fbpx
ಭವಿಷ್ಯ

ನವೆಂಬರ್ 17 : ನಿತ್ಯಭವಿಷ್ಯ ಮತ್ತೆ ಪಂಚಾಂಗ

ನವೆಂಬರ್ 17 : ನಿತ್ಯಭವಿಷ್ಯ ಮತ್ತೆ ಪಂಚಾಂಗ.

 

 

ಶುಕ್ರವಾರ, ೧೭ ನವೆಂಬರ್ ೨೦೧೭
ಸೂರ್ಯೋದಯ : ೦೬:೨೨
ಸೂರ್ಯಾಸ್ತ : ೧೭:೪೬
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಕಾರ್ತಿಕ
ಪಕ್ಷ : ಕೃಷ್ಣ ಪಕ್ಷ
ತಿಥಿ : ಚತುರ್ದಶೀ
ನಕ್ಷತ್ರ : ಸ್ವಾತಿ
ಯೋಗ : ಸೌಭಾಗ್ಯ
ಪ್ರಥಮ ಕರಣ : ಶಕುನಿ
ಸೂರ್ಯ ರಾಶಿ : ವೃಶ್ಚಿಕ
ಅಭಿಜಿತ್ ಮುಹುರ್ತ : ೧೧:೪೧ – ೧೨:೨೭
ಅಮೃತಕಾಲ : ೦೭:೪೨ – ೦೯:೨೫

ರಾಹು ಕಾಲ: ೧೦:೩೯ – ೧೨:೦೪
ಗುಳಿಕ ಕಾಲ: ೦೭:೪೮ – ೦೯:೧೩
ಯಮಗಂಡ: ೧೪:೫೫ – ೧೬:೨೦

 

ಮೇಷ (Mesha)

ಸಮಯೋಚಿತವಾಗಿ ತೆಗೆದುಕೊಂಡ ನಿರ್ಧಾರ ಪ್ರಶಂಸೆಗೆ ಪಾತ್ರವಾಗಲಿದೆ. ನೆಮ್ಮದಿಯಿಂದ ಪ್ರಯಾಣ ಮಾಡುವಿರಿ. ಹಿರಿಯರ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಊಟ-ಉಪಚಾರಗಳಲ್ಲಿ ಅಲಕ್ಷ್ಯ ಬೇಡ.

 

 

ವೃಷಭ (Vrushabha)

ನೂತನ ವ್ಯಕ್ತಿಗಳ ಪರಿಚಯ. ಉತ್ತಮ ಆದಾಯವನ್ನು ಹೊಂದುವಿರಿ. ದಲ್ಲಾಲಿಗಳಿಗೆ ವ್ಯವಹಾರದಲ್ಲಿ ಉತ್ತಮ ಲಾಭ ಬರುವುದು. ಸಮಸ್ಯೆಗಳನ್ನು ಹಿರಿಯರ ಮಧ್ಯಸ್ಥಿಕೆಯಲ್ಲಿ ಬಗೆಹರಿಸಿಕೊಳ್ಳುವುದು ಒಳ್ಳೆಯದು. ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುವುದು.

 

ಮಿಥುನ (Mithuna)

ವಿಶೇಷ ಸಾಧನೆಯೊಂದು ನಿಮ್ಮಿಂದಾಗಲಿದ್ದು ಅದಕ್ಕೆ ಜನರ ಪೂರಕ ಪ್ರತಿಕ್ರಿಯೆ ಉಂಟಾಗುವುದು. ಹಮ್ಮಿಕೊಂಡ ಕಾರ್ಯದಲ್ಲಿ ಯಶಸ್ಸು ದೊರೆಯುವುದು. ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಕಾಣುವಿರಿ. ದೂರ ಪ್ರಯಾಣವನ್ನು ಮುಂದೂಡುವುದು ಒಳ್ಳೆಯದು.

 

ಕರ್ಕ (Karka)

ಹಮ್ಮಿಕೊಂಡ ಕಾರ್ಯಗಳಿಗೆ ಅಡೆತಡೆಯುಂಟಾಗುವ ಸಂಭವ. ವ್ಯಾಪಾರ ವ್ಯವಹಾರಸ್ಥರಿಗೆ ತಕ್ಕಮಟ್ಟಿಗೆ ಲಾಭಾಂಶ ಎದುರಾಗುವುದು. ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು.

 

ಸಿಂಹ (Simha)

ಗೃಹ ಕೈಗಾರಿಕೆಗೆ ಹೆಚ್ಚು ಒತ್ತು ಕೊಡುವುದರಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಆದಾಯವನ್ನು ತಂದುಕೊಡುವುದು. ನಿಮ್ಮ ಜನಪ್ರಿಯತೆ ಹೆಚ್ಚಾಗುವ ಸಂದರ್ಭವಿದೆ. ಆರ್ಥಿಕ ಸ್ಥಿತಿಯು ಸುಧಾರಣೆಗೊಳ್ಳುವುದು.

 

ಕನ್ಯಾರಾಶಿ (Kanya)

ಸಂಪಾದನೆಗಿಂತ ವೆಚ್ಚ ಹೆಚ್ಚಾಗುವುದು. ಮಾನಸಿಕ ಒತ್ತಡಗಳಿಂದ ಕೆಲಸ ಕಾರ್ಯಗಳಲ್ಲಿ ತಪ್ಪು ನುಸುಳುವ ಸಾಧ್ಯತೆ ಇರುವುದು. ಆದಷ್ಟು ತಾಳ್ಮೆಯಿಂದ ಕೆಲಸ ಕಾರ್ಯಗಳಲ್ನು ಪೂರೈಸಿಕೊಳ್ಳಿ. ಹಲವು ದಿನ ಮೌನವಾಗಿರುವುದು ಕ್ಷೇಮ.

 

ತುಲಾ (Tula)

ಇಂದು ಉತ್ಸಾಹ ಮತ್ತು ಆನಂದ ಹೆಚ್ಚಾಗಲಿದೆ. ಸಂಗಾತಿಯು ನಿಮ್ಮ ಯೋಜನೆಗಳಿಗೆ ಪೂರಕವಾಗಿ ಸ್ಪಂದಿಸುವರು. ಜೀವನ ಮತ್ತು ವೃತ್ತಿಯ ಆಕಾಂಕ್ಷೆಗಳು ಏರುಗತಿಯಲ್ಲಿ ಸಾಗುವುದು.

 

ವೃಶ್ಚಿಕ (Vrushchika)

ವೈದ್ಯ ವೃತ್ತಿಯಲ್ಲಿರುವವರಿಗೆ ಉತ್ತಮ ದಿನ. ನೀವು ನೀಡಿದ ಟ್ರೀಟ್‌ಮೆಂಟಿನಿಂದ ರೋಗಿಯು ಗುಣಮುಖನಾಗಿ ನಿಮ್ಮನ್ನು ಹರಸುವರು. ಇತರರು ನಿಮ್ಮ ಕೈಗುಣವನ್ನು ಕೊಂಡಾಡುವರು. ಹಣಕಾಸಿನ ವ್ಯವಹಾರಗಳನ್ನು ದಕ್ಷತೆಯಿಂದ ಮಾಡುವಿರಿ.

 

ಧನು ರಾಶಿ (Dhanu)

ವಾಣಿಜ್ಯ ರಂಗದವರಿಗೆ ಹೆಚ್ಚಿನ ಲಾಭ. ಗೆಳೆಯರಿಂದ ಬಂಧುಗಳಿಂದ ಸಹಕಾರ ದೊರೆಯುವುದು. ನಿಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಗೆಳೆಯರ ಮುಂದೆ ಹಂಚಿಕೊಳ್ಳಿರಿ.

 

ಮಕರ (Makara)

ಆರ್ಥಿಕ ವಿಷಯದಲ್ಲಿ ಎಚ್ಚರಿಕೆ ಅಗತ್ಯ. ಬಹು ಮೊತ್ತದ ಹಣ ಕೈಸೇರುವಾಗ ಚಿಲ್ಲರೆ ಹಣವೂ ನಿಮ್ಮ ಕಣ್‌ತಪ್ಪಿಸಿ ಪರರ ಪಾಲಾಗುವುದು. ಮನೆಯಲ್ಲಿ ಸಂತಸದ ವಾತಾವರಣ. ಆರೋಗ್ಯ ಉತ್ತಮ.

 

ಕುಂಭರಾಶಿ (Kumbha)

ಮನೆಯ ಹಿರಿಯರ ಸಲಹೆಯನ್ನು ಪಾಲಿಸುವ ನಿಮಗೆ ಈ ದಿನ ಶುಭ ತರಲಿದೆ. ವೃತ್ತಿಯಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ ಮತ್ತು ಆಟೋಟಗಳಲ್ಲಿ ಹೆಸರು ಮಾಡುವಿರಿ. ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು.

 

ಮೀನರಾಶಿ (Meena)

ವ್ಯಾಪಾರ ವ್ಯವಹಾರವು ನಿಮ್ಮ ಎಣಿಕೆಯಂತೆ ಆಗುತ್ತಿರುವುದಕ್ಕೆ ಕಾರಣ ಗುರು-ಹಿರಿಯರ ಆಶೀರ್ವಾದ. ಹಾಗಾಗಿ ನೀವು ಅವರಿಗೆ ಕೃತಜ್ಞರಾಗಿರಬೇಕು. ಹಿರಿಯರ ಮಾತನ್ನು ನಡೆಸಿಕೊಡುವುದೇ ದೇವರ ಪೂಜಾ. ಶುಭ ಸಮಾರಂಭದಲ್ಲಿ ಭಾಗವಹಿಸುವಿರಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top