fbpx
ಕಿರುತೆರೆ

ಬಿಗ್‌ಬಾಸ್‌‌‌ ಕೊಟ್ಟ ಸೀಕ್ರೆಟ್‌ ಟಾಸ್ಕ್‌ ಮಾಡುವಲ್ಲಿ ವಿಫಲವಾದ ಜೆಕೆ…ಕ್ಯಾಪ್ಟನ್‌ ಚಂದನ್ ಕೊಟ್ಟ ಶಿಕ್ಷೆ ಏನು ಗೊತ್ತಾ.?

ಬಿಗ್‌ಬಾಸ್‌‌‌ ಕೊಟ್ಟ ಸೀಕ್ರೆಟ್‌ ಟಾಸ್ಕ್‌ ಮಾಡುವಲ್ಲಿ ವಿಫಲವಾದ ಜೆಕೆ…ಕ್ಯಾಪ್ಟನ್‌ ಚಂದನ್ ಕೊಟ್ಟ ಶಿಕ್ಷೆ ಏನು ಗೊತ್ತಾ.?

 

 

ಬಿಗ್ ಬಾಸ್ ನಲ್ಲಿ ನೆನ್ನೆ ಜಯರಾಮ್ ಕಾರ್ತಿಕ್ ಅವರಿಗೆ ಸೀಕ್ರೆಟ್ ಟಾಸ್ಕ್’ವೊಂದನ್ನ ನೀಡಿದ್ದರು. ಇದರ ಪ್ರಕಾರ ಮ್ಯೂಸಿಕಲ್ ಚೇರ್‌ನ ಟಾಸ್ಕ್‌ ಮಾಡುವಾಗ ಚೇರ್‌ ಮೇಲೆ ಕುಳಿತಿರುವ ಯಾವುದಾದರೂ ಒಬ್ಬ ಸದಸ್ಯರನ್ನು ಅವರಿಗೆ ಗೊತ್ತಾಗದ ಹಾಗೆ ಉಪಾಯ ಮಾಡಿ ಚೆರ್ ಮೇಲಿಂದ ಏಳಿಸಬೇಕಿತ್ತು.

 

 

ಜೆಕೆಯವರಿಗೆ ಸೇಕ್ರೆಟ್ ಟಾಸ್ಕ್ ನೀಡಿರುವ ಬಗ್ಗೆ ಯಾರೊಂದಿಗೂ ಚರ್ಚಿಸುವಂತಿರಲಿಲ್ಲ ಈ ಟಾಸ್ಕ್‌ನ ಸುಳಿವು ಬಿಟ್ಟುಕೊಡುವಂತಿರಲಿಲ್ಲ, ಒಂದು ವೇಳೆ ಬೇರೆಯವರ ಬಳಿ ಹೇಳಿಕೊಂಡರೆ ಮನೆಗೆ ಲಭಿಸಲಿದ್ದ ಎಲ್ಲಾ ಲಕ್ಷುರಿ ಪಾಯಿಂಟ್ ಗಳನ್ನ ಕಳ್ಕೋಬೇಕಿತ್ತು.

 

 

ಈ ಸೀಕ್ರೆಟ್ ಟಾಸ್ಕ್ ನಲ್ಲಿ ಗೆದ್ದರೆ ಮನೆಗೆ 2000 ಲಕ್ಷುರಿ ಪಾಯಿಂಟ್ ಗಳನ್ನೂ ನೀಡುತ್ತಿದ್ದರು ಒಂದು ವೇಳೆ ಸೀಕ್ರೆಟ್ ಟಾಸ್ಕ್ ನಲ್ಲಿ ವಿಫಲರಾದರೆ ಲಕ್ಷುರಿ ಬಜೇಟ್‌ನಲ್ಲಿ 1000 ಅಂಕಗಳು ಕಳೆದುಕೊಳ್ಳಬೇಕಾಗಿತ್ತು.. ಬಿಗ್‌ಬಾಸ್ ಆದೇಶದಂತೆ ಸೀಕ್ರೆಟ್‌ ಟಾಸ್ಕ್‌ ಮಾಡಲು ಮುಂದಾದ ಜೆಕೆ. ಕುರ್ಚಿಯಲ್ಲಿ ಕುಳಿತಿದ್ದ ಸದಸ್ಯರನ್ನ ಹೇಗಾದ್ರೂ ಮಾಡಿ ಮೇಲೆ ಏಳಿಸಬೇಕು ಎಂದು ಎಷ್ಟೇ ಪ್ರಯತ್ನ ಪಟ್ಟರೂ ಅದು ಸಾಧ್ಯವಾಗಲಿಲ್ಲ. ಬಿಗ್ ಬಾಸ್ ಕೊಟ್ಟಿದ್ದ ಸೀಕ್ರೆಟ್ ಟಾಸ್ಕ್ ಅನ್ನು ಮಾಡುವಲ್ಲಿ ಜೆಕೆ ವಿಫಲಾರಾದರು.

 

 

ಇನ್ನು ಈ ವಾರದ ಮನೆಯ ಕ್ಯಾಪ್ಟನ್‌ ಆಗಿರುವ ಚಂದನ್ ಅವರು ಈ ವಾರದ ಟಾಸ್ಕ್ ಮುಕ್ತಾಯಗೊಂಡ ನಂತರ ಈ ವಾರದಲ್ಲಿ ಅತ್ಯುತ್ತಮ ಪ್ರದರ್ಶನ ಮತ್ತು ಕಳಪೆ ಪ್ರದರ್ಶನ ತೋರಿದ ಸದಸ್ಯರನ್ನು ಸೂಚಿಸಬೇಕಿತ್ತು. ಅಂತೆಯೇ ಬಹಳ ಜಾಣ್ಮೆಯಿಂದ ಯೋಚನೆಮಾಡಿದ ಚಂದನ್ ಕಳಪೆ ಬೋರ್ಡನ್ನು ಜೆಕೆಯವರಿಗೆ ನೀಡಿದರು. ಕಾರಣ ಏನೆಂದರೆ ಅವರು ಟಾಸ್ಕ್ ನಲ್ಲಿ ವಿಫಲಗೊಂಡ ಕಾರಣ 1000 ಲಕ್ಷುರಿ ಪಾಯಿಂಟ್ ಗಳು ಕಳಕೊಳ್ಳಬೇಕಾಗಿಯಿತು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top