fbpx
ಆರೋಗ್ಯ

ಊಟ ಮಾಡಿದ ನಂತರ ಆಗುವ ವಿಷ ಆಹಾರ ಅಥವಾ ಫುಡ್ ಪಾಯಿಸನ್ ಹೊಟ್ಟೆ ನೋವು ,ಭೇದಿ ,ವಾಂತಿ ತರಿಸುತ್ತೆ ಇದಕ್ಕೆ ನೈಸರ್ಗಿಕ ಮನೆಮದ್ದುಗಳು ಹೀಗಿವೆ

ಊಟ ಮಾಡಿದ ನಂತರ ಆಗುವ ವಿಷ ಆಹಾರ ಇದಕ್ಕೆ ನೈಸರ್ಗಿಕ ಮನೆಮದ್ದುಗಳು ಹೀಗಿವೆ

 

ಫುಡ್ ಪಾಯಿಸನ್:

ಕೆಲವರಿಗೆ ಊಟ ಮಾಡಿದ ತಕ್ಷಣ ಫುಡ್ ಪಾಯಿಸನ್ ಆಗಿಬಿಡುತ್ತದೆ .ಇದರಿಂದ ಹೊಟ್ಟೆ ನೋವು ,ಭೇದಿ ಮತ್ತು ಎದೆ ನೋವು ಉಂಟಾಗುತ್ತದೆ.ಅಂತಹ ಸಮಸ್ಯೆಯಿಂದ ಬಳಲುತ್ತಿರುವವರು ಈ ಕೆಳಗಿನ ಮನೆಮದ್ದನ್ನು ಅನುಸರಿಸಿ .

೧.ಶುಂಠಿ :

 

 

ಊಟವಾದ ಮೇಲೆ ಒಂದು ಲೋಟ ಶುಂಠಿ ಕಷಾಯ ಕುಡಿಯಿರಿ ,ಸ್ವಲ್ಪ ನೀರಿಗೆ ಸ್ವಲ್ಪ ಶುಂಠಿ ಹಾಕಿ ಅದನ್ನು ಚೆನ್ನಾಗಿ ಕುದಿಸಿ ನಂತರ ತಣ್ಣಗಾದ ಮೇಲೆ ಅದಕ್ಕೆ ಸ್ವಲ್ಪ ಜೇನು ತುಪ್ಪ ಹಾಕಿ ಕುಡಿಯಬೇಕು ,ಅದುಫುಡ್ ಪಾಯಿಸನ್ ನಿಂದ ಆಗುವ ಹೊಟ್ಟೆ ನೋವು ,ಭೇದಿ ಮತ್ತು ಎದೆ ನೋವನ್ನು ವಾಸಿಮಾಡುತ್ತದೆ.

೨.ಮೆಂತ್ಯ :

 

 

ರಾತ್ರಿ .ಮೆಂತ್ಯ ನೆನೆಸಿ ಅದಕ್ಕೆ ಸ್ವಲ್ಪ ಮೊಸರು ಬೆರೆಸಿ ಅದನ್ನು ಕುಡಿಯುವುದರಿಂದ ಹೊಟ್ಟೆ ನೋವು ನಿವಾರಣೆ ಆಗುವುದರ ಜೊತೆ ವಾಂತಿ ನಿಲ್ಲುತ್ತದೆ .

೩.ನಿಂಬೆ ರಸ:

 

 

ದಿನ 1 ರಿಂದ 2 ಬಾರಿ ನಿಂಬೆ ರಸ ಕುಡಿಯುವುದರಿಂದ ಅದು ನಿಮ್ಮ ಹೊಟ್ಟೆಯನ್ನು ಶುಚಿಯಾಗಿಡುತ್ತದೆ.

೪.ತುಳಸಿ:

 

 

 

ಸ್ವಲ್ಪ ತುಳಸಿ ಎಲೆ ತೆಗೆದುಕೊಂಡು ಅದಕ್ಕೆ ಸ್ವಲ್ಪ ಜೇನು ತುಪ್ಪ ಮತ್ತು ಕೊತ್ತಂಬರಿ ಎಲೆಗಳನ್ನೂ ತಿನ್ನಬೇಕು. ಇಲ್ಲವಾದರೆ,ಸ್ವಲ್ಪ ತುಳಸಿ ಎಲೆ ತೆಗೆದುಕೊಂಡು ಅದಕ್ಕೆ ಸ್ವಲ್ಪ ಉಪ್ಪು ,ಕಪ್ಪು ಮೆಣಸು ಮತ್ತು ಸ್ವಲ್ಪ ಮೊಸರು ಸೇರಿಸಿ ತಿನ್ನಬೇಕು

೫.ಬೆಳ್ಳುಳ್ಳಿ:

 

ದಿನ ಬೆಳ್ಳುಳ್ಳಿ ಒಂದು ಸಲ ಸ್ವಲ್ಪ ತಿನ್ನಬೇಕು ಅಥವಾ ಬೆಳ್ಳುಳ್ಳಿ ಎಣ್ಣೆ ಮತ್ತು ಸೋಯಾಬೀನ್ ಎಣ್ಣೆ ಮಿಶ್ರಣ ಮಾಡಿ ಊಟ ವಾದ ಮೇಲೆ ನಿಮ್ಮ ಹೊಟ್ಟೆಯ ಮೇಲೆ ಉಜ್ಜಿಕೊಳ್ಳಬೇಕು.

೬.ಜೀರಿಗೆ :

 

 

ಸ್ವಲ್ಪ ನೀರಿಗೆ 1 ಚಮಚ ಜೀರಿಗೆ ಹಾಕಿ ಕುದಿಸಿ ಅದಕ್ಕೆ ಸ್ವಲ್ಪ ಉಪ್ಪು ಮತ್ತು ಕೊತ್ತಂಬರಿ ಎಲೆಗಳನ್ನೂ ಹಾಕಿ ದಿನಕ್ಕೆ 2 ಬಾರಿ ಕುಡಿಯಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top