fbpx
ದೇವರು

ಈ ದೇವಸ್ಥಾನದ ಮುಂದೆ ಹೋಗುವ ರೈಲುಗಳ ವೇಗ ಕಡಿಮೆಯಾಗಿ ಅಪಘಾತ ತಪ್ಪುತ್ತಂತೆ ಇದರ ಹಿಂದೆ ಇದೆ ಶಕ್ತಿ ಶಾಲಿ ಹನುಮಂತನ ರೋಚಕ ಪವಾಡ

ರೈಲಿನ ಅಪಘಾತಗಳನ್ನು ತಡೆಯುವ ಹನುಮಾನ್ ದೇವಾಲಯ.

 

ಪ್ರಪಂಚದಲ್ಲಿ ಅನೇಕ ರೈಲುಗಳಿವೆ. ಒಂದೊಂದು ರೈಲಿನ ವೇಗವನ್ನು ಮಾತಿನಲ್ಲಿ ಹೇಳಲಾಗುವುದಿಲ್ಲ . ಕ್ಯಾಮೆರಾ ಕಣ್ಣಿಗೂ ಸಿಗದಂತೆ ಈ ರೈಲುಗಳು ಚಲಿಸುತ್ತವೆ. ಅವುಗಳ ಎದುರಿಗೆ ಯಾರೇ ಬ೦ದರೂ, ಏನೇ ಅಡ್ಡಿ ಬಂದರೂ,  ರೈಲು ಹಿಂದೆ ಸರಿಯುವ ಮಾತೇ ಇಲ್ಲ .

 

 

ಇಲ್ಲಿ ಬಂದು ದೇವಸ್ಥಾನದ ಮುಂದೆ  ಎಷ್ಟೇ ವೇಗದಲ್ಲಿ ಬಂದರೂ ರೈಲುಗಳ ವೇಗ ತಂತಾನೆ ಕಡಿಮೆಯಾಗುತ್ತದೆ. ಸಿಗ್ನಲ್ ಪ್ರಭಾವದಿಂದ ಬಣ್ಣದ ಬೆಳಕಿನಿಂದ ಈ ರೀತಿ ರೈಲುಗಳ ವೇಗ ಕಡಿಮೆಯಾಗಿ ನಿಲ್ಲುತ್ತವೆ ಎಂದು ನೀವು ಭಾವಿಸಿದರೆ ಅದು ತಪ್ಪು. ಅಂತಹ ಯಾವುದೇ ಬಣ್ಣದ ಬೆಳಕಿನ ಸಿಗ್ನಲ್ಗಳು ಇರುವುದಿಲ್ಲ. ಈ ಒಂದು ದೇವಸ್ಥಾನದ ಮುಂದೆ ಬಂದ ನಂತರ ರೈಲಿನ ವೇಗ ಕಡಿಮೆಯಾಗುತ್ತದೆ. ಅದಕ್ಕೆ ಕಾರಣವೇನು ? ಎಂಬುದನ್ನು ಆ ದೈವ ಶಕ್ತಿಯೇ ? ಅಥವಾ ಯಾರಾದರೂ ಬೇಕು ಅಂತಲೇ ಏನಾದರೂ ಮಾಡಿರಬಹುದೆ ? ಇದರ ಬಗ್ಗೆ  ತಿಳಿದುಕೊಳ್ಳೋಣ…..

ಮಧ್ಯಪ್ರದೇಶದ ರಾಜ್ಯದಲ್ಲಿರುವ ಶಾಜಾಪುರ ಜಿಲ್ಲೆಯ ಬಳಿ ಬೋಲಾಯಿ ಎಂಬ ಗ್ರಾಮವಿದೆ. ಈ ಗ್ರಾಮದ ಬಳಿ ತಂತಾನೇ ರೈಲಿನ ವೇಗ ಕಡಿಮೆಯಾಗುತ್ತದೆ. ಹೀಗೆ ರೈಲಿನ ವೇಗ ತಂತಾನೆ ಒಂದು ನಿರ್ದಿಷ್ಟವಾದ ಸ್ಥಳದಲ್ಲಿ , ಯಾಕೆ ಹೀಗೆ ಕಡಿಮೆಯಾಗುತ್ತದೆ ?.. ಎಂದರೆ ಇದು ಹನುಮಂತ ದೇವರಿಂದ ಮಾತ್ರ ಸಾಧ್ಯ. ಹನುಮಂತನ ದೇವಸ್ಥಾನಕ್ಕೂ ಮತ್ತು   ವೇಗ ಕಡಿಮೆ ಆಗುವುದಕ್ಕೂ ಕಾರಣವೇನು  ?ಎಂದು ಯೋಚಿಸುತ್ತಿದ್ದೀರಾ… ಹೌದು ಹಾಗೆ ಆಗಲು ಸಾಕ್ಷಾತ್ ಹನುಮಂತ ದೇವರ ಶಕ್ತಿ ಕಾರಣ ಎಂದು ಹೇಳಬಹುದು.

 

 

ಈ ದೇವಸ್ಥಾನವು ಸುಮಾರು 600  ವರ್ಷಗಳ ಹಿಂದೆಯೇ ನಿರ್ಮಾಣವಾಗಿದೆಯಂತೆ ಎಂದು ಹೇಳುತ್ತಾರೆ. ಅಷ್ಟೇ ಅಲ್ಲ ಇಲ್ಲಿ ವಿನಾಯಕ ಮತ್ತು ಹನುಮಂತ ಒಟ್ಟಿಗೆ ಇರುವುದು ಸಹ ಆಶ್ಚರ್ಯಕಾರಿ ವಿಷಯವೇ ಒಂದು ದಿನ ಆ ಮಾರ್ಗದಲ್ಲಿ ಹೋಗುತ್ತಿರುವ ಒಂದು ಸರಕು ಸಾಗಣೆಯ ರೈಲು ಆ ದೇವಸ್ಥಾನದ ಬಳಿಯಿಂದ ಹಾದು ಹೋಗುತ್ತಿತ್ತು.

ಅಲ್ಲಿ ಜೊತೆಗಾರರಾದ ಇಬ್ಬರು ನಿರ್ವಾಹಕನು ಇರುತ್ತಾರೆ. ಆ ರೈಲಿನ ಒಬ್ಬ ನಿರ್ವಾಹಕನು ಈ ದೇವಸ್ಥಾನದ ವಿಶೇಷತೆಯನ್ನು ಹೇಳುತ್ತಾನೆ. ಇನ್ನೊಬ್ಬ ನಿರ್ವಾಹಕನು ಈ ಮಾತನ್ನು ಕೇಳದೆ ಅಣಕಿಸಿ ಇಯಾಳಿಸಿಕೊಂಡು ಗಹಗಹಿಸಿ ನಗುತ್ತಾನೆ.ಇದಾದ ಸ್ವಲ್ಪ ಸಮಯದಲ್ಲೇ ಆ ಸರಕು ಸಾಗಣೆಯ ರೈಲಿಗೆ ಅಪಘಾತವಾಗುತ್ತದೆ. ಎದುರಿಗೆ ಬರುತ್ತಿದ್ದ ಇನ್ನೊಂದು ರೈಲಿಗೆ ಡಿಕ್ಕಿಯಾಗಿ ಅಪಘಾತವಾಗುತ್ತದೆ. ಆಶ್ಚರ್ಯವೇನೆಂದರೆ ಅದರಲ್ಲಿರುವ ಇಬ್ಬರೂ ನಿರ್ವಾಹಕರಿಗೆ ಮಾತ್ರ ಏನೂ ಆಗುವುದಿಲ್ಲ. ಅವರು ಕ್ಷೇಮವಾಗಿ ಹೊರಗಡೆ ಬಿದ್ದಿದ್ದರು ನಂತರ ಕೂಡಲೇ ಅವರು ದೇವಸ್ಥಾನದ ಬಳಿಗೆ ಹೋಗಿ ಭಕ್ತಿಯಿಂದ ಕ್ಷಮಿಸು ಎಂದು  ಬೇಡಿಕೊಳ್ಳುತ್ತಾರೆ.

 

 

ಅಷ್ಟೇ ಅಲ್ಲ ಆತನ ಮನೆಯ ಮುಂದೆಯೂ ಸಹ ಒಂದು ಸಣ್ಣ ದೇವಸ್ಥಾನವನ್ನು ಕೂಡ ಈಗ ನಿರ್ಮಿಸಿದ್ದಾರೆ. ಈ ಘಟನೆಯ ನಂತರ ಆ ರೈಲು ದೇವಸ್ಥಾನದ ಮುಂದೆ ಬಂದ ಮೇಲೆ ವೇಗ ಕಡಿಮೆಯಾಗುತ್ತದೆ. ಹೀಗೆ ಏಕೆ ಆಗುತ್ತದೆ ಎಂದು ಅಧಿಕಾರಿಗಳು ಯೋಚನೆ ಮಾಡುತ್ತಿದ್ದರು.ಹೀಗೆ ಎಷ್ಟು ಯೋಚನೆ ಮಾಡುತ್ತಿದ್ದರೂ ಸಹ ಅವರಿಗೆ ಸಮಾಧಾನ ಸಿಗಲಿಲ್ಲ. ನಿರ್ವಾಹಕ ವೇಗವನ್ನು ಕಡಿಮೆ ಮಾಡುತ್ತಿದ್ದಾನೆ ಎಂದು ತಿಳಿದು ಬಂತು .ಮತ್ತು ಹಾಗೆ ಕಡಿಮೆ ಮಾಡುವುದಕ್ಕೆ ಕಾರಣಗಳು ಏನೆಂದು ಕೇಳುತ್ತಾರೆ. ಸರಕು ಸಾಗಣೆ ರೈಲಿನಲ್ಲಿ ನಡೆದ ಘಟನೆಯೇ ಕಾರಣವೆಂದು… ಅದರ ಮಹಿಮೆಯನ್ನು ಹೇಳುತ್ತಾರೆ.

ಅಷ್ಟೇ ಅಲ್ಲ ಒಂದು ದಿನ ರೈಲಿನ ಪಟ್ಟಿಗಳು ಮುರಿದು ಹೋದರೂ ಸಹ ರೈಲು ಸಾಧಾರಣವಾಗಿಯೇ ಚಲಿಸಿ ಯಾವುದೇ ಅಪಘಾತವಾಗುವುದಿಲ್ಲ ಎಂದು ಹೇಳಿದರು. ಅಂದಿನಿಂದ ಆ ದೇವಸ್ಥಾನದ ಮುಂದೆ ಬಂದಾಗ ರೈಲಿನ ವೇಗ ಕಡಿಮೆಯಾಯಿತು. ಇನ್ನೂ ಆ ದೇವಸ್ಥಾನದ ಮುಂದೆ ವೇಗ ಕಡಿಮೆ ಮಾಡಿದರೆ ಆ ಹನುಮಂತನೇ ಅಪಘಾತಗಳನ್ನು ತಪ್ಪಿಸುತ್ತಾನೆ ಎಂಬುದು ಅಲ್ಲಿಯ ಜನರ ನಂಬಿಕೆಯಾಗಿದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top