fbpx
ಜಾಗೃತಿ

ಇನ್ಮುಂದೆ ಟ್ರಾಫಿಕ್ಸ್ ರೂಲ್ಸ್ ಬ್ರೇಕ್ ಮಾಡುದ್ರೆ ದಂಡ ಕಟ್ಟೋಹಾಗಿಲ್ಲ ಬದಲಿಗೆ 25 ನಿಮಿಷ ಈ ವಿಡಿಯೋ ನೋಡಬೇಕು! ರೂಲ್ಸ್ ಬ್ರೇಕ್ ಮಾಡೋರಿಗೆ ಇದೇ ಶಿಕ್ಷೆ..!

ಇನ್ಮುಂದೆ ಟ್ರಾಫಿಕ್ಸ್ ರೂಲ್ಸ್ ಬ್ರೇಕ್ ಮಾಡುದ್ರೆ ದಂಡ ಕಟ್ಟೋಹಾಗಿಲ್ಲ ಬದಲಿಗೆ 25 ನಿಮಿಷ ಈ ವಿಡಿಯೋ ನೋಡಬೇಕು! ರೂಲ್ಸ್ ಬ್ರೇಕ್ ಮಾಡೋರಿಗೆ ಇದೇ ಶಿಕ್ಷೆ..!

 

 

ಇನ್ಮುಂದೆ ನಗರದ ರಸ್ತೆಗಳಲ್ಲಿ ವಾಹನ ಚಾಲನೆ ಮಾಡುವವವರು ಒಂದು ವೇಳೆ ಟ್ರಾಫಿಕ್ಸ್ ರೂಲ್ಸ್ ಬ್ರೇಕ್ ಮಾಡುದ್ರೆ ದಂಡ ಕಟ್ಟೋಬೇಕಾಗಿಲ್ಲ. ಇದೇನಪ್ಪ ಇದು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುದ್ರೂ ಎಂದು ದಂಡ ಹಾಕಲ್ವ ಅಂತ ಆಶ್ಚರ್ಯ ಪಡಬೇಡಿ. ದಂಡದ ಬದಲಾಗಿ ಇನ್ನು ಮುಂದೆ ಬೇರೆ ರೀತಿಯ ಶಿಕ್ಷೆ ನೀಡಲು ನಗರದ ಸಂಚಾರ ಪೊಲೀಸರು ನಿರ್ಧರಿಸಿದ್ದಾರೆ.

 

 

ವಾಹನ ಚಲಾವಣೆ ಮಾಡುವ ವೇಳೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುದ್ರೆ ಸಂಚಾರ ಶಿಸ್ತಿನ ವಿಡಿಯೋವನ್ನು ವೀಕ್ಷಿಸಬೇಕು. ನೆನ್ನೆಯಿಂದ ಪ್ರಾಯೋಗಿಕವಾಗಿ ಕೋರಮಂಗಲದ ಫೋರಂ ಮಾಲ್ ಆವರಣದಲ್ಲಿ ಈ ನಿಯಮವನ್ನು ಜಾರಿಗೆ ತಂದಿದ್ದು ಮುಂದಿನ ದಿನಗಳಲ್ಲಿ ಇದು ಯಶಸ್ವಿಯಾದರೆ ನಗರಾದ್ಯಂತ ಈ ಯೋಜನೆಯನ್ನು ಜಾರಿಗೆ ತರಲಾಗುತ್ತದೆ. ಈ ಬಗ್ಗೆ ಪೊಲೀಸ್-ಟ್ರಾಫಿಕ್ ಪೂರ್ವದ ಜಿಲ್ಲಾಧಿಕಾರಿಗಳ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

 

 

“ದಂಡ ಸಂಗ್ರಹಕ್ಕಿಂತ ಟ್ರಾಫೀಕ್ಸ್ ರೂಲ್ಸ್ ಪಾಲನೆ ಮಡದಿರುವವರಲ್ಲಿ ಸಂಚಾರ ನಿಯಮದ ಬಗ್ಗೆ ಅರಿವು ಮೂಡಿಸುವುದು ನಮ್ಮ ಉದ್ದೇಶ ಆದರಿಂದ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವವರಿಗೆ ದಂಡ ವಿಧಿಸುವ ಬದಲು 25 ನಿಮಿಷಗಳ ಸಂಚಾರಿ ನಿಯಮದ ವಿಡಿಯೋವನ್ನು ವೀಕ್ಷಣೆ ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದೇವೆ, ಸಾರ್ವಜನಿಕ ಹಾಗೂ ಖಾಸಗಿ ಸ್ಥಳಗಳಲ್ಲಿ ಲಭ್ಯವಿರುವ ಸ್ಥಳದ ಆಧಾರದ ಮೇಲೆ ವಿಡಿಯೋ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ’ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಆರ್. ಹಿತೇಂದ್ರ ತಿಳಿಸಿದರು.
 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top