fbpx
ಆರೋಗ್ಯ

ಕುಡಿದ ಜಾಸ್ತಿ ಆದ್ರೆ ಅಮಲು(ಹ್ಯಾಂಗೋವರ್) ಜಾಸ್ತಿ ಆಗುತ್ತೆ ಇದ್ರಿಂದ ತಲೆ ನೋವು ,ಸುಸ್ತು ಜಾಸ್ತಿ ಆಗುತ್ತೆ ಇದ್ರಿಂದ ಹೊರಗೆ ಬರ್ಬೇಕಾದ್ರೆ ಹೀಗೆ ಮಾಡಿ..

 

ಕುಡಿದ ಅಮಲು (ಹ್ಯಾಂಗೋವರ್)ನಿಂದ ಹೊರಬರಲು ಮನೆ ಮದ್ದು:

 

 

ಅತಿಯಾದ ಮದ್ಯಪಾನ ಸೇವನೆಯಿಂದ ಅಮಲು (ಹ್ಯಾಂಗೋವರ್) ಬರುತ್ತದೆ ಇದರಿಂದ ಆಗುವ ಸಮಸ್ಯೆಗಳು :

ತಲೆ ಸುತ್ತುತ್ತದೆ ,ಏನು ಕೆಲಸ ಮಾಡುವುದಕ್ಕೂ ಇಷ್ಟ ಆಗಲ್ಲ.ಜಾಸ್ತಿ ತಲೆ ನೋವುತ್ತ ಇರುತ್ತೆ,ಕಣ್ಣು ಕೆಂಪಗಾಗುತ್ತದೆ,ಹೊಟ್ಟೆ ನೋವುತ್ತ ಇರುತ್ತೆ.

ಕುಡಿದ ಅಮಲು (ಹ್ಯಾಂಗೋವರ್)ನಿಂದ ಹೊರಬರಲು ಮನೆ ಮದ್ದನ್ನು ನಾವು ನಿಮಗೆ ಹೇಳ್ತಿರಿ ,ಇದರ ಉಪಯೋಗ ಪಡೆದುಕೊಳ್ಳಿ.

 

೧.ಸಿಟ್ರಸ್ ಸತ್ವ ಇರುವಂತ ಹಣ್ಣು ಮತ್ತು ಅದರ ರಸವನ್ನು ಕುಡಿಯಿರಿ:

 

 

ಸಿಟ್ರಸ್ ಸತ್ವ ಇರುವಂತ ಹಣ್ಣುಗಳಲ್ಲಿ ಇರುವಂತ ವಿಟಮಿನ್ ಸಿ ಕುಡಿತದ ಅಮಲಿನಿಂದ ಹೊರಬರಲು ಸಹಾಯ ಮಾಡುತ್ತದೆ .
ಸಿಟ್ರಸ್ ಸತ್ವ ಇರುವಂತ ನಿಂಬೆ ರಸ ,ಕಿತ್ತಳೆ ಹಣ್ಣಿನ ರಸ ಮತ್ತು ಟೊಮೇಟೊ ರಸ ನಿಮ್ಮ ದೇಹದಲ್ಲಿನ ಎಲ್ಲ ವಿಷಕರಿ ವಸ್ತುಗಳನ್ನೂ ಹೊರಹಾಕಿ ನಿಮ್ಮನು ಅಮಲಿನಿಂದ ಹೊರತರುತ್ತದೆ.

 

೨.ನೀರು:

 

 

ಕುಡಿತದ ಅಮಲಿನಿಂದ ಹೊರಬರಲು ಇನ್ನೊಂದು ಸುಲಭ ಮಾರ್ಗ ಆದಷ್ಟು ಹೆಚ್ಚು ಹೆಚ್ಚು ನೀರನ್ನು ಕುಡಿಯಿರಿ.

 

೩.ಜೇನು ತುಪ್ಪ:

 

 

ಒಂದು ಲೋಟ ನೀರಿಗೆ ಸ್ವಲ್ಪ ನಿಂಬೆರಸ ಮತ್ತು ಒಂದು ಚಮಚ ಜೇನು ತುಪ್ಪ ಸೇರಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.

 

೪.ತಣ್ಣೀರು:

 

 

ಒಂದು ಹತ್ತಿ ಬಟ್ಟೆ ತೆಗೆದುಕೊಂಡು ಅದನ್ನು ತಣ್ಣೀರಿನಲ್ಲಿ ನೆನಸಿ ನಿಮ್ಮ ತಲೆಯ ಮೇಲೆ ಸ್ವಲ್ಪಹೊತ್ತು ಇರಿಸಬೇಕು ಮತ್ತು ತಣ್ಣಗಿನ ನೀರಿನಲ್ಲಿ ಸ್ನಾನ ಮಾಡಬೇಕು.

 

೫.ಬಾಳೆಹಣ್ಣು:

 

 

ಕುಡಿತದ ಅಮಲಿನಿಂದ ದೇಹದಲ್ಲಿ ಪೊಟ್ಯಾಸಿಯಂ ಮತ್ತು ಮೆಗ್ನೀಷಿಯಂ ಸತ್ವ ಕಡಿಮೆಯಾಗುತ್ತದೆ ಅದರಿಂದ ಬಾಳೆಹಣ್ಣು ತಿನ್ನುವುದರಿಂದ ಪೊಟ್ಯಾಸಿಯಂ ಮತ್ತು ಮೆಗ್ನೀಷಿಯಂ ಸತ್ವ ಹೆಚ್ಚಾಗಿ ಅಮಲು ಕಡಿಮೆ ಆಗುತ್ತದೆ.

 

೬.ಶುಂಠಿ:

ಶುಂಠಿಯನ್ನು ಚೂರು ಚೂರು ತುಂಡುಗಳಾಗಿ ಮಾಡಿಕೊಂಡು ಸ್ವಲ್ಪ ನೀರಿನ ಜೊತೆ 10 ರಿಂದ 15 ನಿಮಿಷ ಕುದ್ದಿಸಿಕೊಳ್ಳಿ ನಂತರ ಅದಕ್ಕೆ ಸ್ವಲ್ಪ ಜೇನು ತುಪ್ಪ ಮತ್ತು ಸ್ವಲ್ಪ ನಿಂಬೆ ರಸ ಹಾಕಿ ಕುಡಿಯಬೇಕು.

 

೭.ಎಲೆ ಕೋಸು:

ಎಲೆ ಕೋಸನ್ನು ಹಾಗೇ ಹಸಿಯಾಗಿ ತಿನ್ನಬೇಕು ಇಲ್ಲವಾದರೆ ಅದನ್ನು ಜ್ಯೂಸು ಮಾಡಿಕೊಂಡು ಕುಡಿಯುವುದರಿಂದ ನಿಮ್ಮ ಕುಡಿತದ ಅಮಲು ಬಲು ಬೇಗ ಮಾಯವಾಗುತ್ತದೆ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top