fbpx
ಸಮಾಚಾರ

2017ರ ಮಿಸ್ ​ವರ್ಲ್ಡ್ ಮಾನುಷಿ ಚಿಲ್ಲರ್ ಬಗೆಗಿನ ಟ್ರೊಲ್ಸ್ ನೋಡಿ ಆಶ್ಚರ್ಯ ಪಡ್ತಿರಾ ಜೊತೆಗೆ ಜನ ಹೀಗೂ ಇದಾರೆ ಅಂತೀರಾ !!

 

 

ಚೀನಾದ ಸನ್ಯಾದಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ 108 ದೇಶಗಳ ಸುಂದರಿಯರನ್ನು ಹಿಂದಿಕ್ಕುವ ಮೂಲಕ ಭಾರತದ ಮಾನುಷಿ ಚಿಲ್ಲರ್ 2017ರ ಮಿಸ್ ​ವರ್ಲ್ಡ್ ಕಿರೀಟಿತವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ… ಈ ಮೂಲಕ 17 ವರ್ಷದ ಬಳಿಕ ವಿಶ್ವ ಸುಂದರಿ ಕಿರೀಟ ಧರಿಸಿದ ಆರನೇ ಮಹಿಳೆಯಾಗಿ ಛಿಲ್ಲರ್‌ ಹೊರಹೊಮ್ಮಿದ್ದಾರೆ. 17 ವರ್ಷಗಳ ಹಿಂದೆ 2000ರಲ್ಲಿ ಬಾಲಿವುಡ್ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಮಿಸ್ ​ವರ್ಲ್ಡ್ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದರು.

 

 

 

21 ವರ್ಷ ವಯಸ್ಸಿನ ಮಾನುಷಿ ಮೂಲತಃ ಹರಿಯಾಣ ರಾಜ್ಯದ ನಿವಾಸಿಯಾಗಿದ್ದು, ಅವ್ರ ತಂದೆ ತಾಯಿಯರಿಬ್ಬರೂ ವೈದ್ಯರಾಗಿದ್ದಾರೆ. ಚಿಲ್ಲರ್ ಅವರು ನವದೆಹಲಿಯ ಸೇಂಟ್ ಥಾಮಸ್ ಸ್ಕೂಲ್ ಮತ್ತು ಸೋನ್‍ಪೇಟೆಯ ಭಗತ್ ಫೂಲ್ ಸಿಂಗ್ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ತಮ್ಮ ವೈದ್ಯಕೀಯ ಪದವಿ ವ್ಯಾಸಂಗವನ್ನು ಮಾಡುತ್ತಿದ್ದಾರೆ.

 

 

 

ಮಾನುಷಿ ಚಿಲ್ಲರ್ ಕೂಚಿಪುಡಿ ನೃತ್ಯ ಪರಿಣಿತೆಯಾಗಿದ್ದಾರೆ. ಅಷ್ಟೇ ಅಲ್ಲದೇ, ಸಮಾಜ ಸೇವೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಪ್ರಾಜೆಕ್ಟ್ ಶಕ್ತಿ ಎಂಬ ಕಾರ್ಯಕ್ರಮದ ಅಡಿಯಲ್ಲಿ ಮಹಿಳೆಯರಲ್ಲಿ ಋತುಸ್ರಾವದ ಸಮಯದಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.ಈ ವರೆಗೆ ಸುಮಾರು 20 ಕ್ಕೂ ಹೆಚ್ಚು ಊರುಗಳಿಗೆ ಗ್ರಾಮಗಳಿಗೆ ಭೇಟಿ ನೀಡಿ, 5000 ಮಹಿಳೆಯರಲ್ಲಿ ಜಾಗೃತಿ ಮೂಡಿಸಿದ್ದಾರೆ.

ಆಕೆ ಮಿಸ್ ​ವರ್ಲ್ಡ್ ಆಗಿದ್ದೆ ತಡ ಟ್ರೊಲ್ ಗಳಿಗೆ ಆಹಾರವಾಗಿದ್ದಾಳೆ ಯಾವ ವಿಷಯಕ್ಕೆ ನೀವೇ ನೋಡಿ

 

 

ಈ ಹುಡುಗಿ ,ಮಿಸ್ ವರ್ಲ್ಡ್ !

 

 

ಮೋದಿ ಗಿಮ್ಮಿಕ್ಕು

 

ಮೋದಿ ಬ್ಯೂಟಿ ಟಿಪ್ಸ್ ತಗೋತಾವ್ರೆ ನೋಡಿ

 

 

ಪ್ರತಿಪಕ್ಷದ ನಾಯಕರು ನಾವು ಸ್ವಾಮಿ

 

ಸ್ವಾಮಿ ನಾವು ಚಿಲ್ಲರ್ ಇರ್ಬಹುದು ತಾವು ಸ್ವಲ್ಪ ಚಿಲ್ ಆಗಿರಿ

 

ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ ತಿಳಿಸಿ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top