fbpx
ಕಿರುತೆರೆ

ಬಿಗ್’ಬಾಸ್ ಮನೆಗೆ ವಿಶೇಷ ಅತಿಥಿಯಾಗಿ ಎಂಟ್ರಿ ಕೊಟ್ರು ಕಿರಿಕ್ ಕೀರ್ತಿ.

ಬಿಗ್’ಬಾಸ್ ಮನೆಗೆ ವಿಶೇಷ ಅತಿಥಿಯಾಗಿ ಎಂಟ್ರಿ ಕೊಟ್ರು ಕಿರಿಕ್ ಕೀರ್ತಿ.

 

 

ಕನ್ನಡದ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಷೋ ಬಿಗ್’ಬಾಸ್ 5ನೇ ಸೀಸನ್ ಕಾರ್ಯಕ್ರಮದಲ್ಲಿ ದಿನಗಳು ಉರುಳುತ್ತಿದ್ದಂತೆ ಅನೇಕ ಕುತೂಹಲ ವಿಷಯಗಳು ಆಚೆ ಬರುತ್ತಿವೆ. ಪ್ರತೀ ಸಲವೂ ಚಿತ್ರವಿಚಿತ್ರ ಜನರ ಜೊತೆ ಭಯಂಕರ ವಿಚಿತ್ರ ಎಲಿಮೆಂಟುಗಳನ್ನೂ ಮನೆತುಂಬಿಸಿಕೊಳ್ಳೋದು ಬಿಗ್‌ಬಾಸ್ ಮಹಿಮೆ. ಈ ಬಾರಿ ಮೇಲುನೋಟಕ್ಕೇ ಹುಚ್ಚು ಕೆರಳಿಕೊಂಡಿರುವಂತೆ ಕಾಣಿಸೋ ಆಸಾಮಿಗಳ ಸಂಖ್ಯೆ ಕಡಿಮೆ ಇದ್ದರೂ ‘ವಿಚಿತ್ರಗಳಿಗೇನೂ ಕೊರತೆಯಿಲ್ಲ.

 

 

ಇನ್ನು ಬಿಗ್ ಬಸ್ ಕಾರ್ಯಕ್ರಮದ ಐದನೇ ಸೀಸನ್ ಯಶಸ್ವಿಯಾಗಿ ಐದುವಾರಗಳನ್ನು ಪೂರೈಸಿದ್ದು ಐದು ಜನ ಎಲಿಮಿನೇಟ್ ಆಗಿದ್ದಾರೆ. ಈ ವಾರ ಕೃಷಿ ತಾಪಂಡ ಎಲಿಮಿನೇಟ್ ಆಗಿದ್ದಾರೆ. ಈ ಬೆನ್ನಲ್ಲೇ ಕಳೆದ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ರನ್ನರ್ ಅಪ್ ಆಗಿದ್ದ ಕಿರಿಕ್ ಕೀರ್ತಿ ಬಿಗ್ ಬಾಸ್ ಮನೆಗೆ ಮತ್ತೆ ಎಂಟ್ರಿಕೊಡುತ್ತಿದ್ದಾರೆ.

 

 

ಇದೇನಪ್ಪ ಇದು ಕಿರಿಕ್ ಕೀರ್ತಿ ಮತ್ತೆ ಬಿಗ್ ಬಾಸ್ ಗೆ ಸ್ಪರ್ಧಿಯಾಗಿ ಹೋಗ್ತಿದ್ದಾರಾ? ಅಂತ ಕನ್’ಫ್ಯೂಸ್ ಮಾಡ್ಕೋಬೇಡಿ ಯಾಕಂದ್ರೆ ಕಿರಿಕ್ ಕೀರ್ತಿ ಬಿಗ್ ಬಾಸ್ ಗೆ ಹೋಗ್ತಿರೋದು ಸ್ಪರ್ಧಿಯಾಗಲ್ಲ ಬದಲಾಗಿ ವಿಶೇಷ ಅತಿಥಿಯಾಗಿ. ಈಗಾಗಲೇ ಕಿರೀಕ್ ಕೀರ್ತಿ ಅಥಿತಿಯಾಗಿ ಹೋಗಿರುವ ಕಾರ್ಯಕ್ರಮದ ಪ್ರೊಮೊ ಕೂಡ ರೆಲೀಸ್ ಆಗಿದ್ದು ಇಂದು ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.


ಮನೆಯ ಸದಸ್ಯರುಗಳೆಲ್ಲರೂ ಮಕ್ಕಳಂತೆ ವೇಷಧರಿಸಿಕೊಂಡು ಶಾಲೆಯ ಅಣಕನ್ನು ಮಾಡಲಿದ್ದಾರೆ. ಆ ಶಾಲೆಗೆ ಕನ್ನಡ ಕಲಿಸುವ ಕನ್ನಡ ಶಿಕ್ಷಕರಾಗಿ ಕಿರೀಕ್ ಕೀರ್ತಿ ಮನೆಯ ಪ್ರವೇಶ ಪಡೆಯಲಿದ್ದಾರೆ. ಕಿರೀಕ್ ಕೀರ್ತಿಯ ನಂತರ ಕಳೆದ ಬಾರಿಯ ಸ್ಪರ್ಧಿಗಳಾಗಿದ್ದ ನಿರಂಜನ್, ಶಾಲಿನಿ, ಶೀತಲ್ ಶೆಟ್ಟಿಯವರೂ ಕೂಡ ಈ ವಾರ ಸ್ಪೆಷಲ್ ಗೆಸ್ಟ್ ಗಳಾಗಿ ಆಗಮಿಸಲಿದ್ದಾರೆ ಎನ್ನುವ ಸುದ್ದಿಯಿದೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top