fbpx
ಬಿಗ್ ಬಾಸ್

ಕೃಷಿ ತಾಪಂಡ ಅಪ್ಪ ಅಪ್ಪ ಎನ್ನುತ್ತಿದ್ದ ಸಿಹಿ ಕಹಿ ಚಂದ್ರು ಕಹಿಯಾದ್ರು ಯಾಕೆ ?

 

ಕನ್ನಡ ಅತಿದೊಡ್ಡ ಜನಪ್ರಿಯ ರಿಯಾಲಿಟಿ ಷೋ ಬಿಗ್ ಬಾಸ್ ಕನ್ನಡದ 5ನೇ ಸೀಸನ್ ಕಾರ್ಯಕ್ರಮದ ಐದನೇ ವಾರದ ಎಲಿಮಿನೇಷನ್ ಆಗಿದ್ದು ನಟಿ ಕೃಷಿ ತಾಪಂಡ ಮನೆಯಿಂದ ಹೊರಬಂದಿದ್ದಾರೆ. ಈ ಮೂಲಕ ಕೃಷಿ ತಾಪಂಡ ತಮ್ಮ ಬಿಗ್ ಬಾಸ್ ಜರ್ನಿಯನ್ನು ಕೇವಲ ಐದು ವಾರಗಳಿಗೆ ಮುಗಿಸಿದ್ದಾರೆ.

 

 

ಈ ವಾರ ಮನೆಯಿಂದ ಹೊರಹೋಗಲು ನಿವೇದಿತಾ, ಕೃಷಿ, ಚಂದ್ರು, ಜಗನ್, ಆಶಿತಾ ಹಾಗೂ ದಿವಾಕರ್ ನಾಮಿನೇಟ್ ಆಗಿದ್ದರು. ನಾಮಿನೇಟ್ ಆಗಿದ್ದ ಇತರೆ ಸ್ಪರ್ಧಿಗಳಿಗೆ ಹೋಲಿಸಿದರೆ, ನಟಿ ಕೃಷಿ ತಾಪಂಡ ಅವರಿಗೆ ಕಮ್ಮಿ ವೋಟ್ ಗಳು ಬಿದಿದ್ದರಿಂದ ಅವರು ಮನೆಯಿಂದ ಹೊರಬಿದ್ದಿದ್ದಾರೆ.

 

 

ಹೀಗೆ ಸೂಪರ್ ಸಂಡೆ ಯ ವಿಶೇಷ ಕಾರ್ಯಕ್ರಮದಲ್ಲಿ ಈ ವಾರ ಎಲಿಮಿನೇಟ್ ಆದ ಕೃಷಿ ತಾಪಂಡರವರನ್ನು ಮಾತಿಗೆಳೆದ ಸುದೀಪ್ ಎಲ್ಲ ಅಭ್ಯರ್ಥಿಗಳ ಫೋಟೋ ತೋರಿಸಿ ಅವ್ರ ಬಗೆಗಿನ ಅಭಿಪ್ರಾಯಗಳನ್ನು ತಿಳಿಸುವಂತೆ ಕೋರುತ್ತಾರೆ ಆಗ ಸಿಹಿ ಕಹಿ ಚಂದ್ರು ಫೋಟೋ ನೋಡಿ ಹೀಗೆ ಹೇಳಿದರು.

 

ಮನೆಯಲ್ಲಿ ಹಿರಿಯರು ಇವರು , ನಾನು ಇವರನ್ನು ತುಂಬಾ ಗೌರವಿಸುತ್ತೇನೆ , ಒಬ್ಬ ವ್ಯಕ್ತಿಯಾಗಿ ನಾನು ತುಂಬಾ ಪ್ರೀತಿಸುತ್ತೇನೆ , ಆದರೆ ಕೆಲವು ವಿಷಯಗಳಲ್ಲಿ ತುಂಬಾ ಸೇಫ್ ಆಗಿ ಆಡಲು ಪ್ರಯತ್ನ ಪಡುತ್ತಿದ್ದಾರೆ , ಯಾವುದೇ ಕಾಂಟ್ರವರ್ಸಿ ಗೆ, ಜಗಳ , ಸಮಸ್ಯೆಗೆ ಸಿಕ್ಕಿ ಹಾಕಿಕೊಳ್ಳಲು ಇಷ್ಟ ಪಡುವುದಿಲ್ಲ , ಅಲ್ಲಿ ಕಾಣಿಸಿಕೊಳ್ಳಲು ಇಷ್ಟ ಪಡುವುದಿಲ್ಲ ,
ಉದಾಹರಣೆಗೆ ಆದಿನ ಹಾಲಿನ ವಿಷ್ಯಕ್ಕೆ ಆದ ದೊಡ್ಡ ರಾದ್ದಂತ ಎಲ್ಲರಿಗು ಗೊತ್ತೆ ಇದೆ ಆದಿನ ಹಾಲನ್ನು ಬಚ್ಚಿಡುವ ವಿಷ್ಯ ನನಗೆ ಗೊತ್ತಿತ್ತು , ಆಶಿತಾ , ಜಗನ್, ಅನುಪಮಾ ,ಚಂದ್ರು ಎಲ್ಲರಿಗು ಗೊತ್ತಿತ್ತು ಆದರೂ ಶುಕ್ರವಾರ ಈ ವಿಷ್ಯದ ಪ್ರಸ್ತಾಪ ಆಗುತ್ತದೆ ಎಂದು ತಿಳಿದಾಗ ಗುರುವಾರ ನಾವು ಹೀಗೆ ಮಾಡಬಾರದಿತ್ತು , ನನಗೆ ಗೊತ್ತಿರಲಿಲ್ಲ ಎಂದರು ಆದರೆ ಅವರು ಆ ಪ್ಲಾನ್ ನಲ್ಲಿ ಇದ್ದರು ಅವರಿಗೆ ಮೊದಲೇ ಎಲ್ಲವು ತಿಳಿದಿತ್ತು .

 

 

ಆ ಟೈಮ್ ನಲ್ಲಿ ಆದಿನ ಹಾಲಿನ ವಿಷ್ಯಕ್ಕೆ ಆದ ದೊಡ್ಡ ರಾದ್ದಂತ ಆದಾಗ ಸುಮ್ಮನೆ ಇದ್ದು ಬಿಟ್ಟರು ಹಾಲು ಬಚ್ಚಿಟ್ಟಿದ್ದು ಒಂದು ಒಳ್ಳೆಯ ಕಾರಣಕ್ಕಾಗಿ ,ಆದ್ದರಿಂದ ಉದ್ದೇಶ ಒಳ್ಳೆಯದಾಗಿದ್ದರೆ ಯಾವುದಕ್ಕೂ ಹೆದರುವ ಸಮಸ್ಯೆ ಇಲ್ಲ .

ಅಷ್ಟೇ ಅಲ್ಲ ಈ ವಾರದ ಎಲಿಮಿನೇಷನ್ ನಡೆಯುವಾಗ ಆ ಈರುಳ್ಳಿ ಸಿಪ್ಪೆಯ ವಿಷಯವಾಗಿ ಆಚಾರ್ಯರಿಗೆ ಬೈದದ್ದು ಆದರೆ ಸೋಫಾದಲ್ಲಿ ಕೂರುವವರೆಗೂ ತಮಗೆ ಅದಕ್ಕೆ ಕಾರಣ ಚಂದ್ರು ಅವ್ರು ಎಂದು ಗೊತ್ತಿರಲಿಲ್ಲ ಎಂದು ಹೇಳಿದರು .

ತುಂಬಾ ಸೇಫ್ ಆಗಿ ಇರಲು ಪ್ರಯತ್ನ ಪಡುತ್ತಿದ್ದಾರೆ ಎಂದು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top