fbpx
ಮನೋರಂಜನೆ

ಜಗತ್ತಿನಾದ್ಯಂತ ಇರುವ ಕನ್ನಡಿಗರಿಗೆ ಪುನೀತ್ ಅಭಿಮಾನಿಗಳಿಗೆ “ಅಂಜನಿಪುತ್ರ” ಚಿತ್ರದಿಂದ ಮತ್ತೊಂದು ಸಿಹಿ ಸುದ್ದಿ ಏನ್ ಅಂತೀರಾ ಪುನೀತ್ ಮಾತಾಡಿದ್ದಾರೆ ಕೇಳಿ !

ಪುನೀತ್ ಅಭಿಮಾನಿಗಳಿಗೆ “ಅಂಜನಿಪುತ್ರ” ಚಿತ್ರದಿಂದ ಸಿಕ್ತು ಸಿಹಿ ಸುದ್ದಿ

 

 

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ತಮ್ಮ ಅಭಿಮಾನಿಗಳಿಗೆ ಸಿಹಿ ಸಮಾಚಾರವೊಂದನ್ನ ನೀಡಿದ್ದಾರೆ ಅದೇನೆಂದರೆ ಅವರ ಮುಂದಿನ ಚಿತ್ರ ಅಂಜನೀಪುತ್ರದ ಆಡಿಯೋ ರೆಲೀಸ್ ಮತ್ತು ಚಿತ್ರದ ರಿಲೀಸ್ ಡೇಟ್’ಗಳನ್ನು ಅಧಿಕೃತವಾಗಿ ಅನೌನ್ಸ್ ಮಾಡಲಾಗಿದೆ.

 

 

ಅಂಜನಿಪುತ್ರ ಚಿತ್ರದ ಆಡಿಯೋ ಇದೇ ತಿಂಗಳು(ನವೆಂಬರ್ )24ಕ್ಕೆ ಬಿಡುಗಡೆಯಾಗುತ್ತಿದ್ದು. ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ನಗರದ ಸೆಂಟ್ರಲ್ ಕಾಲೇಜ್ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ವಿಶೇಷವೆಂದರೆ ಪುನೀತ್ ಒಡೆತನದ ಪಿ’ಆರ್’ಕೆ ಆಡಿಯೋ ಸಂಸ್ಥೆ ಅಡಿ ಹೆಸರಿನಲ್ಲೇ ಅಂಜನೀಪುತ್ರ ಚಿತ್ರದ ಆಡಿಯೋವನ್ನ ಬಿಡುಗಡೆ ಮಾಡಲಾಗುತ್ತಿದೆ.

 

 

ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ಸಂಗೀತ ನಿರ್ದೇಶಕರಿಗೆ ಗೌರವಿಸಲಾಗುತ್ತಿದೆ. ಚಿತ್ರದ ಆಡಿಯೋ ಬಿಡುಗಡೆಗೊಂಡ ಬಳಿಕ PRK ಸಂಸ್ಥೆ ಅಡಿಯಲ್ಲಿ ಯೂ ಟ್ಯೂಬ್ ಚಾನಲ್’ವೊಂದು ಆರಂಭವಾಗಲಿದೆ.. ಚಿತ್ರವನ್ನು ಡಿಸೇಂಬರ್ ತಿಂಗಳಲ್ಲಿ ತೆರೆಗೆ ತರುವ ತಯಾರಿಯಲ್ಲಿದೆ ಚಿತ್ರತಂಡ .

 

 

ಅಂಜನಿಪುತ್ರ ಚಿತ್ರದಲ್ಲಿ ಪುನೀತ್ ಗೆ ನಾಯಕಿಯಾಗಿ ಇದೇ ಮೊದಲ ಬಾರಿಗೆ ಕಿರಿಕ್ ಹುಡುಗಿ “ರಶ್ಮಿಕಾ ಮಂದಣ್ಣ” ಅಭಿನಯಿಸುತ್ತಿದ್ದಾರೆ.. ಅಲ್ಲದೆ ವಿಶೇಷ ಪಾತ್ರದಲ್ಲಿ ರಮ್ಯಾ ಕೃಷ್ಣಾ ಕೂಡ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಸಾಧು ಕೋಕಿಲ, ಚಿಕ್ಕಣ್ಣ, ಮುಕೇಶ್‌ ರಿಷಿ, ರವಿಶಂಕರ್‌ ಸೇರಿದಂತೆ ಹಲವರು ಅಂಜನಿಪುತ್ರ ಚಿತ್ರದಲ್ಲಿ ನಟಿಸಿದ್ದಾರೆ.. ನಟಿ ಹರಿಪ್ರಿಯಾ ರವರು ಕೂಡ ಪುನೀತ್ ಜೊತೆ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ..

 

 

ಭಜರಂಗಿ ಖ್ಯಾತಿಯ ಎ.ಹರ್ಷ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಎಂ.ಎನ್ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ…ಚಿತ್ರಕ್ಕೆ ರವಿ ಬಸ್ರೂರು ಅವರ ಸಂಗೀತ ನಿರ್ದೇಶನ ಮತ್ತು ಸ್ವಾಮಿ ಅವರ ಛಾಯಾಗ್ರಹಣವಿದೆ.ಇದು ತಮಿಳಿನ ತಮಿಳಿನ “ಪೂಜೈ’ ಚಿತ್ರದ ರೀಮೇಕ್‌ ಆಗಿದ್ದು, ಕನ್ನಡದ ನೇಟಿವಿಟಿಗೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಲಾಗಿದೆ ಎಂದು ಚಿತ್ರತಂಡ ಹೇಳುತ್ತದೆ.

 

24 ನೇ ತಾರೀಕು ಶುಕ್ರವಾರ ಸಂಜೆ 6 .30 ರ ಮೇಲೆ ಪುನೀತ್ ರಾಜ್ ಕುಮಾರ್ ರವರ ಅಧಿಕೃತ ಫೇಸ್ ಬುಕ್ ಪುಟ ಹಾಗು ಯು ಟ್ಯೂಬ್ ಎರಡರಲ್ಲೂ ಅಂಜನಿ ಪುತ್ರ ಆಡಿಯೋ ರಿಲೀಸ್ ಲೈವ್ ಪ್ರಸಾರವಾಗಲಿದೆ ಜಗತ್ತಿನಾದ್ಯಂತ ಇರುವ ಎಲ್ಲ ಕನ್ನಡಿಗರು ಅಂಜನಿ ಪುತ್ರ ಆಡಿಯೋ ರಿಲೀಸ್ ನೋಡಿ ಎಂದು ಪುನೀತ್ ಹೇಳಿದ್ದಾರೆ.

 

ಈ ವಿಡಿಯೋ ನೋಡಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top