fbpx
ಕಿರುತೆರೆ

ಎರಡು ವರ್ಷದ ಹಿಂದೆಯೇ ಯಾರಿಗೂ ತಿಳಿಯದೆ ಸೀಕ್ರೆಟ್ ಆಗಿ ಮದುವೆಯಾಗಿದ್ದರಂತೆ ಅನುಪಮಾ..!

ಎರಡು ವರ್ಷದ ಹಿಂದೆಯೇ ಯಾರಿಗೂ ತಿಳಿಯದೆ ಸೀಕ್ರೆಟ್ ಆಗಿ ಮದುವೆಯಾಗಿದ್ದರಂತೆ ಅನುಪಮಾ..!

 

 

ಕನ್ನಡದ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಷೋ ಬಿಗ್’ಬಾಸ್ 5ನೇ ಸೀಸನ್ ಕಾರ್ಯಕ್ರಮದಲ್ಲಿ ದಿನಗಳು ಉರುಳುತ್ತಿದ್ದಂತೆ ಅನೇಕ ಕುತೂಹಲ ವಿಷಯಗಳು ಆಚೆ ಬರುತ್ತಿವೆ. ಒಂದೊಂದೇ ಲವ್ ಸ್ಟೋರಿಗಳು ತೆರೆದುಕೊಳ್ಳುತ್ತಿವೆ. ವಿಶೇಷ ವೆಂದರೆ ಈ ಭಾರಿ ಗುಟ್ಟಿನ ಮದುವೆಯೊಂದು ರಟ್ಟಾಗಿದೆ.

 

 

ಅಕ್ಕ ಧಾರಾವಾಹಿಯ ಅನುಪಮಾ ಗೌಡ ಮತ್ತು ಗಾಂಧಾರಿ ಧಾರಾವಾಹಿಯ ಜಗನ್ನಾಥ ಈ ಮಾಜಿ ಲವರ್ಸ್ ಗಳು ಇವರಿಬ್ಬರ ನಡುವೆ ಬ್ರೇಕ್ಅಪ್ ಆಗಿರುವ ವಿಷಯ ಈಗಾಗಲೇ ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಜಗಜ್ಜಾಹೀರಾತಾಗಿರುವುದು ಈಗ ಎಲ್ಲರಿಗೂ ಗೊತ್ತಿದೆ. ಈಗ ಅನುಪಮಾ ತಾನು ಮದುವೆಯಾಗಿರುವ ವಿಷಯವನ್ನು ಹೇಳಿಕೊಂಡಿದ್ದಾರೆ ಆದರೆ ಅದು ಎಷ್ಟರ ಮಟ್ಟಿಗೆ ನಿಜ ಎನ್ನುವುದು ನಮಗಂತೂ ಗೊತ್ತಿಲ್ಲ. ಮುಂದೆ ಓದಿ.

 

 

ಅನುಪಮಾ ಮದುವೆಯ ವಿಷಯವನ್ನು ತೆಗೆದ ರಿಯಾಜ್ “ನಾನು ಮೊನ್ನೆಯವರೆಗೂ ಅನುಪಮಾಗೆ ಮದುವೆಯಾಗಿದೆ ಎಂದು ತಿಳಿದುಕೊಂಡಿದ್ದೆ” ಎಂದು ಹೇಳಿದರು. ಅವರ ಮಾತಿಗೆ ದನಿ ಗೂಡಿಸಿದ ಜೆಕೆ ” ಹೌದು, ನಿನಗೆ ಮದುವೆಯಾಗಿದೆ ಅಂತ ಯಾರೋ ನನಗೆ ಹೇಳಿದ್ದರು. ನಿನಗೆ ಮದುವೆಯಾಗಿದೆಯಾ” ಎಂದು ಅನುಪಮರನ್ನ ಕೇಳಿದರು.

 

 

ಇವರ ಪ್ರಶೆಗಳಿಗೆ ಉತ್ತರಿಸಿದ ಅನುಪಮಾ “ನನಗೆ ಮದುವೆಯಾಗಿದೆ, ನಿವೇದಿತಾ, ಶ್ರುತಿಗೆಲ್ಲಾ ಈ ಬಗ್ಗೆ ಹೇಳಿದ್ದೀನಿ ಆದರೆ ಇದನ್ನ ನಾನು ರಿವೀಲ್ ಮಾಡ್ತಿಲ್ಲ ಅಷ್ಟೇ” ಎಂದು ಹೇಳಿದರೆ ಮುಂದೆ ಜೆಕೆ “ಗಂಡನ ಹೆಸರು ಕಾರ್ತಿಕ್ ಅಂತ ಅಲ್ವಾ” ಎಂದು ಕೇಳಿದಾಗ “ನೋಡು ನನ್ನ ಗಂಡನ ಹೆಸರನ್ನ ಎಸ್ಟ್ ಚನ್ನಾಗಿ ನೆನಪಿಟ್ಟುಕೊಂಡಿದೆಯಾ” ಎಂದು ಅನುಪಮಾ ಹೇಳಿದರು.

 

 

ನಂತರ “ನಾನು ಮದುವೆಯಾಗಿ ಎರಡು ವರ್ಷ ಆಯ್ತು ಸಾರ್ ” ಅಂತ ಜಯಶ್ರೀನಿವಾಸನ್ ಬಳಿ ಅನುಪಮಾ ಗೌಡ ಹೇಳಿಕೊಂಡರು. ಆದರೆ ಸ್ವತಃ ಅನುಪಮಾ ಅವರೇ ಹೇಳಿಕೊಂಡಿರೋ ಅವರ ಮದುವೆ ಸುದ್ದಿ ನಿಜವೋ ಅಥವಾ ಜೆಕೆ, ಜಯಶ್ರೀನಿವಾಸಂ ಅವರ ಕಾಲು ಎಳೆಯುದಕ್ಕಾಗಿ ಹಾಗಂತ ಹೇಳಿಕೊಂಡರೋ ನಮಗಂತೂ ಗೊತ್ತಿಲ್ಲಾ.

 

 

ಅನುಪಮಾ ಮದುವೆಯಾಗಿರುವ ವಿಷಯ ಹೇಳಿರುವ ವಿಡಿಯೋವನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ 

Is Anupama secretly married?

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top