fbpx
ಉಪಯುಕ್ತ ಮಾಹಿತಿ

ವಿಜ್ಞಾನದ ಪ್ರಕಾರ ಈ ಐದು ಲಕ್ಷಣಗಳು ಇದ್ದರೆ ಸಕ್ಕತ್ ಬುದ್ದಿವಂತರಂತೆ , ಆಶ್ಚರ್ಯ ಆದ್ರು ಇದು ನಿಜ ನೀವೇನಾದ್ರು ಈ ಲಿಸ್ಟ್ ನಲ್ಲಿ ಇದ್ದೀರಾ ಒಂದ್ಸಾರಿ ನೋಡ್ಕೊಳ್ಳಿ

ವಿಜ್ಞಾನದ ಪ್ರಕಾರ ಈ ಐದು ಲಕ್ಷಣಗಳು ಇದ್ದರೆ ನೀವೇ ಹೆಚ್ಚು ಬುದ್ಧಿವಂತರು… ಆಶ್ಚರ್ಯ ಅನ್ನಿಸಿದರೂ ಸಹ ಇದು ನಿಜ

 

 

ಅನೇಕ ಬಾರಿ ಜೀವನದಲ್ಲಿ ನಮ್ಮನ್ನು ನಾವೇ ಕಡೆಗಣಿಸಿ ಕೊಳ್ಳುತ್ತೇವೆ. ನಿಮ್ಮ  ಮನೆಯವರು ಕೂಡ ನಿಮ್ಮನ್ನು ಅನೇಕ ಬಾರಿ ನೀನು ಸೋಮಾರಿ, ಒಂದು ಕೆಲಸ ಮಾಡುವುದಿಲ್ಲ ಅಂತ ಬಯ್ಯುತ್ತಿರುತ್ತಾರೆಯೇ.. ಆದರೆ ಇದರಲ್ಲಿರುವ ವಿಷಯ ಏನೆಂದರೆ ಈ ಕೆಲವು ಗುಣಗಳು ನಿಮ್ಮಲ್ಲಿ ಇದ್ದರೆ ವಿಜ್ಞಾನದ ಪ್ರಕಾರ ನೀವು ಅಂದುಕೊಂಡಿರುವುದಕ್ಕಿಂತ ಜಾಸ್ತಿ ಬುದ್ಧಿವಂತರು ಎಂದು ಅನ್ನಿಸುತ್ತದೆ. ಯಾಕೆ ಎಂದು ಮುಂದೆ ನೀವೇ ಓದಿ ಇದನ್ನು ತಿಳಿದುಕೊಂಡರೆ ನೀವು ಸಹ ಆಶ್ಚರ್ಯ ಪಡುತ್ತೀರಿ.

1.ನೀವು ನಿಮ್ಮ ಶಾಲಾ ಕಾಲೇಜಿನಲ್ಲಿ ಕೊನೆಯ ಬೆಂಚಿನಲ್ಲಿ ಕುಳಿತುಕೊಳ್ಳುವವರಾಗಿದ್ದರೆ.

 

 

ನೀವು ನಿಮ್ಮ ಶಾಲೆಯಲ್ಲಿ ಮತ್ತು ಕಾಲೇಜಿನಲ್ಲಿ ಕೊನೆಯ ಬೆಂಚಿನಲ್ಲಿ ಕುಳಿತು ಯಾವಾಗಲೂ ಕನಸು ಕಾಣುತ್ತಾ ನನ್ನ ಜೀವನ ಏನಾಗುತ್ತದೆ ?  ಎಂದು ಯೋಚನೆ ಮಾಡಿದ್ದರೆ ಇಲ್ಲಿದೆ ನಿಮಗೊಂದು ಒಳ್ಳೆಯ ಸುದ್ದಿ. ವಿಜ್ಞಾನಿಗಳ ಪ್ರಕಾರ ಒಂದು ಕೆಲಸ ಮಾಡುವಾಗ ನಿಮ್ಮ ಗಮನ ಆ ಕಡೆ ಈ ಕಡೆ ಹೋದರೆ ಒಂದೇ ಸಲಕ್ಕೆ ನಿಮಗೆ ಒಂದಕ್ಕಿಂತ ಹೆಚ್ಚು ಕೆಲಸ ಮಾಡುವ ಶಕ್ತಿ ಇದೆ ಅಂತ ಅರ್ಥ . ಹಾಗೆ ಹಗಲುಗನಸು ಕಾಣುವವರಿಗೆ ನೆನಪಿನ ಶಕ್ತಿ ಜಾಸ್ತಿ.

 

2. ನೀವು ಜನರ ಜೊತೆಗೆ ಹೆಚ್ಚಾಗಿ ಬೆರೆಯುವುದಕ್ಕೆ ಇಷ್ಟಪಡುವುದಿಲ್ಲವೆ.

 

 

ನಿಮ್ಮ ಕೈಲಿ ಒಂದು ಪುಸ್ತಕ ಇಂದು ಬಿಟ್ಟರೆ ಈ ಲೋಕವನ್ನೇ ಮರೆತು ಬಿಡುತ್ತೀರಾ ?  ಇದರ ಜೊತೆಗೆ ಸ್ವಲ್ಪ ಕಾಫಿ ಅಥವಾ ಟೀ ಸಿಕ್ಕಿಬಿಟ್ಟರೆ ಸ್ವರ್ಗಕ್ಕೆ ಮೂರೇ ಮೆಟ್ಟಿಲು ,ಮತ್ತೇನೂ ಬೇಡ ಎನಿಸುತ್ತದೆಯೇ  ? ಯಾರೂ ಬೇಡ ಅಲ್ಲವೇ ? ನೀವು ನಿಮ್ಮ ಜೊತೆಯಲ್ಲಿಯೇ ಜಾಸ್ತಿ ಹೆಚ್ಚು ಸಮಯ ಕಳೆಯುವುದಕ್ಕೆ ಇಷ್ಟಪಡುತ್ತೀರಾ ? 90 % ಅಂತರ್ಮುಖಿಗಳಾಗಿ ಓದುವ ಹವ್ಯಾಸವಿರುತ್ತದೆ. ಹಾಗೆ ಯಾರೂ ಚಿಕ್ಕ ವಯಸ್ಸಿನಿಂದ ಓದುವ ಹವ್ಯಾಸ ಬೆಳೆಸಿಕೊಂಡಿರುತ್ತಾರೆ  ಅಂಥವರು ಮುಂದೆ ಬುದ್ಧಿವಂತರಾಗಿರುತ್ತಾರೆ ಮತ್ತು ತಮ್ಮನ್ನು ತಾವು ಚೆನ್ನಾಗಿ ವ್ಯಕ್ತ ಪಡಿಸಿಕೊಳ್ಳುತ್ತಾರೆ.

 

3. ನೀವು ನಿಮ್ಮ ಎಡಗೈಯನ್ನು ಹೆಚ್ಚಾಗಿ ಬಳಸುತ್ತೀರಾ

 

 

ಎಡಗೈಯನ್ನು ಅಧಿಕವಾಗಿ ಬಳಸುವವರಿಗೆ ವಿಭಿನ್ನವಾದ ಯೋಚನಾ ಶಕ್ತಿ ಇರುತ್ತದೆ. ತೊಂಬತ್ತರ ದಶಕದಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಎಡಗೈಯನ್ನು ಉಪಯೋಗಿಸುವವರು ಆಲೋಚನೆಗಳು ವಿಭಿನ್ನವಾಗಿ ಇರುವುದರಿಂದ ಅವರು ಎರಡು ಸಂಬಂಧ ಇಲ್ಲದಿರುವ ವಸ್ತುಗಳಲ್ಲೂ ಸಹ ಸಂಬಂಧವನ್ನು ಹುಡುಕುತ್ತಾರೆ .ಇವರಲ್ಲಿ ಕ್ರಿಯಾಶೀಲತೆ ಜಾಸ್ತಿಯಿದ್ದು ಮತ್ತು ಯಾವುದೇ ಸಮಸ್ಯೆ ಇದ್ದರೂ ಸಹ ಅದಕ್ಕೆ ಬೇಗ ಒಂದು ಉಪಾಯ ಕಂಡು ಹಿಡಿಯುತ್ತಾರೆ ಎಂದು ಸಾಬೀತಾಗಿದೆ.

 

4. ನೀವು ಅತಿಯಾಗಿ ಒತ್ತಡಕ್ಕೆ ಒಳಗಾಗುತ್ತೀರ

 

 

ನಿಮಗೆ ಎಲ್ಲರೂ ಮಾನಸಿಕ ಒತ್ತಡ ಒಳ್ಳೆಯದಲ್ಲ ಅಂತ ಸುಮಾರು ಬಾರಿ ಹೇಳಿರುತ್ತಾರೆ. ಆದರೆ ಮಾನಸಿಕ ಒತ್ತಡವನ್ನು ಸರಿಯಾಗಿ ನಿಭಾಯಿಸಲು ಹೋದರೆ ಅದರಿಂದ ತುಂಬಾ ಉಪಯೋಗ ಇದೆಯಂತೆ. ಈ ಒತ್ತಡವು ಹಿತ ಮಿತವಾಗಿದ್ದರೆ ನಮ್ಮ ಎಷ್ಟೋ ದಿನ ನಿತ್ಯದ ಕೆಲಸಗಳಿಗೆ ಸಹಾಯ ಆಗುತ್ತದೆ. ಯಾರು ಹೆಚ್ಚು ಒತ್ತಡಕ್ಕೆ ಒಳಗಾಗಿರುತ್ತಾರೆ ಅವರು ಬೇಗ ಚೆನ್ನಾಗಿ ಕೆಲಸ ಮಾಡಿ ಮುಗಿಸುತ್ತಾರೆ ಎಂದು ಸಂಶೋಧಕರು ಹೇಳಿದ್ದಾರೆ.

 

5.ನೀವು ನಕ್ಕು ಬೇರೆಯವರನ್ನೂ ತುಂಬಾ ನಗಿಸುತ್ತೀರ.

 

 

ನಿಮ್ಮಲ್ಲಿ ನೀವು ನಕ್ಕು ನಿಮ್ಮ ಜೊತೆ ಇರುವವರನ್ನು ನಗಿಸುವ ಸ್ವಭಾವ ಇದ್ದರೆ ನಿಮ್ಮ ಮೆದುಳು ತುಂಬಾ ಚೆನ್ನಾಗಿ ಕೆಲಸ ಮಾಡುತ್ತೆ ಚುರುಕಾಗಿದೆ ಅಂತ ಅರ್ಥ .1990 ರಲ್ಲಿ ಮೈಕಲ್ ಎ ಜಾನ್ ಹೇಳುವ ಪ್ರಕಾರ ನೀವು ಹಾಸ್ಯ ಭರಿತರಾಗಿದ್ದರೆ ನಿಮ್ಮಲ್ಲಿ ತೊಂದರೆಗಳನ್ನು ಬಗೆಹರಿಸುವ ಶಕ್ತಿ ಹೆಚ್ಚಾಗಿ ಇದೆಯಂತೆ.

ಹಾಗಾದರೆ ನಿಮಗೆ ಗೊತ್ತಿಲ್ಲದೇ ನಿಮ್ಮಲ್ಲಿ ತುಂಬ ಬುದ್ಧಿ ಇದೆ. ಅದನ್ನು ತಿಳಿದು ಅರಿತು ಚೆನ್ನಾಗಿ  ಉಪಯೋಗಿಸಿಕೊಳ್ಳಿ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top