fbpx
ದೇವರು

ಭಕ್ತರು ಕೇವಲ ಒಂದು ಅಗಳು ಅನ್ನವನ್ನು ಪ್ರೀತಿಯಿಂದ ಕೊಟ್ಟರು ಸಾಕು ಶ್ರೀ ಕೃಷ್ಣ ಅವರ ಕಷ್ಟಗಳನ್ನು ಪರಿಹಾರ ಮಾಡುತ್ತಾನೆ ಎಂಬ ಕಥೆ ತಿಳ್ಕೊಂಡ್ರೆ ಹೃದಯ ತುಂಬಿ ಬರುತ್ತೆ

ಪ್ರತಿಯೊಬ್ಬರೂ ಓದಲೇಬೇಕಾದ ಮಹಾಭಾರತದ ನೀತಿಕತೆ.

 

 

ಒಂದು ದಿನ ಎಲ್ಲವನ್ನೂ ಬಿಟ್ಟು ಹೋಗಲೇಬೇಕು . ಪಾಂಡವರು ವನವಾಸದಲ್ಲಿದ್ದಾಗ ದೂರ್ವಾಸ ಮಹರ್ಷಿಗಳು ಒಮ್ಮೆ ದಿಢೀರೆಂದು ಬಂದು ದ್ರೌಪದಿಗೆ ತನ್ನ 400 ಶಿಷ್ಯರೊಂದಿಗೆ ಊಟಕ್ಕೆ ಬರುವನೆಂದು ಹೇಳಿ ಸ್ನಾನಕ್ಕೆ ಹೊರಟರು.

ಆಗ ತಾನೇ ಎಲ್ಲರೂ ಊಟ ಮುಗಿಸಿ ಆಗಿತ್ತು ಮತ್ತು ಪಾತ್ರೆಗಳನ್ನು ಸಹ ತೊಳೆದು ಇಡಲಾಗಿತ್ತು . ನಾನ್ನೂರು ಜನರಿಗೆ ಬಡಿಸಲು ಆಹಾರ ಇಲ್ಲದಿದ್ದರಿಂದ ದ್ರೌಪದಿಯು ಕಂಗೆಟ್ಟು ಕೃಷ್ಣನಿಗೆ ಪ್ರಾರ್ಥನೆಯನ್ನು ಸಲ್ಲಿಸಿದಳು.

 

 

ಕೃಷ್ಣನು ತಕ್ಷಣವೇ ದ್ರೌಪದಿಯ ಎದುರಿಗೆ ಪ್ರತ್ಯಕ್ಷನಾಗಿ ತನಗೆ ಬಹಳ ಹಸಿವಾಗುತ್ತಿದೆ ಏನಾದರೂ  ದ್ರೌಪದಿಯು ತನಗೇನಾದರೂ ತಿನ್ನಲು  ಕೊಡಲೇಬೇಕೆಂದು ಹಠ ಹಿಡಿದನು. ಒಂದು ಪಾತ್ರೆಯಲ್ಲಿ ಒಂದೇ ಒಂದು ಅನ್ನದ ಅಗುಳು ಇದ್ದುದ್ದನ್ನು ಕಂಡು ಅದನ್ನೇ ತಿಂದ. ತಿಂದ ಪಾತ್ರೆಯನ್ನು ಕೃಷ್ಣನು ಅಕ್ಷಯ ಪಾತ್ರೆಯಾಗಿ ಪರಿವರ್ತನೆಯಾಗಿ ಮಾಡಿಬಿಟ್ಟನು.

ದುರ್ವಾಸ ಮುನಿಗಳ ಜೊತೆಗೆ  ನಾನ್ನೂರು ಋಷಿಗಳು ಸ್ನಾನದ ನಂತರ ಊಟಕ್ಕೆಂದು ದ್ರೌಪದಿಯ ಬಳಿ ಕರೆ ತಂದಾಗ ಆ ಅಕ್ಷಯ ಪಾತ್ರೆಯಿಂದ ಎಷ್ಟು ಊಟ ಬಡಿಸಿದರೂ ಸಹ ಮುಗಿಯಲೇ ಇಲ್ಲ .ಆಹಾರವನ್ನು  ಕೊಡುತ್ತಲೇ ಇರುವ ಪಾತ್ರೆಗೆ  ಭಾರತದಲ್ಲಿ ಅಕ್ಷಯ ಪಾತ್ರೆ ಎಂದು ಕರೆಯುತ್ತಾರೆ.

 

 

ಕೃಷ್ಣ ಮತ್ತು ಸುಧಾಮನ ಕತೆಯೂ ಹೀಗೆಯೇ ಇದೆ.

 

ಸುಧಾಮನ ಪತ್ನಿಯು ಬಡತನವನ್ನು ತಾಳಲಾರದೆ ಸುಧಾಮನು ಕೃಷ್ಣನ ಬಳಿಗೆ ಹೋಗಿ ಏನಾದರೊಂದನ್ನು ಯಾಚಿಸಬೇಕೆಂದು ಕೋರಿಕೊಂಡಳು. ಕೃಷ್ಣನ ಬಳಿ ಬರಿಗೈಯಲ್ಲಿ ಹೋಗಲು ಸಾಧ್ಯವಿಲ್ಲವೆಂದು ಸುಧಾಮನು ಹೇಳಿದಾಗ…. ಆತನ ಪತ್ನಿಯು ಮೂರು ಹಿಡಿಯಷ್ಟು ಅವಲಕ್ಕಿಯನ್ನು ಒಂದು ಬಟ್ಟೆಯಲ್ಲಿ ಕಟ್ಟಿ ಕೊಟ್ಟಳು.

ಸುಧಾಮನು ಕೃಷ್ಣನ ಬಳಿ ತಲುಪಿದಾಗ ಕೃಷ್ಣನು ಓಡಿ ಬಂದು ಸುದಾಮನನ್ನು ಕರೆದೊಯ್ದು ಅವನ ಪಾದಗಳನ್ನು ತೊಳೆದು ಅಷ್ಟೊಂದು ಪ್ರೇಮವನ್ನು ತೋರಿಸಿದನು.

ಸುದಾಮ ಎಂದರೆ ಉತ್ತಮವಾದ ಸ್ಥಳ ಅಥವಾ ಮಂಗಳ ಮಾಯವಾದ ಸ್ಥಳ. ಅವರಿಬ್ಬರ ಪ್ರೇಮವು ಎಷ್ಟು ಗಾಢವಾಗಿತ್ತೆಂದರೆ ಸುಧಾಮನು ಸಂಪತ್ತನ್ನು ಸಹ ಕೇಳಲು ಮರೆತು ಹೋದನು ಮತ್ತು ಸುಧಾಮನಿಗೆ ಬೇಕೆಂದು ಕೃಷ್ಣನೂ ಕೇಳದೆ ಎಲ್ಲವನ್ನೂ ಕೊಟ್ಟ …

ನನಗಿಂದು ನೀನು ಏನು ತಂದಿದ್ದೀಯಾ ?ನನಗೆ ಕೊಡು ನಿನ್ನ ಪತ್ನಿಯು ನನಗೆಂದು ಏನು  ಕಳುಹಿಸಿದ್ದಾಳೆ. ನನಗೇಕೆ ಅದನ್ನು ಕೊಡುತ್ತಿಲ್ಲ .ಕೂಡು ಕೊಡು ಎಂದು ಸುಧಾಮನಿoದ  ಕಿತ್ತುಕೊಂಡು ಎರಡು ಹಿಡಿ ಅವಲಕ್ಕಿಯನ್ನು ತಿಂದ.

 

 

ಕೃಷ್ಣ ಮೂರನೆಯ ಹಿಡಿಯನ್ನು ತಿನ್ನಬೇಕು ಎನ್ನುವಷ್ಟರಲ್ಲಿ ರುಕ್ಮಿಣಿಯೂ ಓಡಿ ಬಂದು ಆ ಮೂರನೆಯ ಹಿಡಿಯನ್ನು ತನಗೆ ಕೊಡಬೇಕೆಂದು ಕೇಳಿಕೊಂಡಳು.

ಸುದಾಮನು ಮನೆಗೆ ತಲುಪಿದಾಗ ಅವನ ಮನೆಯೂ ತುಂಬಾ ಬಂಗಾರ ಮತ್ತು ಇನ್ನೂ ಇತರೆ ಸಂಪತ್ತನ್ನು ಕಂಡು ಬೆರಗಾದನು. ಇದರ ಸ್ಮರಣೆಗಾಗಿ ಅಕ್ಷಯ ತೃತೀಯವನ್ನು ಆಚರಿಸುತ್ತಾರೆ.

ಆ ದಿನ ಏನೇ ಖರೀದಿಸಿದರೂ ಪಡೆದರೂ ಸಹ ಅದು ಬೆಳೆಯುತ್ತದೆ ಎಂಬ ನಂಬಿಕೆ ಇದೆ. ಬಂಗಾರವನ್ನು ಕೊಂಡುಕೊಂಡು ಕೊಡುಗೆಯಾಗಿ ಸಹ ಕೊಡುತ್ತಾರೆ .

ಅಕ್ಷಯ ತೃತೀಯದಂದು ಗಂಗಾ ನದಿಯು ಮಾನವತೆಯನ್ನು ಪವಿತ್ರಗೊಳಿಸುವ ಸಲುವಾಗಿ ಭೂಮಿಯ ಮೇಲೆ ಇಳಿದು ಬಂದ ದಿನ ಎಂದೂ ಸಹ ಹೇಳುತ್ತಾರೆ.

ಏನೇ ಇರಲಿ ಪ್ರತಿನಿತ್ಯವೂ ಉತ್ಸವವನ್ನು ಆಚರಿಸಿ ನಾವಿರುವ ಈ ಜಗತ್ತು ಮತ್ತು ಎಲ್ಲವೂ ಏನೇನೂ ಅಲ್ಲ ಎಂದು ತಿಳಿಯಿರಿ. ಎಲ್ಲವನ್ನೂ ಒಂದು ದಿನ ಇಲ್ಲಿಯೇ ಬಿಟ್ಟು ಹೋಗಬೇಕಾಗುತ್ತದೆ. ಯಾವುದೂ ಸಹ ಶಾಶ್ವತವಲ್ಲ. ಈ ದೇಹವೂ ಭೂಮಿಗೆ ಮರಳುತ್ತದೆ .ಆದರೆ ಆತ್ಮವಾಗಿರುವ ನಾವು ಮಾತ್ರ ಜೀವಂತವಾಗಿರುತ್ತವೆ. ನಾವು ಅನಂತ ವಾಗಿರುವುದರಿಂದ ಮತ್ತೆ ಎದ್ದು ಬರುತ್ತೇವೆ.

ಯಾವುದೂ ಅಸಾಧ್ಯವಲ್ಲ ಭಕ್ತಿಯೂ ಬಹಳ ಹೆಚ್ಚಾಗಿದ್ದರೆ ಮಾತ್ರ ಕೇವಲ ಆಧ್ಯಾತ್ಮಿಕ ಉನ್ನತಿ ಅಷ್ಟೇ ಅಲ್ಲ ಸಂಪತ್ತು ಸಹ ಹರಿದು ಬರುತ್ತದೆಂದು ತಿಳಿಯಿರಿ. ಮೇಲಿನ ಕತೆಗಳ ಸಾರಾಂಶವೇ ಇದು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top