳುವುದಿಲ್ಲ.

 ವೈಜ್ಞಾನಿಕ ಕಾರಣ.

ಚೆನ್ನಾಗಿ ನಿದ್ರೆ ಮಾಡಿದರೆ ನಿಮ್ಮ ಮುಂದಿನ ದಿನ ಪೂರ್ತಿಯಾಗಿ ನೀವು ಖುಷಿಯಾಗಿರಬಹುದು . ಆದುದರಿಂದ ಮಲಗುವ ಮುನ್ನ ಕೈ, ಕಾಲು ತೊಳೆದು ಮಲಗಿ ಇದರಿಂದ ಎಲ್ಲ ಸಮಸ್ಯೆಗಳು ದೂರವಾಗಿ ಚೆನ್ನಾಗಿ ನಿದ್ದೆ ಮಾಡಲು ಸಾಧ್ಯವಾಗುತ್ತದೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top