fbpx
ಕಿರುತೆರೆ

ಜಗನ್ ಪ್ರಕಾರ ಕನ್ನಡ ವರ್ಣಮಾಲೆಯಲ್ಲಿ ಇರುವುದು ಕೇವಲ 32 ಅಕ್ಷರಗಳು ಮಾತ್ರವಂತೆ.

ಜಗನ್ ಪ್ರಕಾರ ಕನ್ನಡ ವರ್ಣಮಾಲೆಯಲ್ಲಿ ಇರುವುದು ಕೇವಲ 32 ಅಕ್ಷರಗಳು ಮಾತ್ರವಂತೆ.

 

 

ಕರ್ನಾಟಕದಲ್ಲಿ ಹುಟ್ಟಿ ಬೆಳೆದು ಸ್ವತಃ ಕನ್ನಡಿಗನಾಗಿರುವ,,ಕನ್ನಡದ ಧಾರಾವಾಹಿಯೊಂದರಲ್ಲಿ ನಟನೆ ಮಾಡಿ ಈಗ ಬಿಗ್ ಬಾಸ್ ಮನೆಯಲ್ಲಿ ಇಲ್ಲ ಸಲ್ಲದ ವಿಷಯಗಳಿಗೆ ದುರಹಂಕಾರದಿಂದ ವರ್ತಿಸುವ ಜಗನ್ ಅವರಿಗೆ ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ ಎಂಬ ಸಣ್ಣ ವಿಷಯ ಗೊತ್ತಿಲ್ಲ.

 

 

ನೆನ್ನೆಯ ಸಂಚಿಕೆಯಲ್ಲಿ ಈ ವಾರದ ಮನೆಯ ಕ್ಯಾಪ್ಟನ್ ಆಯ್ಕೆಗಾಗಿ ಬಿಗ್ ಬಾಸ್ ವಿಶೇಷ ಟಾಸ್ಕ್’ವೊಂದನ್ನ ನೀಡಿದ್ದರು. ಇದರ ಪ್ರಕಾರ ಮನೆಯ ಎಲ್ಲಾ ಸದಸ್ಯರಿಗೆ ಸಾಮಾನ್ಯ ಜ್ಞಾನದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಿಸಿವ ಸದಸ್ಯರ ಪೈಕಿ ಯಾವ ಸದಸ್ಯ ಅತಿ ಹೆಚ್ಚು ಸರಿ ಉತ್ತರ ನೀಡುತ್ತಾರೋ ಅವರು ಈ ವಾರದ ಕ್ಯಾಪ್ಟನ್ ಆಗುತ್ತಾರೆ.

 

 

ಇದರಂತೆ ಗಾಂಚಲಿ ಹುಡುಗ ಜಗನ್ ಗೆ “ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ” ಎಂಬ ಸರಳ ಪ್ರಶ್ನೆಯನ್ನ ಬಿಗ್ ಬಾಸ್ ಕೇಳಿದರು. ಪ್ರಶ್ನೆ ಕೇಳಿದ ತಕ್ಷಣ ಉತ್ತರ ತಿಳಿಯದೆ ”ಜನರ ಕೈಯಲ್ಲಿ ನನಗೆ ಯಾಕೆ ಬೈಯ್ಯಿಸುತ್ತೀರಾ…?” ಎಂದು ಹೇಳಿ ”32” ಎಂದು ತಪ್ಪು ಉತ್ತರ ಕೊಟ್ಟರು.

 

 

ಜಗನ್ ಗೆ ಕನ್ನಡದಲ್ಲಿ ಎಷ್ಟು ಅಕ್ಷರಗಳಿವೆ ಎಂಬ ಸರಳ ಪ್ರಶ್ನೆಗೆ ಉತ್ತರ ಗೊತ್ತಲಾದೆ ತಪ್ಪು ಉತ್ತರ ಕೊಟ್ಟಿರುವುದು ಸೋಷಿಯಲ್ ಮೀಡಿಯಾಗಳಲ್ಲಿ ಸಕತ್ ಟ್ರೊಲ್ ಆಗುತ್ತಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top