fbpx
ಸಮಾಚಾರ

ರಾಜ್ಯದಲ್ಲಿ ಮದ್ಯಪಾನ ನಿಷೇಧ ..? ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ.

ರಾಜ್ಯದಲ್ಲಿ ಮದ್ಯಪಾನ ನಿಷೇಧ ..? ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ.

 

 

ಈ ಸುದ್ದಿ ಬಹುತೇಕ ಹೆಂಗಸರಿಗೆ ಸಂತಸವನ್ನ ತರುತ್ತೆ ಹಾಗೆ ಮದ್ಯ ಪ್ರಿಯರಿಗೆ ಶಾಕಿಂಗ್ ಸುದ್ದಿಯೂ ಆಗಿದೆ ಹೌದು, ಮುಂಬರುವ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರು ರಾಜ್ಯದ ಆಡಳೀತಾರೂಡ ಕಾಂಗ್ರೆಸ್ ಸರ್ಕಾರ ಮಹಿಳಾ ಮತದಾರರನ್ನು ಸೆಳೆಯುವ ಕಾರಣಕ್ಕೆ ಮದ್ಯಪಾನ ನಿಷೇಧ ಜಾರಿಗೆ ತರುವ ಯೋಜನೆಯನ್ನು ಹಾಕಿಕೊಂಡಿದೆ ಎಂಬ ಸುದ್ದಿ ಈಗ ಈಗ ಎಲ್ಲೆಡೆ ಹರಿದಾಡುತ್ತಿದೆ.

 

 

ಈಗಾಗಲೇ ಮದ್ಯವನ್ನು ನಿಷೇದ ಮಾಡಿರುವ ಬಿಹಾರ ರಾಜ್ಯಕ್ಕೆ ಕಾಂಗ್ರೆಸ್ ನಾಯಕರು ಭಾರ್ತಿ ನೀಡಿ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ ಎನ್ನಲಾಗುತ್ತಿದೆ. 18 ಸಾವಿರ ಕೋಟಿ ರೂಪಾಯಿ ಆದಾಯ ಬರುತ್ತಿರುವ ಮದ್ಯ ನಿಷೇದ ಮಾಡೋಕೆ ಹೊರಟಿರೋದು ನಿಜಕ್ಕೂ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

 

 

ಒಂದು ವೇಳೆ ಲಿಕ್ಕರ್ ಬ್ಯಾನ್ ಆದ್ರೆ ಮದ್ಯಪಾನಿಗಳು ದಂಗೆ ಏಳುವ ಸಾಧ್ಯತೆಗಳಿರುವುದರಿಂದ ಮದ್ಯಕ್ಕೆ ಪರ್ಯಾಯವಾಗಿ ನೈಸರ್ಗಿಕವಾದ ನೈಸರ್ಗಿಕ ಮದ್ಯ, ನೀರಾ ವನ್ನು ಟೆಟ್ರಾ ಪ್ಯಾಕ್‍ಗಳ ಮೂಲಕ ಕೊಡೋದಕ್ಕೆ ಅಬಕಾರಿ ಇಲಾಖೆ ಚಿಂತನೆ ನಡೆಸುತ್ತಿದ್ವೆ ಎಂದು ಮೂಲಗಳಿಂದ ತಿಳಿದುಬಂದಿದೆ. ಒಂದು ವೇಳೆ 2018ರ ಚುನಾವಣೆಗೂ ಮುಂಚಿತವಾಗಿ ರಾಜ್ಯದಲ್ಲಿ ಮದ್ಯ ಸಂಪೂರ್ಣ ನಿಷೇಧವಾದರೇ ಮದ್ಯವಿಲ್ಲದೆ ಎಲೆಕ್ಷನ್ ನಡಿಯೋದರಲ್ಲಿ ಸಂದೇಹವೇ ಇಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top