fbpx
ಕಿರುತೆರೆ

ಬಿಗ್’ಬಾಸ್ ಮನೆಯಿಂದ ಈ ವಾರ ಹೊರಹೋಗಲು ಏಳು ಜನ ನಾಮಿನೇಟ್: ಆದರೆ ಈ ವಾರ ಯಾರೂ ಹೊರ ಹೋಗಲ್ಲ!

ಬಿಗ್’ಬಾಸ್ ಮನೆಯಿಂದ ಈ ವಾರ ಹೊರಹೋಗಲು ಏಳು ಜನ ನಾಮಿನೇಟ್: ಆದರೆ ಈ ವಾರ ಯಾರೂ ಹೊರ ಹೋಗಲ್ಲ!

 

 

ಜನಪ್ರಿಯ ರಿಯಾಲಿಟಿ ಷೋ ಬಿಗ್ ಬಾಸ್ ಕನ್ನಡದ 5ನೇ ಸೀಸನ್’ಗೆ ಎಂಟ್ರಿ ಕೊಟ್ಟಿದ್ದ ಒಟ್ಟು 17 ಮಂದಿ ಪೈಕಿ ಈಗಾಗಲೇ ಅಧಿಕೃತವಾಗಿ ಮನೆಯ 5 ವಾರದ ಎಲಿಮಿನೇಷನ್ ಕೂಡ ಆಗಿದ್ದು ಕ್ರಮವಾಗಿ ಸುಮಾರಾಜಕುಮಾರ್,ಮೇಘ, ದಯಾಳ್ ,ತೇಜಸ್ವಿನಿ ಮತ್ತು ಕೃಷಿ ಎಲಿಮಿನೇಟ್ ಆಗಿದ್ದಾರೆ. ಅಂತೆಯೇ ಈ ವಾರ ಬಿಗ್ ಬಾಸ್ ಮನೆಯಿಂದ ಹೊರಹೋಗಲು ನಡೆದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಬರೋಬ್ಬರಿ ಏಳು ಮಂದಿ ನಾಮಿನೇಟ್ ಆಗಿದ್ದರು.

 

 

ಮನೆಯ ಸದಸ್ಯರ ವೋಟಿಂಗ್ ಆಧಾರದ ಮೇಲೆ ಚಂದನ್, ಶ್ರುತಿ, ಸಮೀರ್ ಆಚಾರ್ಯ, ರಿಯಾಜ್, ಅನುಪಮಾ, ಜಗನ್ ರನ್ನು ನಾಮಿನೇಟ್ ಮಾಡಲಾಗಿತ್ತು. ಈವಾರದ ಕೆಯ್ಪ್ಟನ್ ಆಗಿದ್ದ ನಿವೇದಿತಾ ಸಿಹಿ ಕಹಿ ಚಂದ್ರು ಅವರನ್ನು ನಾಮಿನೇಟ್ ಮಾಡಿದ್ದರು. ಆದರೆ ಈ ವಾರ ಬಿಗ್ ಬಾಸ್ ಮನೆಯಿಂದ ಯಾರೂ ಹೊರ ಹೋಗೋದಿಲ್ಲ ಈ ಬಗ್ಗೆ ನೆನ್ನೆಯ ಸಂಚಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

 

 

ಈ ವಾರ ಎಲಿಮಿನೇಷನ್ ಇಲ್ಲದಿರುವ ಕಾರಣ ಯಾವುದೇ ವೋಟಿಂಗ್ ಲೈನ್ ಗಳು ತೆರೆದಿರುವುದಿಲ್ಲ ಎಂದು ನೆನ್ನೆಯ ಸಂಚಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಆದರೆ ಎಲಿಮಿನೇಷನ್ ಇರುವುದಿಲ್ಲ ಎಂಬ ಸತ್ಯ ಯಾವುದೇ ಸ್ಪರ್ಧಿಗಳಿಗೆ ಗೊತ್ತಿಲ್ಲ. ತಾವು ನಾಮಿನೇಟ್ ಆದ ಭಯದಲ್ಲಿ ಅವರು ಆಡಲಿದ್ದಾರೆ.. ಆದರೆ ಈ ಬಾರಿ ಎಲಿಮಿನೇಷನ್ ಇರುವುದಿಲ್ಲ. ಹಾಗಾಗಿ ನೀವು ಎಸ್.ಎಂ.ಎಸ್ ಕಳುಹಿಸಿ ವೋಟ್ ಮಾಡಿದರೆ ನಿಮ್ಮ ಹಣ ವ್ಯರ್ಥವಾಗುತ್ತದೆ.

.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top