fbpx
ಆರೋಗ್ಯ

ಚಳಿಗಾಲದ ಸಾಮಾನ್ಯ ಸಮಸ್ಯೆ ಕೆಮ್ಮು ನೆಗಡಿ ಥಟ್ ಅಂತ ಹೋಗ್ಬೇಕಂದ್ರೆ ಈ 6 ಆಯುರ್ವೇದದ ಮನೆಮದ್ದುಗಳು ಬಳಸಿ ಸರಿ ಮಾಡ್ಕೊಳ್ಳಿ

 

ಮಳೆಗಾಲ, ಚಳಿಗಾಲದಲ್ಲಿ ಬರುವ ಕೆಮ್ಮು ನೆಗಡಿ ಸರ್ವೇ ಸಾಮಾನ್ಯ. ಬೇಸಿಗೆ ಕಾಲದಲ್ಲೂ ಸಹ ಇವುಗಳಿ೦ದ ಸ೦ಪೂರ್ಣ ಮುಕ್ತಿಯೇನಿಲ್ಲ. ಅವುಗಳಿಗೆ ಇಲ್ಲಿವೆ
ಕೆಲವು ಸುಲಭ ಮನೆಮದ್ದುಗಳು:

ಮೆಣಸು ಮತ್ತು ಜೇನು ತುಪ್ಪ :

 

 

ಒಂದು ಲೋಟ ನೀರನ್ನು ಕುದಿಸಿ ಅದಕ್ಕೆ ಕಾಲು ಚಮಚ ಮೆಣಸು ಪುಡಿ ಮತ್ತು ಜೇನುತುಪ್ಪ ಬೆರೆಸಿ , 10 ನಿಮಿಷ ಆದ ಮೇಲೆ ಸ್ಟವ್ ನಿಂದ ಇಳಿಸಿ ,
ಆರಿಸಿ ಅರ್ಧ ಬಿಸಿ ಇರುವಾಗಲೇ ಸೇವಿಸಿ ದಿನಕ್ಕೆ ಎರಡು ಬಾರಿ ಹೀಗೆ ಮಾಡಿದರೆ ಕೆಮ್ಮು ಮಾಯ.

ಶುಂಠಿ ಕಷಾಯ :

 

 

ಸಣ್ಣಗೆ ಕತ್ತರಿಸಿದ ಶುಂಠಿ ಒಂದು ಚಮಚ ,ಕಾಲು ಚಮಚ ಮೆಣಸು ಪುಡಿ ಮತ್ತು ಒಂದು ಚಮಚ ಜೇನುತುಪ್ಪ ಇಷ್ಟನ್ನು ಒಂದು ಲೋಟ ನೀರಿಗೆ ಹಾಕಿ ಕುದಿಯಲು ಬಿಡಿ 10 ನಿಮಿಷ ಆದ ಮೇಲೆ ಸ್ಟವ್ ನಿಂದ ಇಳಿಸಿ , ಆರಿಸಿ ಅರ್ಧ ಬಿಸಿ ಇರುವಾಗಲೇ ಸೇವಿಸಿ ದಿನಕ್ಕೆ ಎರಡು ಬಾರಿ ಹೀಗೆ ಮಾಡಿದರೆ ಕೆಮ್ಮು ಮಾಯ.

 

ವೀಳ್ಯದ ಎಲೆ :

 

 

ಒಂದು ವೀಳ್ಯದ ಎಲೆ ತೆಗೆದು ಕೊಂಡು ಅದಕ್ಕೆ ಒಂದು ಬಸಳೆ ಎಲೆಯನ್ನು ಸೇರಿಸಿ , ಒಂದು ಸಣ್ಣ ತುಂಡು ಶುಂಠಿ ಮತ್ತು ಒಂದು ಲವಂಗ ಸೇರಿಸಿ ಮಡಸಿ ಬಾಯಲ್ಲಿ ಜಗಿಯಿರಿ ಹೀಗೆ ಮಾಡಿದರೆಕೆಮ್ಮು ಬೇಗ ವಾಸಿಯಾಗುತ್ತದೆ.

 

ಶು೦ಠಿ, ಲವ೦ಗ, ಹಿಪ್ಪಲಿ

 

ಸ್ವಲ್ಪಹಸಿ ಶು೦ಠಿ, 1 ಲವ೦ಗ, ಹಿಪ್ಪಲಿ, 2-4 ಕಾಳು ಮೆಣಸು, ಒ೦ದು ಸಣ್ಣ ತು೦ಡು ಬೆಲ್ಲ, 2 ಕಾಳು ಹರಳುಪ್ಪು ಇವಿಷ್ಟನ್ನು ಒ೦ದು ಲೋಟದಷ್ಟು ನೀರಿನಲ್ಲಿ ಬಿಸಿ ಮಾಡಬೇಕು. ಅದು ಕಾಲು ಲೋಟದಷ್ಟಾಗುವವರೆಗೂ ಕುದಿಸಬೇಕು. ನ೦ತರ ಅದನ್ನು ಶೋಧಿಸಿ ಕುಡಯುವುದರಿ೦ದ ನೆಗಡಿ ಕೆಮ್ಮು ನಿಯ೦ತ್ರಣಕ್ಕೆ ಬರುತ್ತವೆ.

 

 

ಅರಿಸಿನ ಹಾಲು

 

ಚೆನ್ನಾಗಿ ನೀರು ಕುಡಿಯುವುದು (ಕಾದಾರಿದ ನೀರು) ಉರಿಶೀತಕ್ಕೆ ರಾಮಬಾಣ. ರಾತ್ರಿ ಮಲಗುವಾಗ ಬಿಸಿಯಾದ ಹಾಲಿಗೆ ಅರಿಸಿನ, ೨ ಕಾಳು ಮೆಣಸಿನ ಪುಡಿ, ಕೆ೦ಪು ಕಲ್ಲು ಸಕ್ಕರೆ ಸೇರಿಸಿ ಬಿಸಿ ಬಿಸಿಯಾಗಿಯೇ ಸೇವಿಸುವುದು ಕೆಮ್ಮು ಶೀತಕ್ಕೆ ಉಚಿತ ಮದ್ದು.

 

 

ಶುಂಠಿ ಕಷಾಯ

 

ಒಣ ಶುಂಠಿಯನ್ನು ತುಂಡು ಮಾಡಿ ಅಥವಾ ಜಜ್ಜಿಕೊಳ್ಳಿ. ಕರಿಮೆಣಸು, ಜೀರಿಗೆ ಮತ್ತು ಕೊತ್ತಂಬರಿ ಬೀಜಗಳನ್ನು ಪತ್ಯೇಕವಾಗಿ ಹುರಿದಿಟ್ಟುಕೊಂಡು ಅದಕ್ಕೆ ಒಣ ಶುಂಠಿ ಹಾಕಿ ಒರಳು ಕಲ್ಲಿನಲ್ಲಿ ನುಣ್ಣಗೆ ಪುಡಿಮಾಡಿಟ್ಟುಕೊಳ್ಳಿ.  ಈ ಪುಡಿ ಮಾಡಿಟ್ಟುಕೊಂಡ ಮಿಶ್ರಣವನ್ನು ಬಾಟಲಲ್ಲಿ ತೆಗೆದಿಟ್ಟುಕೊಂಡು ಯಾವಾಗ ಬೇಕೆಂದಾಗ ಕಷಾಯ ತಯಾರಿಸಲು ಉಪಯೋಗಿಸಬಹುದು.

 


ಸ್ಟೌ ಮೇಲೆ ನಾಲ್ಕು ಕಪ್ಪಿನಷ್ಟು ನೀರಿಟ್ಟು ಕುದಿಸಿ. ನೀರು ಕುದಿಯುತ್ತಿರುವಾಗಲೇ ನಿಂಬೆ ಹಣ್ಣಿನ ರಸ, ಉಪ್ಪು, ಪುಡಿ ಮಾಡಿದ ಬೆಲ್ಲ ಮತ್ತು ಮೇಲೆ ತಯಾರಿಸಿಕೊಂಡ ಪುಡಿಯನ್ನು ಹಾಕಿ ಮತ್ತು ಹತ್ತು ನಿಮಿಷ ಕುದಿಸಿ. ಶುಂಠಿ ಕಷಾಯ ಸಿಹಿಯಾಗಿರಬೇಕಿದ್ದರೆ ಕುದಿಸುವಾಗ ಕೆಂಪು ಕಲ್ಲುಸಕ್ಕರೆ ಸೇರಿಸಬಹುದು. ಕುದಿಸಿ ಇಳಿಸಿದ ನಂತರ ಸೋಸಿಕೊಂಡು ಬಿಸಿಯಿರುವಾಗಲೇ ಹಾಲು ಸೇರಿಸಿ ಅಥವಾ ಹಾಲು ಸೇರಿಸದೆಯೇ ಕುಡಿಯಿರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top