fbpx
ಭವಿಷ್ಯ

ನವೆಂಬರ್ 18ನೇ ತಾರೀಖಿನ ಶನಿ ಅಮಾವಾಸ್ಯೆ 351 ವರ್ಷಗಳ ನಂತರ ವಿಶಾಖ ನಕ್ಷತ್ರದಲ್ಲಿ ಬಂದಿದೆ ಈ ಶುಭ ಸಂಯೋಗ ಬಾದಾಮಿ, ಕಾಡಿಗೆಯ ಡಬ್ಬಿ ಬಳಸಿ ಮಾಡಬಹುದಾದ ಈ ಪರಿಹಾರದಿಂದ ಹಣದ ಸಮಸ್ಯೆ ದೂರವಾಗುತ್ತದೆ

ನವೆಂಬರ್ 18ನೇ ತಾರೀಖಿನಂದು  ಶನಿ ಅಮಾವಾಸ್ಯೆಯ ದಿನ 351 ವರ್ಷಗಳ ನಂತರ ಈ ಶುಭ ಸಂಯೋಗವು ಉಂಟಾಗಿದೆ.

 

 

ಇದೇ ಬರುವ ಶನಿವಾರ ಕಾರ್ತಿಕ ಮಾಸದ ಕಡೆಯ ದಿನವಾಗಿದ್ದು . ಅದೇ ದಿನ ಕಾರ್ತಿಕ  ಮಾಸದ ಕೊನೆಯ ದಿನವೂ ಸಹ ಆಗಿದೆ. ಈ ಕಾರ್ತಿಕ ಮಾಸದ ಕೊನೆಯ ದಿನವೇ ಶನಿವಾರವಾಗಿದ್ದು, ಈ ಶನಿವಾರದ ದಿನವೇ ಅಮಾವಾಸ್ಯೆಯ ಬಂದಿರುವುದರಿಂದ ಈ ಅಮಾವಾಸ್ಯೆಯನ್ನು ಶನಿ ಅಮಾವಾಸ್ಯೆ ಎಂದು ಕರೆಯಲಾಗಿದೆ.

ಈ ಶನಿ ಅಮಾವಾಸ್ಯೆಯು ವಿಶೇಷ ಸಂಯೋಗದಲ್ಲಿ ಉಂಟಾಗಿದ್ದು. ಈ ದಿನ ಶನಿಯು ವಿಶಾಖಾ ನಕ್ಷತ್ರದಲ್ಲಿ ಸ್ಥಿತನಿರುತ್ತಾನೆ. ಇದು ಬಹಳ ವಿಶೇಷ ಸಂಯೋಗವಾಗಿದೆ.ಶನೈಶ್ಚರ ದೇವರಿಗೆ ವಿಶಾಖಾ ನಕ್ಷತ್ರ ಅತ್ಯಂತ ಪ್ರಿಯ ನಕ್ಷತ್ರವಾಗಿದೆ. ಈ ನಕ್ಷತ್ರದ ಸಂಯೋಗವು ತುಂಬಾ ವಿಶೇಷವಾಗಿದೆ.

 

 

ಅಕ್ಟೋಬರ್ 26 ನೇ ತಾರೀಖಿನಂದು ಶನಿಯು ವೃಶ್ಚಿಕ   ರಾಶಿಯಿಂದ ಧನಸ್ಸು  ರಾಶಿಗೆ ಎರಡನೇ ಬಾರಿ ಪ್ರವೇಶವಾಗಿದ್ದು.ಇದರಿಂದ  ವೃಶ್ಚಿಕ, ಧನಸ್ಸು ಮತ್ತು ಮಕರ ರಾಶಿಯವರಿಗೆ ಈಗ ಸಾಡೇಸಾತಿ ಶನಿ ನಡೆಯುತ್ತಿದೆ.ವೃಷಭ ಮತ್ತು ಕನ್ಯಾ ರಾಶಿಗೆ ಅಷ್ಟಮ ಶನಿ ನಡೆಯುತ್ತಿದೆ . ಈ ರೀತಿಯ ಸಾಡೇಸಾತಿ ಮತ್ತು ಅಷ್ಟಮ ಶನಿ ನಡೆಯುತ್ತಿರುವವರು ಈ ಕೆಲವು ಉಪಾಯಗಳನ್ನು ಅವಶ್ಯಕವಾಗಿ ಶನಿ ಅಮಾವಾಸ್ಯೆ ದಿನ ಮಾಡಬೇಕು. ಕಪ್ಪು ಎಳ್ಳನ್ನು ಉಪಯೋಗಿಸಿ ಒಂದು ಸಣ್ಣ ಉಪಾಯವನ್ನು ಮಾಡಿ ಸಾಡೇಸಾತಿ, ಅಷ್ಟಮ ಶನಿ ಮತ್ತು ನಿಮ್ಮ ಜಾತಕ ಕುಂಡಲಿಯಲ್ಲಿ ಶನಿಯ ಸ್ಥಿತಿ ಕೆಟ್ಟದಾಗಿದ್ದರೆ… ಅವಶ್ಯಕವಾಗಿ ಈ ಉಪಾಯವನ್ನು ಮಾಡಬೇಕು. ಆದರೆ ಎಲ್ಲರೂ ಮಾಡುವುದರಿಂದ  ಸಹ ತುಂಬಾ ಒಳ್ಳೆಯದಾಗುವುದು.

ಬೆಳಗ್ಗೆ ಬೇಗನೆ ಎದ್ದು ಶುಚಿರ್ಭೂತರಾಗಿ ಶುದ್ಧವಾದ ಜಲದಲ್ಲಿ ನದಿ ನೀರಿನಲ್ಲಿ  ಅಥವಾ ಮನೆಯಲ್ಲೇ ಶುದ್ಧವಾದ ನೀರಿನಲ್ಲಿ ಶನೈಶ್ಚರ ದೇವರ ಧ್ಯಾನವನ್ನು ಮಾಡುತ್ತಾ ಸ್ನಾನ ಮಾಡಿ. ಸ್ನಾನ ಮಾಡಿದ ನಂತರ ಶನೈಶ್ಚರ ದೇವನ ಆಹ್ವಾನವನ್ನು ಅವಶ್ಯಕವಾಗಿ ಈ ದಿನ ಮಾಡಬೇಕು. ಆಹ್ವಾನ ಮಾಡುವಾಗ ಕೈಯಲ್ಲಿ ನೀಲಿ ಪುಷ್ಪವನ್ನು, ಅಕ್ಷತೆ, ಬಿಲ್ವಪತ್ರೆ ಮತ್ತು ಸ್ವಲ್ಪ ಜಲವನ್ನು ಸೇರಿಸಿ ಕೈಯಲ್ಲಿ ಹಿಡಿದು ಈ ಮಂತ್ರವನ್ನು ಹೇಳುತ್ತಾ ಆಹ್ವಾನ ಮಾಡಿ …

 

“ರೀ೦ ನೀಲಾಂಜನ೦ ಸಮಾಭಾಸ೦ ರವಿ ಪುತ್ರ೦ ಯಮಾಗ್ರಜ೦ ಛಾಯಾ ಮಾರ್ತಾಂಡ ಸಂಭೂತಂ ತಮ  ನಮಾಮಿ ಶನೈಶ್ಚರಂ”

 

ಇದು ಶನೈಶ್ಚರ ದೇವನ ಅತ್ಯಂತ ಪ್ರಿಯ ಮಂತ್ರವಾಗಿದೆ. ನಾನು ಶನೈಶ್ಚರ ದೇವನನ್ನು ಆಹ್ವಾನ ಮಾಡುತ್ತಿದ್ದೇನೆ.. ನೀಲಿ ಶರೀರವನ್ನು  ಹೊಂದಿರುವ  ದೇವನೇ, ಸೂರ್ಯನ ಪುತ್ರನೇ ಛಾಯಾದೇವಿ ಪುತ್ರನೇ, ನಿನಗೆ ನಮಸ್ಕಾರಗಳು. ಹೀಗೆ ಹೇಳುತ್ತಾ ಶನೈಶ್ಚರ ದೇವನನ್ನು ಆಹ್ವಾನಿಸಬೇಕು.

 

 

ರಾತ್ರಿಯ ಸಮಯಕ್ಕೆ ಅಧಿಪತಿ ಶನೈಶ್ಚರ ದೇವನೆ ಆದ್ದರಿಂದ ಈ ದೇವನನ್ನು  ರಾತ್ರಿಯ ಸಮಯದಲ್ಲಿಯೇ ಪೂಜಿಸಲಾಗುತ್ತದೆ. ಕೆಲವು ಶಾಸ್ತ್ರಗಳಲ್ಲಿ ಹೇಳಿರುವ ಪ್ರಕಾರ ಪ್ರಕಾರ ಮಧ್ಯಾಹ್ನದ ನಂತರವೂ ಸಹ ಶನೈಶ್ಚರ ದೇವರ ಪೂಜೆ, ಅರ್ಚನೆಗಳನ್ನು ಮಾಡಬಹುದು.

“ ಓಂ ಶನೈಶ್ಚರಾಯ ನಮಃ”

ಎಂಬ ಈ ಮಂತ್ರವನ್ನು ನೂರಾ ಎಂಟು ಬಾರಿ ಜಪಿಸಿ. ಸಾಧ್ಯವಾದರೆ ಶನಿ ಚಾಲೀಸವನ್ನು ಓದಿ ಶನೈಶ್ಚರ ದೇವಸ್ಥಾನಕ್ಕೆ ಭೇಟಿ ನೀಡಿ. ಶನೈಶ್ಚರ ದೇವರ ದರ್ಶನ ಮಾಡಿ. ಪೂಜೆ, ಅರ್ಚನೆಗಳನ್ನು ಮಾಡಿಸಿ.

ಶನೈಶ್ಚರ ದೇವರು ನಿಮಗೆ  ಶನಿ ದೆಸೆಯಲ್ಲಿ ಅನುಕೂಲವನ್ನು ಪ್ರಾಪ್ತಿ ಮಾಡುವುದಕ್ಕಾಗಿ ನೀವು “ ಓಂ ಪ್ರಾಂ ಪ್ರೀಂ ಪ್ರೌ೦ ಸ  ಶ೦ ಶನೈಶ್ಚರಾಯ ನಮಃ”  ಈ ಮಂತ್ರವನ್ನು ಕೂಡ ನೀವು ಜಪಿಸಬಹುದು.

ಶನಿವಾರದ ದಿನ ಕಪ್ಪು ಉದ್ದಿನ ಬೇಳೆಯನ್ನು ಮತ್ತು ಕಪ್ಪು ಉಪ್ಪನ್ನು ಬಳಸಿ ಕಿಚಡಿಯನ್ನು ತಯಾರಿಸಿ ಶನಿದೇವನಿಗೆ ಅರ್ಪಿಸಿ, ನಂತರ ಪ್ರಸಾದದ ರೂಪದಲ್ಲಿ ಬೇರೆಯವರಿಗೂ ವಿತರಿಸಿ ನೀವು ಸಹ ಸೇವಿಸಿ. ಈ ರೀತಿ ಮಾಡುವುದರಿಂದ ಶನೈಶ್ಚರ ದೇವನು ಪ್ರಸನ್ನನಾಗುವನು. ಅವನ ವಿಶೇಷವಾದ ಕೃಪೆ ನಿಮ್ಮ ಮೇಲೆ ಇರುವುದು. ಬಡವರಿಗೆ ಕಿಚಡಿಯನ್ನು ಶನಿವಾರದ ದಿನ ದಾನವಾಗಿ ನೀಡಿ ಕಪ್ಪು ಕಂಬಳಿಯನ್ನು ಸಹ ಬಡವರಿಗೆ ಈ ದಿನ ದಾನವಾಗಿ ನೀಡಿದರೆ ಒಳ್ಳೆಯದು.

 

 

ಈ ದಿನ ಮನುಷ್ಯನು ಸಾಸಿವೆ ಎಣ್ಣೆ ಅಥವಾ ಕಪ್ಪು ಎಳ್ಳು ,ಕಪ್ಪು ದಿನ ಬೇಳೆ, ಕಪ್ಪು ಉಪ್ಪು, ಬೆಲ್ಲ, ಶನಿಗೆ ಸಂಬಂಧಿತ ಲೋಹ ಕಬ್ಬಿಣ ಮತ್ತು  ಕಪ್ಪು ಬಟ್ಟೆ ಇವೆಲ್ಲ ವಸ್ತುಗಳನ್ನು ಶನಿಗೆ ಅರ್ಪಿಸಿ ನಂತರ ಎಳ್ಳೆಣ್ಣೆಯಿಂದ ಅಥವಾ ಸಾಸಿವೆ ಎಣ್ಣೆಯಿಂದ ಶನೈಶ್ಚರ ದೇವರಿಗೆ ಅಭಿಷೇಕ ಮಾಡಿಸಬೇಕು.

ಶನಿ ಅಮಾವಾಸ್ಯೆಯಾದ   ಶನಿವಾರದ ದಿನ ಸಂಜೆ ಅರಳಿ ಮರದ ಕೆಳಗೆ ಏಳು ಪ್ರಕಾರದ ಹಣ್ಣು ಅಥವಾ ಭಕ್ಷ್ಯಗಳನ್ನು ಅರ್ಪಿಸಿ ಸಾಸಿವೆ ಎಣ್ಣೆ ಅಥವಾ ಎಳ್ಳೆಣ್ಣೆಯಿಂದ ದೀಪವನ್ನು ಬೆಳಗಿಸಿ. ಈ ರೀತಿ ಮಾಡುವುದರಿಂದ ನಿಮ್ಮ ಜಾತಕ ಅಥವಾ ಕುಂಡಲಿಯಲ್ಲಿ ಗ್ರಹದ ಶನಿ ಗ್ರಹದ ಸ್ಥಿತಿ ಸರಿ ಇಲ್ಲವೆಂದಾದರೆ ಅಶುಭ ಫಲವೂ ದೂರವಾಗುವುದು. ನಿಮ್ಮ ಜೀವನದಲ್ಲಿ ಅಸ್ಥಿರತೆಯು ದೂರವಾಗಿ ಸ್ಥಿರತೆ ದೊರೆಯುವುದು.

ಕಪ್ಪು ಎಳ್ಳನ್ನು ಕಪ್ಪು ಬಟ್ಟೆಯಲ್ಲಿ ಹಾಕಿ ಕಟ್ಟಬೇಕು. ಆ ಕಪ್ಪು ಗಂಟನ್ನು ಎಳ್ಳಿನ ಗಂಟನ್ನು ಏಳು ಬಾರಿ ತಲೆಯಿಂದ ಕಾಲಿನವರೆಗೆ ನಿವಾಳಿಸಿ. ಶನೈಶ್ಚರ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ಇಟ್ಟು ಬನ್ನಿ. ಶನೈಶ್ಚರ ದೇವನ ದೇವಸ್ಥಾನವೂ ನಿಮ್ಮ ಊರಿನಲ್ಲಿ ಇಲ್ಲವೆಂದಾದರೆ ಕಪ್ಪು ವರ್ಣದ ಶಿವನ ದೇವಸ್ಥಾನಕ್ಕೆ ಅಥವಾ ಶಿವಲಿಂಗವಿರುವ ದೇವಸ್ಥಾನದ ಬಳಿ ಇಡಬಹುದು. ಇಲ್ಲವೆಂದರೆ ಹರಿಯುವ ನೀರಿನಲ್ಲಿ ಈ ಗಂಟನ್ನು ತೇಲಿ ಬಿಡಬಹುದು.ಈ ರೀತಿ ಮಾಡುವುದರಿಂದ ಶನಿಯ ಕೆಟ್ಟ ದೃಷ್ಟಿ ಮತ್ತು ಶನಿಯ ದೋಷಗಳು ಅಥವಾ ನೀವು ಯಾವುದಾದರೂ ಖಾಯಿಲೆಗಳಿಂದ ಬಳಲುತ್ತಿದ್ದರೆ ಅವುಗಳು ಸಹ ದೂರವಾಗುವವು.

 

 

ಶನಿ ಅಮಾವಾಸ್ಯೆಯ ದಿನ ಎಂಟು ಬಾದಾಮಿ, ಎಂಟು ಕಾಡಿಗೆ( ಕಣ್ಣಿಗೆ ಹಚ್ಚುವ ಕಾಡಿಗೆಯ ಡಬ್ಬಿ)  ಇವುಗಳನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ.ಈ ಗ೦ಟನ್ನು  ನಿಮ್ಮ ಬೀರು ಅಥವಾ ಹಣವನ್ನು ಇಡುವ ಸ್ಥಳದಲ್ಲಿ ಇಟ್ಟು ಬಿಡಿ. ಇದರಿಂದ ಆರ್ಥಿಕ ಸಂಕಟವೂ ದೂರವಾಗಿ ನಿಮ್ಮ ನೌಕರಿ ಮತ್ತು  ವ್ಯಾಪಾರದಲ್ಲಿ ವೃದ್ಧಿಯಾಗಿ ಎಲ್ಲವೂ ಶುಭವಾಗಿ ಯಶಸ್ಸನ್ನು ಕಾಣುವಿರಿ.

 

 

ಶ್ರದ್ಧೆ ಮತ್ತು  ಭಕ್ತಿಯಿಂದ ಬಿಲ್ವಪತ್ರೆಯ 108 ಎಲೆಯನ್ನು ತೆಗೆದುಕೊಂಡು ಮಾಲೆಯನ್ನು ಮಾಡಿ ಕಪ್ಪು ಶಿವಲಿಂಗಕ್ಕೆ ಅರ್ಪಿಸಿ.

 

 

ರುದ್ರಾಕ್ಷಿ ಮಾಲೆಯನ್ನು ಈ ದಿನ ಕಪ್ಪು ದಾರದಲ್ಲಿ ಪೋಣಿಸಿ ಧರಿಸಿದರೆ ಒಳ್ಳೆಯದು.

ಶನಿಯು ಅಂತರದೆಸೆ, ಮಹಾದೆಸೆ ಮತ್ತು  ಪ್ರತ್ಯ೦ತರ ದೆಸೆಯು ನಡೆಯುತ್ತಿದ್ದರೆ ಅವರು  ಶನಿಯ ಆರಾಧನೆಯನ್ನು ಮಾಡಬೇಕು.

ಮಾಂಸ ,ಮದ್ಯವನ್ನು ಸೇವಿಸಬಾರದು. ಧೂಮಪಾನ ಮಾಡಬಾರದು.ಈ ದಿನ ಪವಿತ್ರವಾಗಿರಬೇಕು. ಸಾತ್ವಿಕ ಭೋಜನ ಮಾಡಬೇಕು.

 

 

ಕಪ್ಪು ಬಣ್ಣದ ನಾಯಿಗೆ ಸಾಸಿವೆ ಎಣ್ಣೆಯನ್ನು ಹಾಕಿ ಮಾಡಿದ ರೊಟ್ಟಿಯನ್ನು ಆಹಾರವಾಗಿ ಸೇವಿಸಲು ನೀಡಿ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top