fbpx
ಮನೋರಂಜನೆ

ಮದುವೆಯಾಗಲು ಹುಡುಗಿ ಬೇಕೆಂದು ಫೇಸ್’ಬುಕ್’ನಲ್ಲಿ ಪೋಸ್ಟ್‌ ಮಾಡಿದ ರಾಜರಥ ಚಿತ್ರದ ನಟ.

ಮದುವೆಯಾಗಲು ಹುಡುಗಿ ಬೇಕೆಂದು ಫೇಸ್’ಬುಕ್’ನಲ್ಲಿ ಪೋಸ್ಟ್‌ ಮಾಡಿದ ರಾಜರಥ ಚಿತ್ರದ ನಟ.

 

 

ರಂಗೀತರಂಗ ಖ್ಯಾತಿಯ ಭಂಡಾರಿ ಬ್ರದರ್ಸ್ ಅವರ ಮುಂದಿನ ರಾಜರಥ ಚಿತ್ರದಲ್ಲಿ ತಮಿಳಿನ ಖ್ಯಾತ ನಟ ಆರ್ಯ ಅಭಿನಯಿಸುತ್ತಿದ್ದು ಆ ಮೂಲಕ ಕನ್ನಡ ಬರುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸಿರುವ ಆರ್ಯ ಕನ್ನಡದ ಯುವ ನಟನಿಗೆ ಸಾಥ್ ಕೊಟ್ಟಿದ್ದಾರೆ. ನಟ ಆರ್ಯ ಇಷ್ಟರಲ್ಲೇ ಮದುವೆಯಾಗಬೇಕಂತೆ..! ಏನಪ್ಪಾ ವಿಷಯ ಅಂತೀರಾ ಮುಂದೆ ಓದಿ.

 

 

ಮದ್ರಾಸ್ಪಾಟಿನಂ ಮತ್ತು ರಾಜಾ ರಾಣಿ ಖ್ಯಾತಿಯ ಆರ್ಯ ತಮ್ಮ ಬಾಲ ಸಂಗಾತಿಯ ಹುಡುಕಾಟದಲ್ಲಿದ್ದಾರೆ. ಅದಕ್ಕಾಗಿ ಅವರು ಸಾಮಾಜಿಕ ಮಾಧ್ಯಮದ ಮೂಲಕ ಕರೆ ನೀಡಿದ್ದಾರೆ. ತಮ್ಮ ಅಭಿಮಾನಿಗಳು ಮತ್ತು ಸ್ನೇಹಿತರನ್ನು ಉದ್ದೇಶಿಸಿ ಆರ್ಯರವರು ಒಂದು ವಿಡಿಯೋ ಮಾಡಿದ್ದಾರೆ ” ಕಳೆದ ವಾರ ಜಿಮ್‌ನಲ್ಲಿ ಫ್ರೆಂಡ್ಸ್‌ ಜತೆ ತನ್ನ ಮದುವೆ ಬಗ್ಗೆ ಮಾತನಾಡುತ್ತಿದ್ದಾಗ ಅವರ ಫ್ರೆಂಡ್ಸ್ ವೀಡಿಯೋ ಮಾಡಿ ಫೇಸ್‌ಬುಕ್‌ ನಲ್ಲಿ ಅಪ್ಲೋಡ್ ಮಾಡಿದ್ದರು. ಆ ವೀಡಿಯೋ ವೈರಲ್‌ ಎಲ್ಲಾ ಕಡೆ ಸಕತ್ ಆಗಿತ್ತು.” ಎಂದು ಆ ವಿಡಿಯೋದಲ್ಲಿ ಸ್ವತಃ ಆರ್ಯಾನೇ ವೀಡಿಯೋ ಮಾಡಿ ತಾನು ಮದುವೆಗೆ ಹುಡುಗಿ ಹುಡುಕುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

 

 

“ನಾನು ನನ್ನ ಜೀವನಕ್ಕೆ ಸಂಗಾತಿಯನ್ನು ಹುಡುಕುತ್ತಿದ್ದೇನೆ. ಸಾಮಾನ್ಯವಾಗಿ, ಜನರು ತಮ್ಮ ಸ್ನೇಹಿತರು, ಕುಟುಂಬ, ಅಥವಾ ವೈವಾಹಿಕ ಸೈಟ್ಗಳ ಮೂಲಕ ಅವರ ಜೀವನ ಸಂಗಾತಿಯನ್ನು ಆರಿಸಿಕೊಳ್ಳುತ್ತಾರೆ. ಆದರೆ ನಾನು ಹಾಗೆ ಇಲ್ಲ. ನನ್ನನ್ನು ಮದುವೆಯಾಗುವವರಿಗೆ ನನ್ನ ಬಳಿ ಯಾವುದೇ ಬೇಡಿಕೆಗಳು ಅಥವಾ ಷರತ್ತುಗಳಿಲ್ಲ. ನೀವು ನನ್ನನ್ನು ಇಷ್ಟಪಟ್ಟರೆ, ನಾನು ನಿಮಗೆ ಉತ್ತಮ ಜೀವನ ಸಂಗಾತಿಯಾಗುತ್ತೇನೆ ಎಂದು ಭಾವಿಸಿದರೆ, ದಯವಿಟ್ಟು 7330173301.ನಂಬರ್ ಗೆ ಕರೆ ಮಾಡಿ. ಇದು ತಮಾಷೆಯಲ್ಲ,ಇದು ನನ್ನ ಜೀವನದ ವಿಷಯವಾಗಿದೆ, ದಯವಿಟ್ಟು ಈ ಸಂಖ್ಯೆಗೆ ಕರೆ ಮಾಡಿ. ನಿಮ್ಮ ಕರೆಗಾಗಿ ನಿರೀಕ್ಷಿಸಲಾಗುತ್ತಿದೆ. “ಎಂದು ಆರ್ಯ ಫೇಸ್ ಬುಕ್ ನಲ್ಲಿ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top