fbpx
ಸಮಾಚಾರ

ವೈದ್ಯರ ಮುಷ್ಕರದಿಂದ ಸಾವನ್ನಪ್ಪಿರುವವರ ಬಗ್ಗೆ ಪ್ರಶ್ನಿಸಿದಾಗ “ಸತ್ತಿದ್ದಕ್ಕೆ ಸಾಕ್ಷಿ ಕೊಡಿ” ಎಂದು ಉಡಾಫೆ ಉತ್ತರ ನೀಡಿದ ಸಿ.ಎಂ.ಸಿದ್ದರಾಮಯ್ಯ..!

ವೈದ್ಯರ ಮುಷ್ಕರದಿಂದ ಸಾವನ್ನಪ್ಪಿರುವವರ ಬಗ್ಗೆ ಪ್ರಶ್ನಿಸಿದಾಗ “ಸತ್ತಿದ್ದಕ್ಕೆ ಸಾಕ್ಷಿ ಕೊಡಿ” ಎಂದು ಉಡಾಫೆ ಉತ್ತರ ನೀಡಿದ ಸಿ.ಎಂ.ಸಿದ್ದರಾಮಯ್ಯ..!

 

 

 

ರಾಜ್ಯ ಸರ್ಕಾರದ ಉದ್ದೇಶಿತ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ(ಕೆಪಿಎಂಇ) ಕಾಯ್ದೆ ವಿರೋಧಿಸಿ ಖಾಸಗಿ ಆಸ್ಪತ್ರೆಗಳ ವೈದ್ಯರು ಕಳೆದ ಮೂರು ದಿನಗಳಿಂದ ಮುಷ್ಕರ ನಡೆಸುತ್ತಿದ್ದರು ಈ ನಡುವೆ, ಸರಕಾರ ಮತ್ತು ಖಾಸಗಿ ವೈದ್ಯರ ಸಂಘದ ಹಗ್ಗಜಗ್ಗಾಟದ ನಡುವೆ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದು, ಸುಮಾರು 50ಕ್ಕೂ ಹೆಚ್ಚಿನ ಮಂದಿ ಸಾವನ್ನಪ್ಪಿದ್ದಾರೆ.

 

 

ಈ ಕುರಿತಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯಯವರನ್ನು ವೈದ್ಯರ ಮುಷ್ಕರದಿಂದ ಸಾವನ್ನಪ್ಪಿರುವವರ ಬಗ್ಗೆ ಮಾದ್ಯಮದವರು ಪ್ರಶ್ನಿಸಿದಾಗ ವೈದ್ಯರ ಮುಷ್ಕರದಿಂದಾಗಿಯೇ ಸಾವನ್ನಪ್ಪಿರುವ ಬಗ್ಗೆ ಸಾಕ್ಷಿ ಇದೆಯೇನ್ರಿ ಎಂದು ಉಡಾಫೆಯಾಗಿ ಮುಖ್ಯಮಂತ್ರಿಗಳು ಉತ್ತರ ನೀಡಿದ್ದಾರೆ. ವೈದ್ಯರ ಮುಷ್ಕರದ ಕಾರಣದಿಂದಲೇ ಸಾವು ಸಂಭವಿಸಿದೆ ಎಂದು ನಿಮ್ಮ ಬಳಿ ಸಾಕ್ಷಿ ಏನಾದರೂ ಇದೆಯೇ? ಡಿಮಾನಿಟೈಸೇಷನ್ ವೇಳೆ ಕಷ್ಟವನ್ನು ತಾಳಲಾರದೆ ನೂರಾರು ಮಂದಿ ಸಾವನ್ನಪ್ಪಿದ್ದಾರಲ್ಲಾ ಎಂದು ಹೇಳಿದ್ದಾರೆ.

 

 

ಈ ಹಿಂದೆ ಯಾರೋ VIP ಬರುತ್ತಿದ್ದಾರೆ ಎಂದು ಆಂಬುಲೆನ್ಸ್ಅನ್ನು ತಡೆದು ನಿಲ್ಲಿಸಿಸುವಂತೆ ಹೇಳಿದ್ದ ಮುಖ್ಯಮಂತ್ರಿಗಳು ಈಗ ವೈದ್ಯರ ಮುಷ್ಕರದಿಂದ ಜನರು ಸಾವನ್ನಪ್ಪಿದಕ್ಕೆ ಸಾಕ್ಷಿ ಕೇಳುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ವೈದ್ಯರ ಮುಷ್ಕರದಿಂದ ರಾಜ್ಯದಲ್ಲಿ ಆಗಿರುವ ಸಾವು -ನೋವುಗಳ ಕುರಿತಾದ ವರದಿ ಪಡೆದು ಅದಕ್ಕೆ ಸೂಕ್ತ ಪರಿಹಾರ ಕೊಡುವ ಬದಲು ಈ ರೀತಿ ಉಡಾಫೆಯಿಂದ ಉತ್ತರ ನೀಡಿರುವುದು ಎಷ್ಟು ಸರಿ ಎಂದು ಜನರು ಹೇಳುತ್ತಿದ್ದಾರೆ.

 

 

ಮುಷ್ಕರದಿಂದಾಗಿ ರಾಜ್ಯಾದ್ಯಂತ ಚಿಕಿತ್ಸೆ ಸಿಗದೆ ಸಾರ್ವಜನಿಕರು ಪರದಾಡಿ ಸಾವನ್ನಪ್ಪಿರುವ ಸಾವಿನ ಮನೆಯಲ್ಲಿ ತುಂಬಾ ದುಃಖವಿರುತ್ತದೆ ಇಂತಹ ಸಂಧರ್ಭದಲ್ಲಿ ಇಂತಹುದೇ ಕಾರಣಕ್ಕೆ ಸತ್ತಿದ್ದಾರೆ ಎನ್ನೋದಕ್ಕೆ ಸಾಕ್ಷಿಯೇನು ಎಂದು ಮುಖ್ಯಮಂತ್ರಿಗಳು ಕೇಳುತ್ತಿರುವುದು ಎಷ್ಟು ಸರಿ ಎಂದು ಅವರೇ ಅರ್ಥ ಮಾಡಿಕೊಳ್ಳಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top