fbpx
ಭವಿಷ್ಯ

ನವೆಂಬರ್ 20 : ನಿತ್ಯ ಭವಿಷ್ಯ ಮತ್ತೆ ಪಂಚಾಂಗ

ಸೋಮವಾರ, ೨೦ ನವೆಂಬರ್ ೨೦೧೭
ಸೂರ್ಯೋದಯ : ೦೬:೨೪
ಸೂರ್ಯಾಸ್ತ : ೧೭:೪೬
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಮಾರ್ಗಶಿರ
ಪಕ್ಷ : ಶುಕ್ಲ ಪಕ್ಷ
ತಿಥಿ : ಬಿದಿಗೆ
ನಕ್ಷತ್ರ : ಜ್ಯೆಷ್ಟ್ಯ
ಯೋಗ : ಸುಕರ್ಮ
ಪ್ರಥಮ ಕರಣ : ಬಾಲವ
ಸೂರ್ಯ ರಾಶಿ : ವೃಶ್ಚಿಕ
ಚಂದ್ರ ರಾಶಿ : ವೃಶ್ಚಿಕ
ಅಭಿಜಿತ್ ಮುಹುರ್ತ : ೧೧:೪೨ – ೧೨:೨೭
ಅಮೃತಕಾಲ : ೧೪:೫೭ – ೧೬:೪೫

ರಾಹು ಕಾಲ: ೦೭:೪೯ – ೦೯:೧೪
ಗುಳಿಕ ಕಾಲ: ೧೩:೩೦ – ೧೪:೫೫
ಯಮಗಂಡ: ೧೦:೩೯ – ೧೨:೦೫

 

ಮೇಷ (Mesha)

ವ್ಯಾಪಾರ-ವ್ಯವಹಾರಗಳಲ್ಲಿ ಅನಿರೀಕ್ಷಿತ ಲಾಭ ಬಂದು ಹಣಕಾಸಿನ ಪರಿಸ್ಥಿತಿ ಉತ್ತಮವಾಗುವುದು. ಕೋರ್ಟು ಕಚೇರಿಯ ಕೆಲಸಗಳು ನಿಮ್ಮಂತೆ ಆಗುವುದು. ಸಂಬಂಧಗಳಲ್ಲಿಯೂ ಗಣನೀಯ ಸುಧಾರಣೆ ಕಂಡುಬರುವುದು.

 

 

ವೃಷಭ (Vrushabha)

ಸಲ್ಲದ ವಿಷಯಗಳ ಬಗ್ಗೆ ಅನಗತ್ಯ ಕುತೂಹಲ ತೋರಿಸಲು ಹೋಗಿ ಫಜೀತಿ ತಂದುಕೊಳ್ಳುವಿರಿ. ಸಣ್ಣಪುಟ್ಟ ಅಡೆತಡೆಗಳ ಬಗ್ಗೆ ಗಮನ ಕೊಡದೆ ಆತ್ಮವಿಶ್ವಾಸದಿಂದ ಮುನ್ನಡಿ ಇಡಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

 

ಮಿಥುನ (Mithuna)

ಜೀವನದಲ್ಲಿ ಅನಿರೀಕ್ಷಿತ ಬದಲಾವಣೆಗಳು ಎದುರಾಗುವುದು. ನಿಮ್ಮ ನಾಯಕತ್ವಕ್ಕೆ ಯಶಸ್ಸು ದೊರೆಯುವುದು. ಸಹನೆ, ತಾಳ್ಮೆಯನ್ನು ಬೆಳೆಸಿಕೊಂಡಲ್ಲಿ ಇಚ್ಛಿತ ಗುರಿಯನ್ನು ಮುಟ್ಟಲು ಸಹಕಾರಿಯಾಗುವುದು.

 

ಕರ್ಕ (Karka)

ನಿರ್ದಿಷ್ಟ ಗುರಿ ತಲುಪಿದ್ದಕ್ಕೆ  ನಿಮ್ಮನ್ನು ಅಭಿನಂದಿಸುವರು. ಬೆಲೆ ಬಾಳುವ ಅಲಂಕಾರಿಕ ವಸ್ತುಗಳು ಮನೆಯನ್ನು ಆಕ್ರಮಿಸುವವು. ಹೊಸ ಜವಾಬ್ದಾರಿಗಳು ನಿಮ್ಮನ್ನು ಕೈಬೀಸಿ ಕರೆಯುವುದು.

 

ಸಿಂಹ (Simha)

ಅಧ್ಯಾತ್ಮಿಕ ಹಸಿವು ನಿಮ್ಮನ್ನು ಕಾಡುವುದು. ಅದಕ್ಕೆ ಪ್ರೇರಣೆ ಇತ್ತೀಚೆಗೆ ನಿಮ್ಮ ಬಂಧುಗಳ ಮನೆಯಲ್ಲಿ ನಡೆದ ಕಾರ್ಯಕ್ರಮ ಎಂದರೆ ತಪ್ಪಾಗಲಾರದು. ಉತ್ತಮವಾದ ವಿಚಾರವನ್ನು ಅನುಕರಣೆ ಮಾಡುವುದು ತಪ್ಪಲ್ಲ.

 

ಕನ್ಯಾರಾಶಿ (Kanya)

ನಿಮ್ಮಲ್ಲಿ ಅಡಗಿರುವ ಶಕ್ತಿ ಏನು ಎಂಬುದು ಸ್ವತಃ ನಿಮ್ಮ ಅರಿವಿಗೆ ಬರುವುದಿಲ್ಲ. ಪರರು ನಿಮ್ಮನ್ನು ಕೆಣಕಿದಾಗ ಮಾತ್ರ ನಿಮ್ಮ ಬುದ್ಧಿಶಕ್ತಿಯು ಜಾಗೃತವಾಗುವುದು. ಇದು ನೋಡುಗರನ್ನು ಆಶ್ಚರ್ಯ ಪಡಿಸುವುದು.

 

ತುಲಾ (Tula)

ಹಳೆಯ ವೈಭವವನ್ನು ನೆನೆಯುತ್ತ ಕೂತರೆ ಭವಿಷ್ಯ ಉಜ್ವಲವಾಗುವುದಿಲ್ಲ. ಭವಿಷ್ಯದ ಬಗ್ಗೆ ನೀವೀಗ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಮುಖ್ಯವಾಗಿ ಆಲಸ್ಯದಿಂದ ಈದಿನ ಹೊರಬರಬೇಕು.

 

ವೃಶ್ಚಿಕ (Vrushchika)

ಮನೆ ಮತ್ತು ಕಚೇರಿ ಕೆಲಸದ ನಡುವೆ ಸಮತೋಲನ ಸಾಧಿಸುವುದು ಕಷ್ಟವಾಗುವುದು. ಎಲ್ಲರನ್ನೂ ಎಲ್ಲ ಕಾಲಕ್ಕೂ ಖುಷಿ ಪಡಿಸಲು ಆಗುವುದಿಲ್ಲ. ಮನಸು ದಣಿದರೆ ವಿಶ್ರಾಂತಿ ಪಡೆಯುವುದು ಒಳ್ಳೆಯದು.

 

ಧನು ರಾಶಿ (Dhanu)

ವ್ಯಾಪಾರ-ವ್ಯವಹಾರಗಳಲ್ಲಿ ಲಾಭಾಂಶಗಳು ಜಾಸ್ತಿಯಾಗುವ ಸಂಭವವಿದೆ. ಸನ್ಮಾನ ಸ್ವೀಕರಿಸಲು ಸಿದ್ಧರಾಗುವಿರಿ. ಕೌಟುಂಬಿಕ ಜೀವನದ ವಿಚಾರವಾಗಿ ಉತ್ತಮ ಪ್ರತಿಕ್ರಿಯೆ ದೊರೆಯುವುದು.

 

ಮಕರ (Makara)

ನಿಮ್ಮಿಂದ ಉಪಕಾರ ಪಡೆದ ಮಹನೀಯರು ನಿಮ್ಮನ್ನು ಅಭಿನಂದಿಸುವರು. ವ್ಯಾಪಾರ-ವ್ಯವಹಾರವೂ ಸಲೀಸಾಗಿ ಆಗುವುದು. ಬರಬೇಕಾಗಿದ್ದ ಹಣ ಕೈಸೇರುವುದು. ಪ್ರಯಾಣದಲ್ಲಿ ಎಚ್ಚರ ಅಗತ್ಯ.

 

ಕುಂಭರಾಶಿ (Kumbha)

ಬಂಧುಮಿತ್ರರ ಆಗಮನದಿಂದ ಮನೋಲ್ಲಾಸ. ನಿಮ್ಮ ಸಾಧನೆಯನ್ನು ಎಲ್ಲರೂ ಕೊಂಡಾಡುವರು. ನೂತನ ಪರಿಸರದಲ್ಲಿ ಕಾರ್ಯ ನಿರ್ವಹಿಸಬೇಕಾಗುವುದು. ಕೋರ್ಟು ಕಚೆರಿಯಲ್ಲಿನ ವ್ಯಾಜ್ಯಗಳು ನಿಮ್ಮ ಪರವಾಗಿ ನಿಲ್ಲುವವು.

 

ಮೀನರಾಶಿ (Meena)

ಹೊರಗಿನ ಕಳ್ಳರನ್ನು ಹಿಡಿಯಬಹುದು. ಮನೆಯ ಕಳ್ಳರನ್ನು ಹಿಡಿಯುವುದು ಕಷ್ಟ. ಅಂತೆಯೇ ನೀವು ಯಾರನ್ನು ಗೌರವದಿಂದ ಕಾಣುತ್ತಿರುವಿರೋ ಅವರನ್ನು ಅವಮಾನಿಸಬೇಡಿ. ಭಿನ್ನಾಭಿಪ್ರಾಯವಿದ್ದಲ್ಲಿ ಒಂಡೆಡೆ ಸೇರಿ ಬಗೆಹರಿಸಿಕೊಳ್ಳಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top