fbpx
ಬಿಗ್ ಬಾಸ್

ಡಬಲ್ ಗೇಮ್ ಆಡ್ತಾರೆ ಜಯ ಶ್ರೀನಿವಾಸನ್

 

ಕನ್ನಡ ಅತಿದೊಡ್ಡ ಜನಪ್ರಿಯ ರಿಯಾಲಿಟಿ ಷೋ ಬಿಗ್ ಬಾಸ್ ಕನ್ನಡದ 5ನೇ ಸೀಸನ್ ಕಾರ್ಯಕ್ರಮದ ಐದನೇ ವಾರದ ಎಲಿಮಿನೇಷನ್ ಆಗಿದ್ದು ನಟಿ ಕೃಷಿ ತಾಪಂಡ ಮನೆಯಿಂದ ಹೊರಬಂದಿದ್ದಾರೆ. ಈ ಮೂಲಕ ಕೃಷಿ ತಾಪಂಡ ತಮ್ಮ ಬಿಗ್ ಬಾಸ್ ಜರ್ನಿಯನ್ನು ಕೇವಲ ಐದು ವಾರಗಳಿಗೆ ಮುಗಿಸಿದ್ದಾರೆ.

 

 

ಈ ವಾರ ಮನೆಯಿಂದ ಹೊರಹೋಗಲು ನಿವೇದಿತಾ, ಕೃಷಿ, ಚಂದ್ರು, ಜಗನ್, ಆಶಿತಾ ಹಾಗೂ ದಿವಾಕರ್ ನಾಮಿನೇಟ್ ಆಗಿದ್ದರು. ನಾಮಿನೇಟ್ ಆಗಿದ್ದ ಇತರೆ ಸ್ಪರ್ಧಿಗಳಿಗೆ ಹೋಲಿಸಿದರೆ, ನಟಿ ಕೃಷಿ ತಾಪಂಡ ಅವರಿಗೆ ಕಮ್ಮಿ ವೋಟ್ ಗಳು ಬಿದಿದ್ದರಿಂದ ಅವರು ಮನೆಯಿಂದ ಹೊರಬಿದ್ದಿದ್ದಾರೆ.

 

 

ಹೀಗೆ ಸೂಪರ್ ಸಂಡೆ ಯ ವಿಶೇಷ ಕಾರ್ಯಕ್ರಮದಲ್ಲಿ ಈ ವಾರ ಎಲಿಮಿನೇಟ್ ಆದ ಕೃಷಿ ತಾಪಂಡರವರನ್ನು ಮಾತಿಗೆಳೆದ ಸುದೀಪ್ ಎಲ್ಲ ಅಭ್ಯರ್ಥಿಗಳ ಫೋಟೋ ತೋರಿಸಿ ಅವ್ರ ಬಗೆಗಿನ ಅಭಿಪ್ರಾಯಗಳನ್ನು ತಿಳಿಸುವಂತೆ ಕೋರುತ್ತಾರೆ ಆಗ ಜಯ ಶ್ರೀನಿವಾಸನ್ ರವರ ಫೋಟೋ ನೋಡಿ ಹೀಗೆ ಹೇಳಿದರು.

ಅವರು ಅವ್ರದ್ದೇ ಲೋಕದಲ್ಲಿ ಇದ್ದಾರೆ , ಬದಲಾಗಿದ್ದಾರೆ ಅಂದುಕೊಂಡರೆ ಅದು ನಮ್ಮ ತಪ್ಪು , ಅವರಿಗೆ ಎಲ್ಲಿ ಪ್ರಾಮುಖ್ಯತೆ ಸಿಗುತ್ತದೆಯೋ ಅಲ್ಲಿರುತ್ತಾರೆ , ನಮ್ಮ ಗುಂಪಿಗೆ ಬರುವಾಗ ಅವರ ಗುಂಪಿನ ಸದಸ್ಯರಾದ ದಿವಾಕರ್ , ಸಮೀರ್ ಇತರರ ಜೊತೆ ಜಗಳ ಆಡಿದಾಗ ನಮ್ಮ ಗುಂಪಿಗೆ ಬರುತ್ತಿದ್ದರು .

 

 

ಅವರೇ ಗುಂಪಿನ ಸದಸ್ಯರು ಜಗಳ ಆಯಿಕೊಂಡು ಅವರ ಮೇಲೆ ಬಂದು ನಮ್ಮ ಬಳಿ ಹೇಳುತ್ತಾರೆ , ಉದಾಹರಣೆಗೆ ದಿವಾಕರ್ ರವರ ಜೊತೆ ಜಗಳ ಆಡಿಕೊಂಡಾಗ ಕೃಷಿ ಗುಂಪಿನ ಬಳಿ ಬಂದು ತಾಯಿ ಮೇಲೆ ಆಣೆ ಮತ್ತೆ ಅವರೊಂದಿಗೆ ಮಾತಾಡುವುದಿಲ್ಲ ಅಂದಿದ್ದರಂತೆ ಅದಕ್ಕೆ ಕೃಷಿ ನಾವೆಲ್ಲಾ ಒಂದೇ ಮನೆಯಲ್ಲಿ ಇದ್ದೇವೆ ಹಾಗೆ ಆಗುವುದಿಲ್ಲ ಅಂದಿದ್ದರಂತೆ .

ಮಾರನೇ ದಿನ ಮತ್ತೆ ಮಾತಾಡುತ್ತಿದ್ದರು ಹೀಗೆ ಜಯ ಶ್ರೀನಿವಾಸನ್ ಎರಡು ಕಡೆ ಇರುತ್ತಾರಂತೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top