fbpx
ಕಿರುತೆರೆ

ಮಹಾದಾಯಿ ಹೋರಾಟದ ಕಿಚ್ಚು ಹೆಚ್ಚಿಸಿದ ಬಿಗ್’ಬಾಸ್ ಸಮೀರ್ ಆಚಾರ್ಯ.

ಮಹಾದಾಯಿ ಹೋರಾಟದ ಕಿಚ್ಚು ಹೆಚ್ಚಿಸಿದ ಬಿಗ್’ಬಾಸ್ ಸಮೀರ್ ಆಚಾರ್ಯ.

 

 

ಕಳೆದ ಎರಡು ದಶಕಗಳಿಂದ ನಡೆಸುತ್ತಿದ್ದ ಮಹಾದಾಯಿ ಹೋರಾಟಕ್ಕೆ ಇಂದಿಗೂ ನ್ಯಾಯ ಸಿಕ್ಕಿಲ್ಲ. ಉತ್ತರ ಕರ್ನಾಟಕ ಭಾಗದ ಜನರಿಗೆ ಮಹಾದಾಯಿ ಜೀವನದಿಯಾಗಬಹುದೆಂದು ನಿರೀಕ್ಷೆ ಹುಸಿಯಾಗಿದೆ.. ಅಲ್ಲದೆ ಇಂದಿಗೂ ಈ ಬಗ್ಗೆ ಹೋರಾಟಗಳು ನಡೆಯುತ್ತಿವೆ. ಈ ಮಧ್ಯೆ ಕನ್ನಡದ ಬಿಗ್ ಬಾಸ್ ಕಾರ್ಯಕ್ರಮದ ಸಂಚಿಕೆ ಮಹಾದಾಯಿ ಹೋರಾಟದ ಕಿಚ್ಚು ಹೆಚ್ಚಿಸಿದೆ.

 

 

ಹೌದು ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸಾಮಾನ್ಯ ವ್ಯಕ್ತಿಯ ಕೋಟಾದಲ್ಲಿ ಮನೆಗೆ ಎಂಟ್ರಿಕೊಟ್ಟಿರುವ ಹುಬ್ಬಳಿ ಮೂಲದ ಸಮೀರ್ ಆಚಾರ್ಯ ನೆನ್ನೆ ಬಿಗ್ ಬಾಸ್ ಕೊಟ್ಟಿದ್ದ ವಿಶೇಷ ಟಾಸ್ಕ್ ನಲ್ಲಿ ಮಹಾದಾಯಿಯ ಬಗ್ಗೆ ಕಿಚ್ಚಿನ ಮಾತುಗಳನ್ನಾಡಿದ್ದಾರೆ.

 

 

ವಿಶ್ವ ಪುರುಷರ ದಿನದ ಪ್ರಯುಕ್ತ ನೆನ್ನೆ ಫೇರ್ ಅಂಡ್ ಹ್ಯಾಂಡ್ ಸಮ್ ಲೇಸರ್12 ವತಿಯಿಂದ ಬಿಗ್ ಬಾಸ್ ಮನೆಯಲ್ಲಿವ ಪುರುಷ ಸದಸ್ಯರಿಗೆ ಫ್ಯಾಷನ್ ಷೋ ವನ್ನು ಆಯೋಜಿಸಲಾಗಿತ್ತು. ಇದರಂತೆ ಎಲ್ಲ ಪುರುಷ ಸದಸ್ಯರು ರ್ಯಾಂಪ್ ವಾಕ್ ಮಾಡಬೇಕು. ರ್ಯಾಂಪ್ ವಾಕ್ ಮಡಿದ ನಂತರ ತಮ್ಮಲ್ಲಿ ಅಡಗಿರುವ ಕಲೆಯನ್ನು ಪ್ರದಶಿಸಬೇಕು.

 

 

ಟಾಸ್ಕ್ ಪ್ರಕಾರ ಎಲಾರಂತೆ ರ್ಯಾಂಪ್ ವಾಕ್ ಮಾಡಿದ ಸಮೀರ್ ಆಚಾರ್ಯರವರು ನಂತರ ಮಹಾದಾಯಿ ಹೋರಾಟದ ಬಗ್ಗೆ “ಮಹಾದಾಯಿ ಎಲ್ಲಿಗಾದರೂ ಹರಿಯಲಿ ಎಲ್ಲಿಗಾದರೂ ಸೇರಿಲಿ ಅದು ಯಾವತ್ತಿದ್ದರೂ ನಮ್ಮದೇ,” ಎಂದು ಹೇಳಿ ಮಹಾದಾಯಿ ನದಿಯ ಬಗ್ಗೆ “ಮಹಾದಾಯಿ ನೀ ಕನ್ನಡತಿ ನಮ್ಮೆಲ್ಲರಿಗೆ ನೀ ಒಡತಿ” ಎಂದು ಹಾಡಿ “ಬಡಾಯಿ ಕೊಚ್ಚಿಕೊಂಡಿದ್ದು ಸಾಕು ಮಹಾದಾಯಿ ಕರ್ನಾಟಕಕ್ಕೆ ಬೇಕು” ಎಂದು ಖಡಕ್ ಘೋಷಣೆ ಕೂಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top