fbpx
ಕಿರುತೆರೆ

ಸಿಕ್ಕಾಪಟ್ಟೆ ವೈರಲ್ ಆಯ್ತು ಬಿಗ್’ಬಾಸ್’ನಲ್ಲಿ ಚಂದನ್ ಶೆಟ್ಟಿ ಮಾಡಿದ ಮತ್ತೊಂದು ರ‍್ಯಾಪ್ ಸಾಂಗ್..!

ಸಿಕ್ಕಾಪಟ್ಟೆ ವೈರಲ್ ಆಯ್ತು ಬಿಗ್’ಬಾಸ್’ನಲ್ಲಿ ಚಂದನ್ ಶೆಟ್ಟಿ ಮಾಡಿದ ಮತ್ತೊಂದು ರ‍್ಯಾಪ್ ಸಾಂಗ್..!

 

 

ಈ ಭಾರಿಯ ಬಿಗ್ ಬಾಸ್ ಕಾರ್ಯಕ್ರಮದ ಬಲಿಷ್ಠ ಸ್ಪರ್ದಿಗಳಲ್ಲಿ ಒಬ್ಬರಾದ ಚಂದನ್ ಶೆಟ್ಟಿ ಬಿಗ್ ಬಾಸ್ ಒಳಗೆ ಮತ್ತು ಹೊರಗೆ ಎಲ್ಲರಿಗೂ ಇಷ್ಟವಾಗಿದ್ದಾರೆ. ಕೈಗೆ ಸಿಕ್ಕ ವಸ್ತುಗಳನ್ನೇ ಸಂಗೀತ ಸಂಯೋಜನೆಗೆ ಉಪಕರಣಗಳನ್ನಾಗಿ ಉಪಯೋಗಿಸಿಕೊಂಡು, ಸ್ಥಳದಲ್ಲೇ ರ‍್ಯಾಪ್‌ ಸಾಂಗ್‌ ಮಾಡುವ ಚಂದನ್‌ ಟ್ಯಾಲೆಂಟ್‌ಗೆ ಎಲ್ಲರೂ ಫಿದಾ ಆಗಿದ್ದಾರೆ..ಬಿಗ್ ಬಾಸ್ ಮನೆಯಲ್ಲಿ ಆರು ವಾರಗಳಿಂದ ಇದ್ದರೂ ಯಾರೊಂದಿಗೂ ಜಗಳವಾಡದೆ ಯಾರ ಬಗ್ಗೆಯೂ ಗಾಸಿಪ್ ಮಾಡದೆ ಚಂದನ್ ವೀಕ್ಷಕರ ಮೆಚ್ಚುಗೆ ಗಿಟ್ಟಿಸಿಕೊಂಡಿದ್ದಾರೆ. ಮುಂದೆ ಓದಿ.

 

 

ವಿಶ್ವ ಪುರುಷರ ದಿನದ ಪ್ರಯುಕ್ತ ನೆನ್ನೆ ಫೇರ್ ಅಂಡ್ ಹ್ಯಾಂಡ್ ಸಮ್ ಲೇಸರ್12 ವತಿಯಿಂದ ಬಿಗ್ ಬಾಸ್ ಮನೆಯಲ್ಲಿವ ಪುರುಷ ಸದಸ್ಯರಿಗೆ ಫ್ಯಾಷನ್ ಷೋ ವನ್ನು ಆಯೋಜಿಸಲಾಗಿತ್ತು. ಇದರಂತೆ ಎಲ್ಲ ಪುರುಷ ಸದಸ್ಯರು ರ್ಯಾಂಪ್ ವಾಕ್ ಮಾಡಬೇಕು. ರ್ಯಾಂಪ್ ವಾಕ್ ಮಡಿದ ನಂತರ ತಮ್ಮಲ್ಲಿ ಅಡಗಿರುವ ಕಲೆಯನ್ನು ಪ್ರದಶಿಸಬೇಕು. ಮನೆಯ ಮಹಿಳಾ ಸದಸ್ಯರು ಇದಕ್ಕೆ ತೀರ್ಪುಗಾರರಾಗಿರುತ್ತಾರೆ ಪ್ರತಿಬ್ಬರ ಪ್ರದರ್ಶನಕ್ಕೂ ಅಂಕಗಳನ್ನ ನೀಡುತ್ತಾರೆ.

 

 

ಟಾಸ್ಕ್ ಪ್ರಕಾರ ಎಲಾರಂತೆ ರ್ಯಾಂಪ್ ವಾಕ್ ಮಾಡಿದ ಚಂದನ್ ಶೆಟ್ಟಿ ತಮ್ಮ ಬಗ್ಗೆಯೇ ಒಂದು ರ್ಯಾಪ್ ಸಾಂಗ್ ಮಾಡಿ ಹಾಡಿದರು. ತುಂಬಾ ಕ್ಯಾಚಿ ವರ್ಡ್ ಗಳನ್ನು ಬಳಸಿ ಮಾಡಿರೋ ಈ ಸಾಂಗ್ ಕೇಳಲು ಸಕತ್ ಮಜವಾಗಿದೆ.. ಚಂದನ್ ಶೆಟ್ಟಿಯವರ ಈ ಹಾಡನ್ನ ಈ ವಿಡಿಯೋದಲ್ಲಿ ನೋಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top