fbpx
ಕಿರುತೆರೆ

ನೋಟ್ ಬ್ಯಾನ್ ನಂತರ ಮತ್ತೊಂದು ಮಹತ್ವದ ನಿರ್ಧಾರ: ಚೆಕ್’ಗಳನ್ನೂ ಬ್ಯಾನ್ ಮಾಡಲು ಮುಂದಾದ ಕೇಂದ್ರ ಸರ್ಕಾರ.

ನೋಟ್ ಬ್ಯಾನ್ ನಂತರ ಮತ್ತೊಂದು ಮಹತ್ವದ ನಿರ್ಧಾರ: ಚೆಕ್’ಗಳನ್ನೂ ಬ್ಯಾನ್ ಮಾಡಲು ಮುಂದಾದ ಕೇಂದ್ರ ಸರ್ಕಾರ.

 

 

ಕಳೆದ ವರ್ಷ ನವೆಂಬರ್ನಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ರೂ. 500 ಮತ್ತು ರೂ .1000 ಕರೆನ್ಸಿ ನೋಟುಗಳ ನಿಷೇದದ ನಿರ್ಧಾರವನ್ನು ತೆಗೆದುಕೊಂಡ ನಂತರ, ಈಗ ಡಿಜಿಟಲ್ ವ್ಯವಹಾರಗಳನ್ನು ಹೆಚ್ಚಿಸಲು ಮತ್ತೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು ಚೆಕ್​ ಅಮಾನ್ಯಗೊಳಿಸಲು ಚಿಂತಿಸುತ್ತಿದೆ ಎಂಬ ಸುದ್ದಿಯೊಂದು ಬಲವಾಗಿ ಕೇಳಿ ಬರುತ್ತಿದೆ.

 

 

ಚೆಕ್ ಪದ್ದತಿಯನ್ನು ಸದ್ಯದಲ್ಲೇ ಕೇಂದ್ರ ಹಿಂದಕ್ಕೆ ಪಡೆದು ಮುದ್ರಣ ಸೇರಿದಂತೆ ವಿವಿಧ ರೀತಿಯ ಖರ್ಚುಗಳನ್ನು ಉಳಿಸಿ ಬ್ಯಾಂಕ್​ಗೆ ಸಬ್ಸಿಡಿ ನೀಡಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪ್ರವೀಣ್​ ಖಂಡೇಲ್​ವಾಲ್ ಚೆಕ್ ಪುಸ್ತಕಗಳು ಬ್ಯಾನ್ ಆಗುವ ಬಗ್ಗೆ ಸುಳಿವು ನೀಡಿದ್ದಾರೆ.

 

 

ಭಾರತದಲ್ಲಿ ನೋಟ್ ಬ್ಯಾನ್ ಆದ ನಂತರವೂ ನಗದು ಮತ್ತು ಚೆಕ್​ಗಳ ಮೂಲಕವೇ ಶೇ.95ರಷ್ಟು ವ್ಯವಹಾರ ನಡೆಯುತ್ತಿದ್ದು ಬಹುತೇಕ ವ್ಯಾಪಾರಿಗಳು ಈಗಲೂ ಡಿಜಿಟಲ್ ವ್ಯವಹಾರಕ್ಕೆ ಮುಂದಾಗದೆ ನಗದು ಅಥವಾ ಚೆಕ್ ಗಳಿಂದಲೇ ವ್ಯವಹಾರ ನಡೆಸುತ್ತಿವೆ..

 

 

ಡಿಜಿಟಲ್​ ಪೇಮೆಂಟ್ ವ್ಯವಸ್ಥೆಯನ್ನು ದೇಶದಲ್ಲಿ ಅಭಿವೃದ್ಧಿಗೊಳಿಸಿದರೆ ಖಳಧಾನಿಕರನ್ನು ಮಟ್ಟ ಹಾಕಬಹುದು ಎಂಬ ಉದ್ದೇಶದಿಂದ ನೋಟು ಅಮಾನ್ಯೀಕರಣ ಮಾಡಿದ್ದರೂ ಈಗಲೂ ಡಿಜಿಟಲ್ ಪೇಮೆಂಟ್ ಹಿಂದೆಯೇ ಇರುವುದರಿಂದ ಪೇಮೆಂಟ್​ ಗುರಿಯನ್ನು ತಲುಪಬೇಕು ಎಂದು ಎಂದು ಕೇಂದ್ರ ಸರ್ಕಾರ ಯೋಚಿಸಿದ್ದು, ಇದನ್ನು ಸಾಧಿಸಲು ಶೀಘ್ರದಲ್ಲೇ ಚೆಕ್​ ಬುಕ್​ಗಳನ್ನ ಬ್ಯಾನ್​ ಮಾಡಲಿದೆ ಎಂದು ಹೇಳಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top