fbpx
ಕಿರುತೆರೆ

ಜೀ ಬಿಡ್ತಾರಾ ರಾಘವೇಂದ್ರ ಹುಣಸೂರು..?

ಜೀ ಬಿಡ್ತಾರಾ ರಾಘವೇಂದ್ರ ಹುಣಸೂರು..?

 

 

ರಾಘವೇಂದ್ರ ಹುಣಸೂರು ಗೊತ್ತಲ್ಲಾ? ಕನ್ನಡದ ಮನರಂಜನಾ ವಾಹಿನಿಗಳನ್ನು ಬೇರೆಯದ್ದೇ ಲೆವೆಲ್ಲಿಗೆ ತೆಗೆದುಕೊಂಡುಹೋದ ಪ್ರತಿಭೆ. ಬಹುಶಃ ತೀರಾ ಸಣ್ಣ ವಯಸ್ಸಿಗೇ ಚಾನೆಲ್ಲುಗಳಲ್ಲಿ ದೊಡ್ಡ ಹುದ್ದೆಗಳನ್ನು ಪಡೆದದವರು ರಾಘವೇಂದ್ರ ಹುಣಸೂರು. ರಾಘು ಯಾವ ಚಾನೆಲ್ಲಿಗೆ ಹೋಗ್ತಾರೋ ಆ ಚಾನೆಲ್ಲಿನ ಟಿಆರ್‌ಪಿ ಮಾತ್ರವಲ್ಲ ಅದರ ಖದರ್ರೂ ಬದಲಾಗಿಬಿಡುತ್ತದೆ ಅನ್ನೋ ಮಾತಿದೆ.

 

 

ಯಾರದ್ದೋ ಕಾನ್ಸೆಪ್ಟುಗಳಿಗೆ ಕ್ರೆಡಿಟ್ಟು ಪಡೆದು ಸುಮ್ಮನೇ ಪೋಸು ಕೊಡೋ ಚಾನೆಲ್ ಹೆಡ್ಡುಗಳ ನಡುವೆ ರಾಘವೇಂದ್ರ ಹುಣಸೂರು ವೀಕೆಂಡ್ ವಿತ್ ರಮೇಶ್, ಕಾಮಿಡಿ ಕಿಲಾಡಿಗಳು, ಡ್ರಾಮಾ ಜ್ಯೂನಿಯರ್‍ಸ್ ನಂತಾ ಜನಪರ ರಿಯಾಲಿಟಿ ಶೋಗಳನ್ನು ಶುರು ಮಾಡಿದವರು. ಸೂಪರ್ ಹಿಟ್ ಧಾರಾವಾಹಿಗಳನ್ನು ಜನರಿಗೊಪ್ಪಿಸಿದವರು. ಆ ಮೂಲಕ ವಾಹಿನಿಗೆ ಅದ್ಭುತ ಯಶಸ್ಸು ತಂದುಕೊಟ್ಟವರು.

 

 

ಇದ್ದಕ್ಕಿದ್ದಂತೆ ರಾಘವೇಂದ್ರ ಹುಣಸೂರ್ ಬಗ್ಗೆ ಇಷ್ಟೆಲ್ಲಾ ಹೇಳಲೂ ಕಾರಣವಿದೆ. ಅದೇನೆಂದರೆ, ಸದ್ಯ `ಜೀ’ ಕುಟುಂಬದಲ್ಲಿರುವ ರಾಘವೇಂದ್ರ ಮತ್ತೊಂದು ಚಾನೆಲ್‌ಗೆ ಪಾದಯಾತ್ರೆ ಬೆಳೆಸುತ್ತಿದ್ದಾರೆ ಎನ್ನುವ ರೂಮರು ದಟ್ಟವಾಗಿ ಹರಡಿದೆ. ಒಂದು ವೇಳೆ ಈ ಗಾಳಿ ಸುದ್ದಿ ನಿಜವಾದರೆ ಜೀ ಟೀವಿಯ ವರ್ಚಸ್ಸು ಕಳೆಗುಂದಲಿದೆ ಅನ್ನೋ ಮಾತುಗಳೂ ಕೇಳಿಬರುತ್ತಿವೆ.

 

 

ಹಾಗೆಯೇ ರಾಘವೇಂದ್ರ ಹುಣಸೂರು ಬೇರೊಂದು ಚಾನೆಲ್‌ಗೆ ಹೋಗುತ್ತಾರಾದರೆ ಆ ಚಾನೆಲ್ಲು ಹೊಸತನಕ್ಕೆ ತೆರೆದುಕೊಳ್ಳೋದು ನಿಜ. ಅದು ಯಾವ ಚಾನೆಲ್ಲು ಅನ್ನೋದಷ್ಟೇ ಸದ್ಯದ ಪ್ರಶ್ನೆ. ಉತ್ತರಕ್ಕಾಗಿ ಹುಣಸೂರು ಬಾಯಿಬಿಡಬೇಕಷ್ಟೇ…!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top