fbpx
ಮನೋರಂಜನೆ

ಕಿಚ್ಚನ ‘ಪೈಲ್ವಾನ್’ ತಂಡದಿಂದ ಪ್ರತಿಭಾನ್ವಿತರಿಗೆ ಒಲಿದುಬಂತು ಸುವರ್ಣಾವಕಾಶ!

ಕಿಚ್ಚನ ‘ಪೈಲ್ವಾನ್’ ತಂಡದಿಂದ ಪ್ರತಿಭಾನ್ವಿತರಿಗೆ ಒಲಿದುಬಂತು ಸುವರ್ಣಾವಕಾಶ!

 

 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ‘ಹೆಬ್ಬುಲಿ’ ನಿರ್ದೇಶಕ ಕೃಷ್ಣ ಕಾಂಬಿನೇಷನ್ ನಲ್ಲಿ ಮತ್ತೊಂದು ಚಿತ್ರ ಮೂಡಿಬರುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇದುವರೆಗೂ ಕಾಣಿಸಿಕೊಂಡಿರದ ಪಾತ್ರದಲ್ಲಿ ಕಿಚ್ಚ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಶೂಟಿಂಗ್ ಶುರುವಾಗುವುದಕ್ಕೂ ಮೊದಲೇ ಚಿತ್ರತಂಡದಿಂದ ಪ್ರತಿಭಾವಂತರಿಗೆ ಸುವರ್ಣಾವಕಾಶವೊಂದು ಒಲಿದು ಬಂದಿದೆ.

 

 

ಈಗಾಗಲೇ ಪೈಲ್ವಾನ್ ಚಿತ್ರದ ಫರ್ಸ್ಟ್ ಲುಕ್ ಬಿಡುಗಡೆ ಮಾಡಿರುವ ನಿರ್ದೇಶಕರು ಈಗ ಟೈಟಲ್ ಡಿಸೈನ್ ನನ್ನ ಬದಲಾವಣೆ ಮಾಡಲು ಮನಸ್ಸು ಮಾಡಿದ್ದಾರೆ. ಅದಕ್ಕಾಗಿ ಒಂದು ಒಳ್ಳೆಯ ಐಡಿಯಾವನ್ನು ಕೂಡ ನಿರ್ದೇಶಕರು ಮಾಡಿಕೊಂಡಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ತಿಳಿಸಿದ್ದಾರೆ.

 

 

‘ಪೈಲ್ವಾನ್ ಚಿತ್ರದ ಟೈಟಲ್ ಅನ್ನು ವಿಭಿನ್ನವಾಗಿ ಡಿಸೈನ್ ಮಾಡಿ ನಿರ್ದೇಶಕರಿಗೆ ಕಳುಹಿಸಿದರೆ ಅದರಲ್ಲಿ ಅತ್ಯತ್ತಮವಾದುದನ್ನ ಆಯ್ಕೆ ಮಾಡಿ ಟೈಟಲ್ ಡಿಸೈನ್ ಮಾಡಿದವರಿಗೆ ಬಂಪರ್ ಬಹುಮಾನವನ್ನ ನೀಡಲು ನಿರ್ದೇಶಕ ಕೃಷ್ಣಾ ನಿರ್ಧರಿಸಿದ್ದಾರಂತೆ. ಈ ಬಗ್ಗೆ ಟ್ವೀಟ್ ಮಾಡಿರುವ ಕೃಷ್ಣ “ಪೈಲ್ವಾನ್ ಚಿತ್ರದ ಟೈಟಲ್ ಡಿಸೈನ್ ಅನ್ನು ಮತ್ತೊಮ್ಮೆ ಡಿಸೈನ್ ಮಾಡಿಸಲು ಇಚ್ಛಿಸಿದ್ದೇವೆ. ಆಸಕ್ತರು dopkrish@gmail.com ಗೆ ನಿಮ್ಮ ವಿವರಗಳೊಂದಿಗೆ ಕಳುಹಿಸಬಹುದು. ಅದರಲ್ಲಿ ಅತುತ್ತಮವಾದ ಡಿಸೈನ್ ಅನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.” ಎಂದು ಹೇಳಿದ್ದಾರೆ.

 

 

ಆಸಕ್ತರು ನಿಮಗಿಷ್ಟವಾದ ಸ್ಟೈಲ್ ನಲ್ಲಿ ನಿಮಗೆ ಬೇಕಾದ ರೀತಿಯಲ್ಲಿ ‘ಪೈಲ್ವಾನ್’ ಟೈಟಲ್ ಅನ್ನ ಡಿಸೈನ್ ಮಾಡಿ , ನಿಮ್ಮ ವಿವರಗಳೊಂದಿಗೆ dopkrish@gmail.com ಗೆ ಕಳುಹಿಸಿ ಬಹುಮಾನವನ್ನು ಗೆಲ್ಲಬಹುದು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top