fbpx
ಭವಿಷ್ಯ

ವಾರ ಭವಿಷ್ಯ ನವೆಂಬರ್ 19 ರಿಂದ 25 ರವರೆಗೆ.

 

ಮೇಷ (Mesha)

 

ನೂತನ ಗೃಹ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಸಮಾಜದಲ್ಲಿ ಜನರ ಹೆಚ್ಚಿನ ಮನ್ನಣೆ   ತೋರಿ ಸ್ಥಾನಮಾನ, ಗೌರವ,ಉನ್ನತಿ ಗಳಿಸಲಿದ್ದೀರಿ. ಕುಟುಂಬದಲ್ಲಿ ಕೂಡ ಪ್ರೀತಿ, ವಿಶ್ವಾಸ ತೋರಿ ಬರುತ್ತದೆ. ಅನಿರೀಕ್ಷಿತ ಧನಲಾಭದ ಯೋಗವಿದೆ. ಕಾರ್ಯರಂಗದಲ್ಲಿ ಹೊಣೆಗಾರಿಕೆ ಹೆಚ್ಚುವುದು. ಅವಿರತ ದುಡಿಮೆಯಿಂದ ಆಗಾಗ ದೇಹದ ಆಯಾಸ ತೋರಿಬರುವುದು. ಹಾಗೆ ಉದ್ಯೋಗ ಕ್ಷೇತ್ರದಲ್ಲಿ ಸಮಾಧಾನಕರವಾದ ಲಾಭವಿದೆ. ಹಿರಿಯರ ಆಶೀರ್ವಾದದಿಂದ  ಮತ್ತು  ಸಹಕಾರಗಳಿಂದ ಮುನ್ನಡೆ ಅನುಭವಕ್ಕೆ ಬರುತ್ತದೆ.

 

ವೃಷಭ (Vrushabha)

ದುಡುಕಿ ಪಶ್ಚಾತಾಪ ಪಡಲಿದ್ದೀರಿ. ಸಂಯಮದಿಂದ ಕಾರ್ಯ ಸಾದಿಸಿರಿ. ಕಾರ್ಯಕ್ಷೇತ್ರದಲ್ಲಿ ಹೊಂದಾಣಿಕೆಯ ಅಗತ್ಯವಿದೆ. ಸಹಕಾರ ಮನೋಭಾವ ತೋರಿ ಬಂದಲ್ಲಿ ಯಶಸ್ಸು ಸಿಗಲಿದೆ. ದುಂದು ವೆಚ್ಚಕ್ಕೆ ಆಸ್ಪದ ಕೊಡಬೇಡಿ. ಕೌಟುಂಬಿಕವಾಗಿ ಉತ್ತಮ ಅಭಿವೃದ್ಧಿ ತರಲಿದೆ. ಮನೆ ಯೊಡತಿಯ ಮನದಾಸೆಯ ಪೂರೈಕೆಗಾಗಿ ಧಾರಾಳ ಹಣ ಖರ್ಚಾಗಬಹುದು. ವಿದ್ಯಾರ್ಥಿಗಳು ವಿದ್ಯೆಯಲ್ಲಿ ಉದಾಸೀನತೆ ತೋರದೆ ಪ್ರಯತ್ನ ಮಾಡಿ. ಸಾಮಾಜಿಕವಾಗಿ ನಿಮ್ಮ ಕ್ರಿಯಾಶೀಲತೆ, ಯಶಸ್ಸು, ಗೌರವ ಹೆಚ್ಚುವುದು.

 

ಮಿಥುನ (Mithuna)

ಸದ್ಯದಲ್ಲೇ ಮ೦ಗಳ  ಕಾರ್ಯಕ್ಕೆ ಸಹಕಾರ ದೊರಕಲಿದೆ. ಆರ್ಥಿಕ ವಿಚಾರದಲ್ಲಿ ಹೆಚ್ಚಿನ ಲಾಭಕರವಾದ ಫಲ ಕಂಡು ಬರುತ್ತದೆ. ಆತುರ ತೋರದೆ ಹಂತ ಹಂತವಾಗಿ ಮುಂದುವರಿಯಿರಿ. ದೇವತೆಗಳ ಅನುಗ್ರಹದಿಂದ ಹಿಡಿದ ಕಾರ್ಯಗಳಲ್ಲಿ  ಸಫಲತೆ ಕಂಡು ಬರುತ್ತವೆ. ಹಿತಶತ್ರುಗಳು ವಂಚನೆಗೆ ಕಾರಣವಾಗದಂತೆ ಅತ್ಯಂತ ಗಮನ ಹರಿಸಿ.ಕುಟುಂಬ ಸುಖವು ಉತ್ತಮವಿದ್ದರೂ ಆಗಾಗ ಅನಾವಶ್ಯಕವಾಗಿ ಕಿರಿಕಿರಿ. ಸುಖೀಭಾಗ್ಯ ವರ್ಧನೆಗೆ ಸಾ೦ಸಾರಿಕವಾಗಿ ಧರ್ಮಪತ್ನಿಯ ಸಲಹೆಗಳು ಉಪಯುಕ್ತವಾಗಲಿವೆ.

 

ಕರ್ಕ (Karka)

ವೃತ್ತಿರಂಗದಲ್ಲಿ ಭಾಗ್ಯವೃದ್ಧಿ, ಗೌರವ, ಯಶಸ್ಸು ಇದ್ದರೂ ಸಹ ಶತ್ರು ವಿರೋಧದಿಂದ ಬೇಸರ ತರಲಿದೆ. ಆರೋಗ್ಯದ ಬಗ್ಗೆ ಸದಾ ಹೆಚ್ಚಿನ ಗಮನ ಅಗತ್ಯವಿದೆ. ಸಂದರ್ಭಕ್ಕೆ ಸರಿಯಾಗಿ ಎಚ್ಚರಿಕೆಯಿಂದ ವರ್ತಿಸಿದ್ದಲ್ಲಿ ಯಶಸ್ಸು ಸಿಗಲಿದೆ. ದೂರದ ಪ್ರಯಾಣ ಸಾಧ್ಯ ಅನುಕೂಲವಲ್ಲ. ಕೌಟುಂಬಿಕವಾಗಿ ಸಮಾಧಾನ ತಂದೀತು. ಹಲವು ಬಗೆಯ ಖರ್ಚು ವೆಚ್ಚಗಳನ್ನು ನಿಭಾಯಿಸಲು ಹೆಣಗಾಡ ಬೇಕಾಗುವುದು. ಉದ್ಯೋಗವನ್ನು ಅರಸುವವರಿಗೆ ಅಡೆತಡೆಗಳಿಂದಲೇ ಉದ್ಯೋಗದ ಭಾಗ್ಯವಿದೆ. ಸಮಯ ಸಾಧಿಸಿ ಶತ್ರುಗಳು ಮುಗಿಬೀಳುವ ಸಾಧ್ಯತೆ ಇದೆ. ಜಾಗ್ರತೆ ವಹಿಸಿ.

 

ಸಿಂಹ (Simha)

 

ವೃತ್ತಿರಂಗದಲ್ಲಿ ಕಿರಿಕಿರಿ ಇದ್ದರೂ ಸಹ ಕಾರ್ಯಕ್ಷೇತ್ರದಲ್ಲಿ ಕೆಲಸ ಕಾರ್ಯಗಳು ಸುಲಭವಾಗಿ ನಡೆಯಲಿದೆ. ಋಣಬಾಧೆ ಪರಿಹಾರಕ್ಕೆ ಪ್ರಯತ್ನ ಬಲ ತೋರಬೇಕಾಗುವುದು. ದೇವತೆಗಳ ಅನುಗ್ರಹಕ್ಕೆ ಪಾತ್ರದಲ್ಲಿ ಮನೋ ಕಾಮನೆಗೆ ಇನ್ನೂ ಹೆಚ್ಚಿನ ಪುಷ್ಟಿ ದೊರೆಯಲಿದೆ. ವಿದ್ಯಾರ್ಥಿಗಳು ಪ್ರಯತ್ನಬಲದಿಂದ ಮುನ್ನಡೆಯ ಬೇಕಾದೀತು. ಆರ್ಥಿಕ ವಿಚಾರದಲ್ಲಿ ಕೊಟ್ಟು ತೆಗೆದುಕೊಳ್ಳುವ ಪ್ರವೃತ್ತಿ ಹಾನಿ ತರಲಿದೆ. ಬಂಧು ವಿರಹದಿಂದ ಮನಸ್ಸಿಗೆ ದುಃಖವಾಗುವುದು. ನಿರುದ್ಯೋಗಿಗಳಲ್ಲಿ ಶುಭ ಸಮಾಚಾರ ಒದಗಿ ಬರಲಿವೆ.

 

ಕನ್ಯಾರಾಶಿ (Kanya)

ಧನಾಗಮನಕ್ಕೆ ಆತಂಕವಿಲ್ಲ. ವ್ಯಾಪಾರ ವ್ಯವಹಾರದಲ್ಲಿ ಹೊಸ ಹೂಡಿಕೆ ಜಯಪ್ರದ ವಾದರೂ ಜಾಗ್ರತೆ ಇರಬೇಕು. ಆಗಾಗ ಮನೆಯಲ್ಲಿ ವ್ಯರ್ಥ ವಾಗ್ವಾದದಿಂದ ಭಿನ್ನಾಭಿಪ್ರಾಯ ತೋರಿ ಬಂದರೂ ಕಲಹದಿಂದ ಬೇಸರ ತಂದೀತು. ಅನಾವಶ್ಯಕವಾಗಿ ಖರ್ಚು ವೆಚ್ಚ ಅನಾರೋಗ್ಯ  ಮತ್ತು  ಸ್ವಾಭಿಮಾನಕ್ಕೆ  ಧಕ್ಕೆ ಉಂಟಾಗಬಹುದು. ಮನಸ್ತಾಪ ತೋರಿ ಬರಬಹುದು ಆದರೂ ರಾಶಿ ಸ್ಥಿತನಾದ ಗುರು ನಿಮ್ಮ ಪ್ರಯತ್ನಬಲಕ್ಕೆ ಪುಷ್ಟಿ ಕೊಡುವನು. ಆರೋಗ್ಯ ಹಾನಿಯಲ್ಲಿ ವಾರಾಂತ್ಯ ಗೃಹಿಣಿಯ ಸರದಿ ಆತಂಕ ತಂದೀತು . ದೇವತಾ ಕಾರ್ಯಗಳಿಗೆ ವಿಘ್ನ ಬರಲಿದೆ.

 

ತುಲಾ (Tula)

 

ದೈವಕೃಪೆ ಹೊಂದಿ ನಿಮಗೆ ಎಚ್ಚರಿಕೆಯಿಂದ ಕಾರ್ಯವನ್ನು ನಿರ್ವಹಿಸಿದಲ್ಲಿ ಸಹಕಾರ ದೊರೆತು ಕಾರ್ಯಕ್ಷೇತ್ರದಲ್ಲಿ ಕೆಚ್ಚಿನ ಅಭಿವೃದ್ಧಿ ತೋರಿ ಬರುವುದು. ನಿಶ್ಚಿತ ಹಾಗೆ ಯಶಸ್ವಿಯಾಗಿ ಕಠಿಣ ಪರಿಶ್ರಮದ ಅಗತ್ಯವಿದೆ. ಆರೋಗ್ಯದ ಬಗ್ಗೆ ಸಹ ಕಾಳಜಿ ತೋರ ಬೇಕಾಗಬಹುದು. ಹಲವು ತೊಂದರೆಗಳು ಆಗಾಗ ಕಾಣಿಸಿಕೊಂಡರೂ ಸಹ  ಕೇತು ಉತ್ತಮವಿದ್ದು, ದಾಂಪತ್ಯ ಸುಖವಿದ್ದು ಸಂತಾನ ಲಾಭವಿದೆ. ರಾಜಕೀಯ ವರ್ಗದವರಿಗೆ ಸ್ಥಾನಮಾನ ಗೌರವ ಹೊಂದುವ ಭಾಗ್ಯವಿದೆ. ಆಕಸ್ಮಿಕ ಧನ ಹಾನಿಯ ಸಾಧ್ಯತೆಯಿದೆ.

 

ವೃಶ್ಚಿಕ (Vrushchika)

 

ಕೌಟುಂಬಿಕವಾಗಿ ಮನಸ್ಸಿಗೆ ನೆಮ್ಮದಿ. ದುರ್ಲಭ ಹಾಗೆ ಕ್ರಯ ವಿಕ್ರಯಗಳಲ್ಲಿ ಸಮಾಧಾನ ತೋರಿ ಬರಲಾರದು. ಹತ್ತು ಹಲವು ಬಗೆಯ ತೊಂದರೆಗಳನ್ನು ಎದುರಿಸಬೇಕಾಗಬಹುದು. ಋಣಾತ್ಮಕ ಚಿಂತನೆ ಅನಾವಶ್ಯಕ ಅನುಮಾನಕ್ಕೆ ಕಾರಣವಾಗಬಹುದು. ಆದರೂ ನಿಮ್ಮ ತಾಳ್ಮೆ ಸಮಾಧಾನದಿಂದ ಬಂದ ಅವಾಂತರಗಳನ್ನು ಸಮರ್ಥವಾಗಿ ಎದುರಿಸಬಹುದು. ಹಾಗೆ ಬಂಧುಮಿತ್ರರ ಸಹಕಾರ ನಿಮ್ಮ ಪಾಲಿಗೆ ವರದಾನವಾಗಿ ನೆಮ್ಮದಿ ಸಿಗಲಿದೆ. ಶುಭಾರ೦ಭದಲ್ಲಿ  ಕಾಯಕವೇ ಕೈಲಾಸ ಎನ್ನುವವರಿಗೆ ತೊಡಕಿಲ್ಲದೆ ಮುಂದುವರೆಯಿರಿ.

 

ಧನು ರಾಶಿ (Dhanu)

 

ಗುರುವು ನಿಮ್ಮ ಲಾಭ ಸ್ಥಾನದಲ್ಲಿ ಸಂಚರಿಸುವುದರಿಂದ ಧನಾಗಮನ ಉತ್ತಮವಿದ್ದು. ಇಷ್ಟ ಕಾರ್ಯಗಳು ಸಿದ್ಧಿಸಲಿವೆ. ಆದರೂ ಶನಿಯು ವ್ಯಯದಲ್ಲಿ ಇರುವುದರಿಂದ ರಾಜಕೀಯ ವ್ಯವಹಾರಗಳಿಂದ ರಾಜಕೀಯ ವ್ಯಕ್ತಿಗಳಿಗೆ ಸ್ಥಾನ ಭ್ರಂಶ ಧನವ್ಯಯ, ಅವಮಾನ, ನಂಬಿದವರಿಂದಲೇ ವಂಚನೆಗೆ ಒಳಗಾಗುವ ಸಾಧ್ಯತೆ ಇರುವುದು. ಮುಖ್ಯವಾಗಿ ಆರೋಗ್ಯ, ಸಂಚಾರದಲ್ಲಿ ಅಪಘಾತಗಳು ಬಗೆಗೆ ಹೆಚ್ಚಿನ ಕಾಳಜಿ ತೋರಿ ಗೃಹಸ್ಥಾಶ್ರಮ ಸ್ವೀಕಾರದ ಯೋಗ ಬ್ರಹ್ಮಚಾರಿಗಳಿಗೆ ಇರುತ್ತದೆ. ದೇವತಾ ಶುಭ ಮತ್ತು  ಮಂಗಳ ಕಾರ್ಯಗಳಿಗೆ ಉತ್ತಮ ಸಮಯ ಇದಾಗಿದೆ.

 

ಮಕರ (Makara)

 

ವ್ಯಾಪಾರ ವ್ಯವಹಾರಗಳಲ್ಲಿ ಧನಾಗಮನವು ಸಮಾಧಾನಕರವಾಗಿ ತೋರಿ ಬಂದರೂ ಅನಾವಶ್ಯಕ ಖರ್ಚು ವೆಚ್ಚಗಳ ಬಗ್ಗೆ ಹಿಡಿತ ಇರಲಿ. ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿ ಕೌಟುಂಬಿಕವಾಗಿ ಸುಖ ಉತ್ತಮವಾಗಿದ್ದರೂ ಸಹ ಕಿರಿಕಿರಿ ತಪ್ಪದು. ಅನಿರೀಕ್ಷಿತವೆಂಬಂತೆ ಕೆಲವೊಂದು ಕಾರ್ಯಗಳು ಫಲ ನೀಡಲಿವೆ. ನಂಬಿದವರಿಂದಲೇ ವಂಚನೆಗೆ ಒಳಗಾಗುವ ಸಾಧ್ಯತೆ ಇದೆ. ಹೊಸ ಕಾರ್ಯಗಳು ಫಲ ನೀಡುತ್ತವೆ. ಮಕ್ಕಳ ವಿದ್ಯೆಯಲ್ಲಿ ಉನ್ನತಿ  ಸಮಾಧಾನ ತರಲಿದೆ. ಧನ ಸಂಗ್ರಹಕ್ಕೆ ಹೊಸ ಮಾರ್ಗ ಗೋಚರಕ್ಕೆ ಬರುವುದು.

 

ಕುಂಭರಾಶಿ (Kumbha)

ಗುರುವಿನ ದೈವಾನುಗ್ರಹ ಉತ್ತಮವಾಗಿರುವುದರಿಂದ ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಪ್ರಗತಿ. ಅವಿವಾಹಿತರಿಗೆ ಕಂಕಣಬಲದ ಯೋಗ. ದೈವಾನುಗ್ರಹದ  ಕಾರ್ಯಗಳಲ್ಲಿ ಫಲದಾಯಕ ಸೂಚನೆ. ಕಾರ್ಯ ಕ್ಷೇತ್ರದಲ್ಲಿ ಉತ್ತಮ ಯಶಸ್ಸು, ಸಾಮಾಜಿಕವಾಗಿ ಗೌರವ ತರಲಿದೆ. ಸಾಹಸ, ಕಾರ್ಯದಲ್ಲಿ ಆತುರತೆ ತೋರದೆ ಮುಂದುವರಿಯಿರಿ ಪ್ರಗತಿಯಿದೆ. ಮುಖ್ಯವಾಗಿ ಆರೋಗ್ಯದಲ್ಲಿ ಹೆಚ್ಚಿನ ಕಾಳಜಿ ವಹಿಸಿ. ವಿದ್ಯಾರ್ಥಿಗಳಿಗೆ ನಿರುದ್ಯೋಗಿಗಳಿಗೆ ವಿದೇಶ ಪ್ರಯಾಣದ ಅವಕಾಶಗಳು ಒದಗಿ ಬರುತ್ತವೆ. ಸದುಪಯೋಗ ಪಡಿಸಿಕೊಳ್ಳಿ.

 

 

ಮೀನರಾಶಿ (Meena)

 

 ದುಡುಕಿ ಪಶ್ಚಾತ್ತಾಪ ಪಡಬೇಡಿ ಸಮಯವನ್ನು  ಅರಿತು ಕಾರ್ಯವನ್ನು ಸಾಧಿಸಿಕೊಳ್ಳಿ. ಕಾರ್ಯಕ್ಷೇತ್ರದಲ್ಲಿ ಹೊಂದಾಣಿಕೆಯ ಅಗತ್ಯವಿದೆ. ಸಹಕಾರ ಮನೋಭಾವ ತೋರಿ ಬಂದಲ್ಲಿ ಯಶಸ್ಸು ಸಿಗಲಿದೆ. ದುಂದು ವೆಚ್ಚಕ್ಕೆ ಆಸ್ಪದ ನೀಡಬೇಡಿ. ಪರಿವಾರದಲ್ಲಿ ಉತ್ತಮ ಅಭಿವೃದ್ಧಿ ತರಲಿದೆ. ಮನೆಯೊಡತಿಯ ಮನದಾಸೆಯ ಪೂರೈಕೆಗಾಗಿ ಧಾರಳ ಹಣ ಖರ್ಚಾಗಬಹುದು. ವಿದ್ಯಾರ್ಥಿಗಳು ವಿದ್ಯೆಯಲ್ಲಿ ಉದಾಸೀನತೆ ತೋರದೆ ಪ್ರಯತ್ನ ಮಾಡಿರಿ. ಸಾಮಾಜಿಕವಾಗಿ ನಿಮ್ಮ ಕ್ರಿಯಾಶೀಲತೆ, ಯಶಸ್ಸು  ಮತ್ತು ಗೌರವ ಹೆಚ್ಚಿಲಿದೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top