fbpx
ದೇವರು

ಶಿವನು ತನ್ನ ಭಕ್ತರನ್ನು ರಕ್ಷಿಸಲು ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ತಾನೇ ಸಿಡಿಲು ಬಡಿಸಿಕೊಳ್ಳುವ ಜಯ ಬಿಜಲಿ ದೇವಸ್ಥಾನ ಮತ್ತು ಇದರ ಹಿಂದಿರುವ ಕಥೆ.

ಶಿವನು ತನ್ನ ಭಕ್ತರನ್ನು ರಕ್ಷಿಸಲು ತಾನೇ ಸಿಡಿಲು ಬಡಿಸಿಕೊಳ್ಳುವ ಜಯ ಬಿಜಲಿ ದೇವಸ್ಥಾನ ಮತ್ತು ಇದರ ಹಿಂದಿರುವ ಕಥೆ.

 

ಕೆಲವರ ರಹಸ್ಯಗಳನ್ನು ಎಂದಿಗೂ ಬೇಧಿಸಲಾಗುವುದಿಲ್ಲ. ಈ ದೇವಸ್ಥಾನದಲ್ಲಿ ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಮಹಾದೇವನ  ಮಂದಿರಕ್ಕೆ ಸಿಡಿಲು ಬಡಿಯುತ್ತದೆ .ಆ ಸಿಡಿಲಿನ ಹೊಡೆತಕ್ಕೆ ಶಿವಲಿಂಗವೇ ಛಿದ್ರ ಛಿದ್ರವಾಗಿ ಹೋಗಿರುತ್ತದೆ. ಆದರೆ ಬೆಳಗಾಗುವಷ್ಟರಲ್ಲಿ ಮತ್ತೆ ಶಿವಲಿಂಗ ಒಂದಾಗಿ ಮೊದಲಿನಂತೆ ಕೂಡಿ ಕೊಂಡಿರುತ್ತದೆ .ಹೀಗೆ ಈ ರೀತಿ ಆಗಲು ಕಾರಣವೇನೆಂದು ಕಂಡುಹಿಡಿಯಲು ವಿಜ್ಞಾನಿಗಳಿಗೂ ಸಹ ಸಾಧ್ಯವಾಗಲಿಲ್ಲ.

 

 

ಗುಡುಗು ಮತ್ತು  ಸಿಡಿಲಿನ ಶಬ್ದಕ್ಕೆ ಸುತ್ತಮುತ್ತಲಿನ ಬೆಟ್ಟಗಳು ಕೂಡ ಕಂಪಿಸುತ್ತವೆ. ಇಲ್ಲಿನ  ಜನರು ಹೆದರಿ ನಡುಗುತ್ತಾರೆ . ಪಶು, ಪಕ್ಷಿಗಳು ಬೆದರಿ ಓಡುತ್ತವೆ. ಸಿಡಿಲಿನ ಹೊಡೆತಕ್ಕೆ ಶಿವಲಿಂಗ ಛಿದ್ರವಾಗುತ್ತದೆ. ಆದರೆ ಶಿವನ ಮಂದಿರಕ್ಕೆ ಮಾತ್ರ ಯಾವುದೇ ಹಾನಿ ಸಂಭವಿಸುವುದಿಲ್ಲ. ಬೆಟ್ಟದ ಮೇಲಿನ ಕಲ್ಲುಗಳು ಸಹ ಕೆಳಗೆ ಉರುಳಿ ಬೀಳುವುದಿಲ್ಲ. ಮಾರನೇ ದಿನ ದೇವಾಲಯಕ್ಕೆ ಅರ್ಚಕರು ಹೋಗಿ ತುಂಡು ತುಂಡಾಗಿದ್ದ ಶಿವಲಿಂಗದ ತುಣುಕುಗಳನ್ನು ಮತ್ತೆ ಒಂದು ಕಡೆ ಸೇರಿಸಿ ಅಭಿಷೇಕ ಮಾಡುತ್ತಾರೆ. ಒಂದು ದಿನ ಕಳೆಯುವಷ್ಟರಲ್ಲಿ ಶಿವಲಿಂಗ ಯಥಾಸ್ಥಿತಿಯಲ್ಲಿ ಮೊದಲಿನ ರೂಪಕ್ಕೆ ಬಂದಿರುತ್ತದೆ . ಇಲ್ಲಿ ಏನೂ ನಡೆದಿಲ್ಲವೇನೋ ಎನ್ನುವಂತೆ ಕಾಣುತ್ತದೆ. ಇದು ವಿಚಿತ್ರವಾದರೂ ಸಹ ಸತ್ಯ ಶಿವನ ಲೀಲೆ ಎನ್ನಬೇಕು ಎನೋ  ಅರ್ಥವಾಗದ ಸ್ಥಿತಿಯಲ್ಲಿ ಭಕ್ತರಿದ್ದಾರೆ. ಈ ರೀತಿ ಆಗುತ್ತಿರುವುದು ಇದು ಮೊದಲೇನಲ್ಲ ನೂರಾರು ವರ್ಷಗಳಿಂದ ಹೀಗೆ ನಡೆದುಕೊಂಡು ಬಂದಿದೆ.

ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ಇಂತಹ ವಿದ್ಯಮಾನ ನಡೆಯುವ ದೇವಾಲಯದ ಹೆಸರೇ ಜಯಾ ಬಿಜಲಿ ಮಹಾದೇವ ದೇವಸ್ಥಾನ. ಹಿಮಾಚಲ ಪ್ರದೇಶದ ಕುಲು ಎಂಬ ಕಣಿವೆಯಲ್ಲಿ ಈ ದೇವಾಲಯವಿದೆ.

 

ಜಯಾ ಬಿಜಲಿ ಮಹಾದೇವನ ದೇವಸ್ಥಾನದ ಹಿಂದಿರುವ ಪುರಾಣ ಕಥೆ.

 

ಹಿಂದೆ ಕುಲು ಕಣಿವೆ ಪ್ರದೇಶದಲ್ಲಿ ಬಲಿಷ್ಠನಾದ ರಾಕ್ಷಸನು ಒಬ್ಬನಿದ್ದನ೦ತೆ. ಅಲ್ಲಿದ್ದ ಜನರನ್ನು ಪಶು, ಪಕ್ಷಿಗಳನ್ನು ಅಂತ್ಯ ಮಾಡಲು ಆತ ಒಂದು ಹಾವಿನ ರೂಪ ತಾಳಿ  ಬಿಯಾಸ್ ನದಿಯ ಹರಿವಿಗೆ ಅಡ್ಡಲಾಗಿ ಮಲಗಿ ನದಿಯ ನೀರು ಹೆಚ್ಚಾಗಿ ಪ್ರವಾಹವಾಗಿ ಸುತ್ತಮುತ್ತಲ ಗ್ರಾಮಗಳನ್ನು ನೀರಿನಲ್ಲಿ ಮುಳುಗಿಸಲು ಪ್ರಯತ್ನಿಸುತ್ತಾನೆ .  ಇದನ್ನು ನೋಡಿದ ಈಶ್ವರ ತನ್ನ ತ್ರಿಶೂಲದಿಂದ ರಾಕ್ಷಸನನ್ನು ಸಂಹರಿಸುತ್ತಾನೆ. ಆ ರಾಕ್ಷಸ ಸಾಯುತ್ತಾ ಒಂದು ದೊಡ್ಡ ಬೆಟ್ಟವಾಗಿ ರೂಪ ತಾಳುತ್ತಾನೆ. ಆದರೆ ಭಕ್ತರಿಗೆ ತೊಂದರೆ ಕಟ್ಟಿಟ್ಟ ಬುತ್ತಿ ಎಂದು ಶಿವ ತನ್ನ ಭಕ್ತರನ್ನು ರಕ್ಷಿಸಲು ಈ ಬೆಟ್ಟದಲ್ಲಿ ಶಿವನು ನೆಲೆಸಿದ್ದಾರೆಂದು ಭಕ್ತರ ನಂಬಿಕೆಯಾಗಿದೆ .

ಆ ರಾಕ್ಷಸನ ದೇಹವನ್ನು ನಾಶ ಪಡಿಸಲು ಬೆಟ್ಟದ ಮೇಲೆ ಸಿಡಿಲು ಬಡಿಯಬೇಕೆಂದು ಶಿವನು ಇಂದ್ರನಿಗೆ ಹೇಳುತ್ತಾನೆ. ಒಂದು ವೇಳೆ ಸಿಡಿಲು ಬಡಿದರೆ ಅಲ್ಲಿರುವ ಜನ ಪಶು, ಪಕ್ಷಿಗಳು ನಾಶವಾಗದಂತೆ ತಡೆಯಲು ಶಿವ ಆ ನದಿಯು ತನ್ನ ಸಿಡಿಲು ತನಗೆ ಬಡಿಯುವಂತೆ ಮಾಡುತ್ತಾನೆಂದು ಪುರಾಣ ಕಥೆಗಳು ಹೇಳುತ್ತವೆ.

 

 

ಮಹಾದೇವನ ಆಜ್ಞೆಯಂತೆ ಹನ್ನೆರಡು ವರ್ಷಗಳಿಗೊಮ್ಮೆ ಸಿಡಿಲು ಬಡಿಯುತ್ತದೆ. ಎಂದು ನಂತರ ಆ ಶಿವಲಿಂಗ ಒಂದಾಗಿ ಮೊದಲಿನ೦ತೆ  ರೂಪ ತಳೆಯುತ್ತದೆ ಎಂದು ಪ್ರತೀತಿ  ಇದೆ.

ಈ ಶಿವನ ದೇವಾಲಯವನ್ನು ಏರಲು ಅಷ್ಟು ಸುಲಭವಲ್ಲ . ಸಮುದ್ರ  ಮಟ್ಟದಿಂದ ಎರಡು ಸಾವಿರದ ನಾನ್ನೂರು ಐವತ್ತು ಮೀಟರ್ ಎತ್ತರವಿರುವ ಈ ದೇವಾಲಯವನ್ನು ತಲುಪಲು ಕಲ್ಲು ಮುಳ್ಳುಗಳ ಮೇಲೆ ನಡೆದುಕೊಂಡೇ ಹೋಗಬೇಕು. ಅದೃಷ್ಟವಂತರಿಗೆ ಮಾತ್ರ ಈ ದೇವರ ದರ್ಶನ ಲಭಿಸುತ್ತದೆ.ಬೆಟ್ಟದ ಮೇಲಿರುವ ಶಿವಲಿಂಗವನ್ನು ಮೆರವಣಿಗೆ ಮಾಡುವುದು ಇಲ್ಲಿನ ಪದ್ಧತಿಯಂತೆ.

ಜೀವನದಲ್ಲಿ ಒಂದು ಬಾರಿಯಾದರೂ ಈ ಶಿವನ ದೇವಸ್ಥಾನವನ್ನು ನೋಡಿ ಪುನೀತರಾಗಬೇಕು. ಆ ಶಿವನ ದರ್ಶನ ಭಾಗ್ಯ ಎಲ್ಲರಿಗೂ ಪ್ರಾಪ್ತಿಯಾಗಲಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top