fbpx
ಭವಿಷ್ಯ

ಕೆಲವು ಗ್ರಹಗಳು ಜಾತಕದಲ್ಲಿ ಜೊತೆಗಿದ್ದರೆ ಅದೃಷ್ಟ ಒದ್ದುಕೊಂಡು ಬರುತ್ತೆ , ಗುರು ಗ್ರಹ ಯಾವ ಸ್ಥಾನದಲ್ಲಿದ್ರೆ ಅದೃಷ್ಟ ಇಲ್ಲವಾದ್ರೆ ದುರದೃಷ್ಟ ಹಾಗೇನೇ ಗುರು ಚಾಂಡಾಲ ಯೋಗ ಅಂದ್ರೆ ಏನು ತಿಳ್ಕೊಳ್ಳಿ

ಗುರು ರಾಹು ಜೊತೆಗಿದ್ದರೆ ಗುರು ಮಂಗಳ ಯೋಗ ಕೂಡಿ ಬರುತ್ತದೆ.

 

 

 

ಗುರು ಗ್ರಹದ ಕಾರ್ಯಪ್ರವೃತ್ತಿ, ಅಭಿವೃದ್ಧಿ,  ಮತ್ತು ಆಶೀರ್ವಚನ. ಗುರು ಗ್ರಹವು  ಯಾವ ರಾಶಿಯಲ್ಲಿದ್ದರೆ ಆತನು ಶುಭ. ಒಳ್ಳೆಯ ಉಚ್ಛ ಸ್ಥಾನದಲ್ಲಿದ್ದರೆ ಗುರುಗ್ರಹದಿoದ ಶುಭ ಕಾರ್ಯಗಳು ಸರಾಗವಾಗಿ ನೆರವೇರುತ್ತವೆ. ಗುರು ನೀಚನಾದರೆ ಅಶುಭ ಯೋಗಗಳು ಸಹ ಉಂಟಾಗುತ್ತವೆ.

ಗುರುವಿನಂತೆ ಶಿಷ್ಯನೂ ಇರುವನು ಎಂಬ ಗಾದೆ ಮಾತಿನಂತೆ ಗುರುಗ್ರಹ ಯಾವ ಉಚ್ಚ ಸ್ಥಾನದಲ್ಲಿದ್ದರೆ ಜಾತಕ ಭವಿಷ್ಯ ಚೆನ್ನಾಗಿರುತ್ತದೆ. ಅದೇ ಗುರು ಗ್ರಹ ನೀಚನಾಗಿದ್ದರೆ ಜಾತಕ ಭವಿಷ್ಯ ಕೂಡ ಕೆಟ್ಟದ್ದಾಗಿರುತ್ತದೆ.

ಗುರುವೇ ಶಿಷ್ಯರಿಗೆ ಬುದ್ಧಿ ಕಲಿಸುವ ಹಾಗೆ ಗುರು ತನ್ನದೇ ಆದ ರೀತಿಯಲ್ಲಿ ಜಾತಕನ ವ್ಯಕ್ತಿಯಲ್ಲಿ ಪಾತ್ರ ವಹಿಸುತ್ತಾನೆ .

 

 

ಒಂದು ಜಾತಕದಲ್ಲಿ ಗುರು ರಾಹು  ಜೊತೆಗಿದ್ದರೆ ಜ್ಯೋತಿಷ್ಯದಲ್ಲಿ ಅನೇಕ ರೀತಿಯಲ್ಲಿ ವಿವರಣೆ ನೀಡುತ್ತಾರೆ. ಆದರೆ ಜಾತಕನು ಯಾವುದೇ ರಾಶಿಯಲ್ಲಿ ಇದ್ದರು ಸಹ ಮನೆಯ ಅಭಿವೃದ್ಧಿ, ವಂಶಾಭಿವೃದ್ಧಿ, ಹಣ, ಸಂಪತ್ತು ,ವಜ್ರ ‘ವೈಡೂರ್ಯಗಳು ತುಂಬಿ ತುಳುಕುತ್ತದೆ.

ಹೀಗೆ ಹೆಣ್ಣು ಮಕ್ಕಳ ಜಾತಕದಲ್ಲಿ ಗುರು- ರಾಹು ಒಂದೇ ರಾಶಿಯಲ್ಲಿ ಇದ್ದರೆ ಮದುವೆ ಆಗಿ ಹೋಗುವ ಗಂಡನ ಮನೆಯಲ್ಲಿ ಅಭಿವೃದ್ಧಿ ಹೊಂದುತ್ತಾರೆ.

ಗುರು ಮತ್ತು ಮಂಗಳ ಗ್ರಹದ ಯೋಗದಿಂದ ಕೂಡ ಬೃಹತ್ ಅಭಿವೃದ್ಧಿಯೂ ಉಂಟಾಗಬಹುದು .

 

 

ಗುರು ಅಭಿವೃದ್ಧಿಯನ್ನು ಉಂಟು ಮಾಡಿದರೆ ಗುರು- ರಾಹು ಸಂಯೋಗ ಬೃಹತ್ ಅಭಿವೃದ್ಧಿಯ ಯೋಗವನ್ನು ತಂದುಕೊಡುವುದು. ಜ್ಯೋತಿಷ್ಯರು ಇದನ್ನು ಗುರು ಚಾಂಡಾಲ ಯೋಗ ಎಂದು ಸಹ ಕರೆಯುತ್ತಾರೆ.

ಜ್ಯೋತಿಷಿಗಳ ಪ್ರಕಾರ ಗುರು ರಾಹು ಸಿಂಹ ರಾಶಿಯಲ್ಲಿದ್ದರೆ ಅನೇಕ ಅನಾಹುತಗಳಿಗೆ ಕಾರಣವಾಗುತ್ತದೆ ಎಂದು ಹೇಳುತ್ತಾರೆ. ಆದರೆ ಅದರ ಬದಲು ದೇಶಕ್ಕೆ ಒಳ್ಳೆಯದಾಗುತ್ತದೆ ಎಂದು ಸಹ ಹೇಳುತ್ತಾರೆ.

 

ಗುರು- ಚಂದ್ರ ಜೊತೆಗಿದ್ದರೆ ಗಜಕೇಸರಿ ಯೋಗ ಉಂಟಾಗುವುದು. ಅಂಥವರಿಗೆ ಹಣ, ಆಸ್ತಿ, ಸಿರಿ, ಸಂಪತ್ತು, ಒಳ್ಳೆಯ ಬಾಳ ಸಂಗಾತಿ ಮತ್ತು  ಮಕ್ಕಳು ಎಲ್ಲವೂ ಸಹ ಲಭಿಸುವುದು.

ಆದರೆ ಗುರು- ಚಂದ್ರನ ಈ ಗಜಕೇಸರಿ  ಸಂಯೋಗವು ನಕ್ಷತ್ರದ ಮೇಲೆ ನಿರ್ಧಾರವಾಗಿರುತ್ತದೆ. ನಕ್ಷತ್ರವು ಗುರುವಿನ ನಕ್ಷತ್ರವಾಗಿದ್ದರೆ ಮಾತ್ರ ಶುಭ ಫಲಗಳು ದೊರೆಯುವವು.

ಒಂದು ವೇಳೆ ಬೇರೆ ಗ್ರಹದ ನಕ್ಷತ್ರವಾಗಿದ್ದರೆ  ಯಾವುದೇ ಲಾಭವೂ ಸಹ ಆಗುವುದಿಲ್ಲ. ಶುಭಯೋಗವೂ ಸಹ ಕೂಡಿ ಬರುವುದಿಲ್ಲ. ಇದರ ಬದಲಾಗಿ ಎಲ್ಲಾ ವ್ಯಯ ಭಾವದಲ್ಲಿ ಸಾಗುವುದು ಎಲ್ಲವೂ ನಾಶವಾಗುವುದು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top