fbpx
ಕಿರುತೆರೆ

ಬಾಹುಬಲಿ(ಗೊಮ್ಮಟೇಶ್ವರ) ಅಂದ್ರೆ ಯಾರು ಅಂತ ಆಶಿತಾಗೆ ಗೊತ್ತಿಲ್ವಂತೆ..!

ಬಾಹುಬಲಿ(ಗೊಮ್ಮಟೇಶ್ವರ) ಅಂದ್ರೆ ಯಾರು ಅಂತ ಆಶಿತಾಗೆ ಗೊತ್ತಿಲ್ವಂತೆ..!

 

 

ಕರ್ನಾಟಕದಲ್ಲಿ ಹುಟ್ಟಿ ಬೆಳೆದು, ಕನ್ನಡದ ಧಾರಾವಾಹಿಗಳಲ್ಲಿ ನಟನೆ ಮಾಡಿ ಈಗ ಬಿಗ್ ಬಾಸ್ ಮನೆಯಲ್ಲಿ ಇಲ್ಲ ಸಲ್ಲದ ವಿಷಯಗಳಿಗೆ ದುರಹಂಕಾರದಿಂದ ವರ್ತಿಸುವ ಕೊಬ್ಬಿನ ರಾಣಿ ಎಂದೇ ಹೆಸರು ಪಡೆದಿರುವ ಆಶಿತಾ ಅವರಿಗೆ ಬಾಹುಬಲಿ(ಗೊಮ್ಮಟೇಶ್ವರ) ಅಂದ್ರೆ ಯಾರು ಎಂಬ ಸಣ್ಣ ವಿಷಯ ಗೊತ್ತಿಲ್ಲವಂತೆ.

 

 

ನೆನ್ನೆಯ ಸಂಚಿಕೆಯಲ್ಲಿ ಈ ವಾರದ ಮನೆಯ ಕ್ಯಾಪ್ಟನ್ ಆಯ್ಕೆಗಾಗಿ ಬಿಗ್ ಬಾಸ್ ವಿಶೇಷ ಟಾಸ್ಕ್’ವೊಂದನ್ನ ನೀಡಿದ್ದರು. ಇದರ ಪ್ರಕಾರ ಮನೆಯ ಎಲ್ಲಾ ಸದಸ್ಯರಿಗೆ ಸಾಮಾನ್ಯ ಜ್ಞಾನದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಿಸಿವ ಸದಸ್ಯರ ಪೈಕಿ ಯಾವ ಸದಸ್ಯ ಅತಿ ಹೆಚ್ಚು ಸರಿ ಉತ್ತರ ನೀಡುತ್ತಾರೋ ಅವರು ಈ ವಾರದ ಕ್ಯಾಪ್ಟನ್ ಆಗುತ್ತಾರೆ.

 

 

ಇದರಂತೆ ಆಶಿತಾ ಮೊದಲು ಭಾರತ ಯಾವಾಗ ಗಣರಾಜ್ಯವಾಯಿತು ಎಂದು ಕೇಳಿದರು ಅದಕ್ಕೆ “ವಾಟ್ ಇಸ್ ಗಣರಾಜ್ಯ” ಎಂದು ಕೇಳಿದ ಆಶಿತಾ 1960 ಎಂದು ತಪ್ಪು ಉತ್ತರ ನೀಡಿದರು. ನಂತರ “ಬಾಹುಬಲಿ ಪ್ರತಿಮೆ ಇರುವ ಜಾಗ ಯಾವುದು.?” ಎಂಬ ಪ್ರಶ್ನೆಗೆ ಉಡಾಫೆಯಿಂದ ”ಸಿನಿಮಾನಾ.? ಬಾಹುಬಲಿ ಪ್ರತಿಮೆ ಹೈದರಾಬಾದ್ ನಲ್ಲಿದೆ ” ಎಂದು ಆಶಿತಾ ಉತ್ತರಿಸಿ ಎಲ್ಲಡೆ ಸಕತ್ ಟ್ರಾಲ್ ಹಾಗುತ್ತಿದ್ದಾರೆ.

 

 

ನಂತರ ಸರಿ ಉತ್ತರ “ಶ್ರಾವಣ ಬೆಳಗೊಳ” ಎಂದು ಬಿಗ್ ಬಾಸ್ ಹೇಳಿದಾಗ “ಬಾಹುಬಲಿ ಅಂದ್ರೆ ಯಾರು ಅಂತ ನನಗೇನು ಗೊತ್ತು ” ಎಂದು ಕೊಬ್ಬಿನಿಂದ ಹೇಳಿರುವುದು ಈಗ ಸೋಷಿಯಲ್ ಮೀಡಿಯಾಗಳಲ್ಲಿ ಸಕತ್ ಟ್ರಾಲ್ ಹಾಗುತ್ತಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top