fbpx
ಕಿರುತೆರೆ

ಬಿಗ್ ಬಾಸ್ ಕೃಷಿ ತಾಪಂಡರವರ ಈ ನಡೆ ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿದೆ. ಏನದು?

ಬಿಗ್ ಬಾಸ್ ಕೃಷಿ ತಾಪಂಡರವರ ಈ ನಡೆ ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿದೆ. ಏನದು?

 

 

 

ಕನ್ನಡ ಅತಿದೊಡ್ಡ ಜನಪ್ರಿಯ ರಿಯಾಲಿಟಿ ಷೋ ಬಿಗ್ ಬಾಸ್ ಕನ್ನಡದ 5ನೇ ಸೀಸನ್ ಕಾರ್ಯಕ್ರಮದ ಐದನೇ ವಾರದ ಎಲಿಮಿನೇಷನ್ ಆಗಿದ್ದು ನಟಿ ಕೃಷಿ ತಾಪಂಡ ಮನೆಯಿಂದ ಹೊರಬಂದಿದ್ದಾರೆ. ಈ ಮೂಲಕ ಕೃಷಿ ತಾಪಂಡ ತಮ್ಮ ಬಿಗ್ ಬಾಸ್ ಜರ್ನಿಯನ್ನು ಕೇವಲ ಐದು ವಾರಗಳಿಗೆ ಮುಗಿಸಿದ್ದಾರೆ.

 

 

ಈ ವಾರ ಮನೆಯಿಂದ ಹೊರಹೋಗಲು ನಿವೇದಿತಾ, ಕೃಷಿ, ಚಂದ್ರು, ಜಗನ್, ಆಶಿತಾ ಹಾಗೂ ದಿವಾಕರ್ ನಾಮಿನೇಟ್ ಆಗಿದ್ದರು. ನಾಮಿನೇಟ್ ಆಗಿದ್ದ ಇತರೆ ಸ್ಪರ್ಧಿಗಳಿಗೆ ಹೋಲಿಸಿದರೆ, ನಟಿ ಕೃಷಿ ತಾಪಂಡ ಅವರಿಗೆ ಕಮ್ಮಿ ವೋಟ್ ಗಳು ಬಿದಿದ್ದರಿಂದ ಅವರು ಮನೆಯಿಂದ ಹೊರಬಿದ್ದಿದ್ದಾರೆ.

 

 

 

ಇಲ್ಲಿ ಅಚ್ಚರಿ ಮೂಡಿಸುವ ವಿಷವೇನೆಂದರೆ ಮನೆಯಿಂದ ಹೊರ ಹೋಗುವ ಮೊದಲು ಜಯಶ್ರಿನಿವಾಸನ್ ಅವರಿಗೆ ಕೃಷಿ ಸೂಪರ್ ಅಧಿಕಾರವನ್ನು ನೀಡಿದ್ದಾರೆ. ಬಿಗ್ ಬಾಸ್ ಮನೆಗೆ ಕಾಲಿಟ್ಟಾಗಿನಿಂದಲೂ ಜಯ ಶ್ರೀನಿವಾಸನ್ ಜೊತೆ ಅಷ್ಟೇನೂ ಕ್ಲೋಸ್ ಆಗಿ ಇಲ್ಲದಿದ್ದರೂ ಜಯಶ್ರಿನಿವಾಸನ್ ಅವರಿಗೆ ಕೃಷಿ ಸೂಪರ್ ಅಧಿಕಾರವನ್ನು ನೀಡಿರುವುದು ಕೇವಲ ಕೃಷಿ ಜೊತೆ ತುಂಬಾ ಕ್ಲೋಸ್ ಆಗಿದ್ದ ಅನುಪಮಾ,ಆಶಿತಾ ಗೆ ಮಾತ್ರವಲ್ಲದೆ ವೀಕ್ಷಕರಿಗೂ ಅಚ್ಚರಿ ಮೂಡಿಸಿದೆ.

 

 

ಜಯಶ್ರೀನಿವಾಸನ್ ಅವರು ತಮಗೆ ದೊರೆತ ‘ಸೂಪರ್ ಅಧಿಕಾರ’ವನ್ನು ಮುಂದಿನ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಬಳಸಿಕೊಳ್ಳಬೇಕು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top