fbpx
ಕಿರುತೆರೆ

ರಾಧಾ ಹಿರೇಗೌಡರ್ ಆಯ್ತು ಈಗ ರಾಘವೇಂದ್ರ ಹುಣಸೂರ್ ಸರದಿ: ಝೀ ಕನ್ನಡ ಚಾನೆಲ್ ಬಿಡ್ತಾರಾ ಹುಣಸೂರು.

ರಾಧಾ ಹಿರೇಗೌಡರ್ ಆಯ್ತು ಈಗ ರಾಘವೇಂದ್ರ ಹುಣಸೂರ್ ಸರದಿ: ಝೀ ಕನ್ನಡ ಚಾನೆಲ್ ಬಿಡ್ತಾರಾ ಹುಣಸೂರು.

 

 

ಕನ್ನಡದ ಜನಪ್ರಿಯ ನ್ಯೂಸ್ ಪಬ್ಲಿಕ್ ಟಿವಿಯಲ್ಲಿ ಸುದ್ದಿವಾಚಕಿ ಮತ್ತು ನಿರೂಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ರಾಧಾ ಹೀರೇಗೌಡರ್ ಪಬ್ಲಿಕ್ ಟಿವಿಗೆ ರಾಜೀನಾಮೆ ನೀಡಿ BTV ಸೇರಿರುವುದು ಈಗ ಹಳೆಯ ವಿಚಾರ. ಅವರ ಬೆನ್ನಲ್ಲೇ ಮತ್ತೊಂದು ಚಾನೆಲ್’ನ ವ್ಯಕ್ತಿಯೊಬ್ಬರು ಚಾನೆಲ್ ಬದಲಾಯಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಹಾಗಾದ್ರೆ ಆ ವ್ಯಕ್ತಿ ಯಾರು ಅಂತೀರಾ ಮುಂದೆ ಓದಿ.

 

 

ಝೀ ಕನ್ನಡ ವಾಹಿನಿಯ ಪ್ರೋಗ್ರಾಮಿಂಗ್ ಹೆಡ್ ಆಗಿ ಕೆಲಸ ಮಾಡುತ್ತಿರುವ ರಾಘವೇಂದ್ರ ಹುಣಸೂರುರವರು ಸದ್ಯದಲ್ಲಿಯೇ ಚಾನೆಲ್ ಬಿಟ್ಟು ಬೇರೆ ಚಾನೆಲ್ ಸೇರಿಕೊಳ್ಳಿದ್ದಾರೆ. ಈ ನಿಟ್ಟಿನಲ್ಲಿ ಅವರಿಗೆ ಆಫರ್ ಗಳು ಬಂದಿದ್ದರೂ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಬಲ್ಲ ಮೂಲಗಳಿಂದ ಮಾಹಿತಿ ಬಂದಿದೆ. ಒಂದು ವೇಳೆ ಅವ್ರು ಝೀ ಕನ್ನಡ ಚಾನೆಲ್ ತೊರೆದರೆ ಮತ್ಯಾವ ಚಾನೆಲ್ ಗೆ ಸೇರಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.

 

 

ಈ ಹಿಂದೆ ರಾಘವೇಂದ್ರ ಹುಣಸೂರುರವರು ಸುವರ್ಣ ಚಾನೆಲ್ಲಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹುಣಸೂರುರವರು ಟಿ.ಆರ್.ಪಿ ಇಲ್ಲದ ಸುವರ್ಣ ವಾಹಿನಿಯನ್ನು ಸ್ಪರ್ಧೆಗೆ ಇಳಿಯುವಂತೆ ಮಾಡಿ ಸುವರ್ಣ ಚಾನೆಲ್ಲಿನ ಯಶಸ್ಸಿನ ಕತೆಗೆ ಮುಖ್ಯ ಕಾರಣರಾಗಿದ್ದರು. ಸುವರ್ಣದಲ್ಲಿ ಈ ರಾಘವೇಂದ್ರ ಹುಣಸೂರು ಪ್ರಾರಂಭಿಸಿದ ‘ಪ್ಯಾಟೆ ಮಂದಿ…’ ಸರಣಿ ಶೋಗಳು ಕನ್ನಡ ಕಿರುತೆರೆಯ ರಿಯಾಲಿಟಿ ಷೋ ಗಳಿಗೆ ಮುನ್ನುಡಿ ಬರೆದಿತ್ತು. ನಂತರ ಅವರು ಝೀ ಕನ್ನಡ ವಾಹಿನಿಯನ್ನು ಸೇರಿ ಝೀ ವಾಹಿನಿಯನ್ನು ಕೂಡ ಟಿ.ಆರ್.ಪಿ ಸ್ಪರ್ಧೆಯಲ್ಲಿ ಮಿಂಚುವಂತೆ ಮಾಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top