fbpx
ದೇವರು

ಗರುಡ ಪುರಾಣದ ಪ್ರಕಾರ ಲಕ್ಷ್ಮೀ ದೇವಿ ನಿಮಗೆ ಒಲಿಯಬೇಕೆಂದರೆ ಅವಶ್ಯವಾಗಿ ಈ ನಿಯಮ ಪಾಲಿಸಬೇಕು ಇದ್ರಿಂದ ನಿಮ್ಮ ಹಣ ಕಾಸಿನ ತೊಂದರೆ ನಿವಾರಣೆಯಾಗುತ್ತೆ

ಗರುಡ ಪುರಾಣದ ಪ್ರಕಾರ ಲಕ್ಷ್ಮೀ ದೇವಿಯು ನಮಗೆ ಒಲಿಯಬೇಕೆಂದರೆ ಅವಶ್ಯವಾಗಿ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಂಡು ಜೀವನದಲ್ಲಿ ಅವುಗಳನ್ನು  ನಾವು ಪಾಲಿಸಬೇಕು.

 

 

ಗರುಡ ಪುರಾಣದಲ್ಲಿ ಯಶಸ್ಸಿನ ಮಂತ್ರವನ್ನು ಉಲ್ಲೇಖಿಸಲಾಗಿದೆ. ಅನೇಕ ಬಾರಿ ನಾವು ಎಷ್ಟು ಕಷ್ಟ ಪಟ್ಟರೂ  ಸಹ ಯಶಸ್ಸು ನಮ್ಮ ಕೈಗೆ ಎಟಕುವುದಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗುತ್ತದೆ.

ಇಂತಹ ಸಂದರ್ಭದಲ್ಲಿ ಗರುಡ ಪುರಾಣದಲ್ಲಿ ಹೇಳಿದ ಕೆಲವೊಂದು ಸರಳವಾದ ಉಪಾಯಗಳನ್ನು ನಾವು ನಮ್ಮ ಜೀವನದಲ್ಲಿ  ಅಳವಡಿಸಿಕೊಂಡಲ್ಲಿ ಅದೃಷ್ಟ ನಮ್ಮನ್ನು ಹುಡುಕಿಕೊಂಡು ಬರುವುದು.

 

 ಕೊಳಕಾಗಿರುವ ಬಟ್ಟೆಯನ್ನು ಧರಿಸಬಾರದು.

 

 

ಕೊಳಕು ಮತ್ತು  ಹರಿದು ಹೋಗಿರುವ ಬಟ್ಟೆಗಳನ್ನು ಧರಿಸಿದರೆ ನಮ್ಮ ಬಳಿ ಎಂದೂ ಸಹ ಲಕ್ಷ್ಮೀ ದೇವಿಯು ಬರುವುದಿಲ್ಲವ೦ತೆ .ಒಂದು ವೇಳೆ  ಲಕ್ಷ್ಮೀ  ದೇವಿಯು ಒಲಿದರೂ ಸಹ ಬಹಳ ದಿನಗಳ ಕಾಲ ಅಲ್ಲಿ ನೆಲೆಸುವುದಿಲ್ಲ.ಆದ್ದರಿಂದ ನಾವು ಯಾವಾಗಲೂ ಶುಭ್ರವಾದ  ಬಟ್ಟೆಗಳನ್ನು ಧರಿಸುವುದು ಉತ್ತಮ ಹಾಗೂ ಹರಿದು ಹೋಗಿರುವ ಬಟ್ಟೆಗಳನ್ನು ಪುನಃ ಒಲಿಗೆ ಹಾಕಿಸಿಕೊಂಡು ಧರಿಸಬಹುದು.

 

ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುವುದು .

 

 

ಮನುಷ್ಯನ ಆಸಫಲತೆಗೆ  ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುವುದು ಸಹ ಒಂದು ಕಾರಣವಾಗುತ್ತದೆ. ಅನಾರೋಗ್ಯಕ್ಕೆ ಮೂಲ ಕಾರಣ ನಮ್ಮ ಆಧುನಿಕ ಯುಗದ ಆಹಾರ ಪದ್ಧತಿಗಳು ಹಾಗೂ ಸಂತುಲಿತ ಆಹಾರ ಸೇವನೆ ಮಾಡದೇ ಇರುವುದು ಸಹ ನಮ್ಮ ಆರೋಗ್ಯದಲ್ಲಿ ಏರು ಪೇರನ್ನು ಉಂಟು ಮಾಡಿ ಆರೋಗ್ಯವನ್ನು ಹಾಳು ಮಾಡುವಂತೆ ಮಾಡುತ್ತದೆ. ಆದ್ದರಿಂದ ಸಂತುಲಿತ ಆಹಾರ ಸೇವನೆ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುವುದರ ಜೊತೆಗೆ ನಮ್ಮ ಮಾನಸಿಕ ಸ್ಥಿರತೆಯೂ ಕೂಡ ನಮ್ಮ ಹಿಡಿತದಲ್ಲಿದ್ದು ಹೆಚ್ಚಿನ ಯಶಸ್ಸು  ನಮ್ಮದಾಗಲಿದೆ. ಇದರಿಂದ ಲಕ್ಷ್ಮೀ  ದೇವಿಯೂ ಸಹ ಒಲಿಯುವಳು.

 

ಶಾಸ್ತ್ರ ಸಂಪ್ರದಾಯಗಳನ್ನು ಪಾಲಿಸುವುದು.

 

 

ಕೆಲವೊಂದು ಶಾಸ್ತ್ರಗಳನ್ನು ಪಾಲಿಸಿದರೆ ಕೂಡ ಯಶಸ್ಸಿಗೆ ಅದು ದಾರಿ ಮಾಡಿಕೊಡುತ್ತದೆ. ದೇವರ ಪೂಜೆ ಪುನಸ್ಕಾರವನ್ನು ವಿಧಿ ವಿಧಾನದ ಮೂಲಕ ಮಾಡಿದರೆ ಮಾತ್ರ ಯಶಸ್ಸು ನಮಗೆ ಖಂಡಿತವಾಗಿಯೂ ಲಭಿಸುತ್ತದೆ.

 

ಜ್ಞಾನ  ಮತ್ತು ವೃದ್ಧಿಗೆ ಅಭ್ಯಾಸ ಬಲ ಮುಖ್ಯ.

 

 

ಹಳೆಯ ಜ್ಞಾನ ಯಶಸ್ಸಿಗೆ ಅಡ್ಡಿಯನ್ನುಂಟು ಮಾಡುಬಹುದು ಆದ್ದರಿಂದ  ಹೊಸ ಹೊಸ ವಿಷಯಗಳನ್ನು  ಕಲಿಯುವುದರಿಂದ ಜ್ಞಾನ ವೃದ್ಧಿಸುವುದರ ಜೊತೆಗೆ ಯಶಸ್ಸನ್ನು ಕೂಡ ಅದು ತಂದುಕೊಡುವುದು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top