fbpx
ದೇವರು

ನವಗ್ರಹಗಳ ಪ್ರದಕ್ಷಿಣೆ ಮಾಡಿದ ಮೇಲೆ ಕಾಲು ತೊಳೆದುಕೊಂಡ್ರೆ ದಷ್ಟ ದರಿದ್ರ ಬರುತ್ತೆ ಅಂತಾ ಶಾಸ್ತ್ರದಲ್ಲಿ ಹೇಳ್ತಾರೆ ಯಾಕೆ ಗೊತ್ತಾ ?

ನವಗ್ರಹಗಳ ಪ್ರದಕ್ಷಿಣೆ ಮಾಡಿದ ನಂತರ ಕಾಲನ್ನು ತೊಳೆಯಬಾರದು ಎಂದು ನಿಮಗೆ ಗೊತ್ತಾ….

 

ನಾವು ಏನಾದರೂ ತೊಂದರೆಯನ್ನು ಅನುಭವಿಸುತ್ತಿದ್ದರೆ ನವಗ್ರಹ ಪ್ರದಕ್ಷಿಣೆ ಮಾಡಬೇಕು ಎಂದು ಹಿರಿಯರು ಹೇಳುತ್ತಾರೆ. ತೊಂದರೆಗಳನ್ನು ದೂರ ಮಾಡುವ ಅತಿ ಸುಲಭವಾದ ಮಾರ್ಗವೇ ಈ ನವಗ್ರಹ ಪ್ರದಕ್ಷಿಣೆ.

 

 

ದೇವಸ್ಥಾನಗಳಲ್ಲಿ ಪ್ರದಕ್ಷಿಣೆ ಮಾಡದಿದ್ದರೆ ಆ ದೇವರ ಅನುಗ್ರಹ ಸಂಪೂರ್ಣವಾಗಿ ದೊರೆಯುವುದಿಲ್ಲ. ದೇವಸ್ಥಾನದ ಪ್ರದಕ್ಷಿಣೆಗೆ ಎಷ್ಟು ಪ್ರಾಮುಖ್ಯತೆ ಇದೆಯೋ ಹಾಗೆಯೇ ಎಲ್ಲಾ ದೇವಸ್ಥಾನದ ಹೊರಾಂಗಣದಲ್ಲಿ ನವಗ್ರಹ ದೇವಾಲಯ ಇರುತ್ತದೆ .

ನಮ್ಮಲ್ಲಿ ತುಂಬಾ ಜನರು ಮೊದಲಿಗೆ ನವಗ್ರಹ ಪ್ರದಕ್ಷಿಣೆಯನ್ನು ಮಾಡಿದ ತಕ್ಷಣವೇ ಕೈ ಕಾಲನ್ನು ತೊಳೆದುಕೊಂಡು ಪ್ರಧಾನ ಮುಖ್ಯ ದೇವರ ದರ್ಶನ ಮಾಡುತ್ತಾರೆ ಮತ್ತು ಪ್ರದಕ್ಷಿಣೆಯನ್ನು ಹಾಕುತ್ತಾರೆ.

ಆದರೆ ಇದು ಅತ್ಯಂತ ದೋಷಪೂರಿತ ಮತ್ತು ಪಾಪಗ್ರಹಗಳ ಅಧಿಪತಿಗಳ ಮೇಲೆ ನಾವು ಅಪಚಾರ ಮಾಡಿದಂತಾಗುತ್ತದೆ. ನವಗ್ರಹದ ಪ್ರದಕ್ಷಿಣೆ ಆದ ತಕ್ಷಣ ಕಾಲನ್ನು ತೊಳೆಯಬಾರದು .

 

 

ಕೇವಲ ಶನಿದೇವರಿಗೆ ತೈಲಾಭಿಷೇಕ ಮಾಡಿದ ನಂತರ ಮತ್ತು ಬ್ರಾಹ್ಮಣರಿಗೆ ಕಪ್ಪು ಎಳ್ಳನ್ನು ದಾನ ಮಾಡಿದ ನಂತರ ಮಾತ್ರವೇ ಕಾಲನ್ನು ತೊಳೆಯಬೇಕು. ಎಳ್ಳನ್ನು ದಾನ ಮಾಡುವಾಗ ಏನಾದರೂ ಅಂಟಿಕೊಂಡು ಇರುತ್ತದೆ ಎಂದು ಕಾಲನ್ನು ತೊಳೆದುಕೊಳ್ಳಬೇಕು ಅಥವಾ ಸ್ನಾನವನ್ನು ಮಾಡಬೇಕೆಂದು ಪುರೋಹಿತರು ಹೇಳುತ್ತಾರೆ.
ನವಗ್ರಹಗಳಿಗೆ೦ದು ಈ ವಿಷಯವನ್ನು ತಪ್ಪಾಗಿ ಅರಿತುಕೊಂಡ ಜನರು ನವಗ್ರಹಗಳ ಪ್ರದಕ್ಷಿಣೆ ಮಾಡಿದ ತಕ್ಷಣ ಕಾಲನ್ನು ತೊಳೆದುಕೊಳ್ಳುತ್ತಾರೆ.

ನವಗ್ರಹಗಳು ಯಾವಾಗಲೂ ಮುಂದೆ ದೇವಾಲಯದ ಹೊರಾಂಗಣದಲ್ಲಿ ಪ್ರತಿಷ್ಠಾಪಿಸುತ್ತಾರೆ. ಆದ್ದರಿಂದ ಶನಿ ಗ್ರಹಕ್ಕೆ ಸಂಬಂಧಪಟ್ಟ ವಸ್ತುಗಳನ್ನು ದಾನ ಮಾಡದೆ ಇರುವ ಪಕ್ಷದಲ್ಲಿ ಕಾಲನ್ನು ತೊಳೆದುಕೊಳ್ಳುವುದು ಅಪಚಾರವಾಗುತ್ತದೆ. ನವಗ್ರಹ ಪ್ರದಕ್ಷಿಣೆಯಿಂದ ಲಭಿಸಿದ ಪುಣ್ಯ ಸಹ ಕಾಲನ್ನು ತೊಳೆದುಕೊಳ್ಳುವುದರಿಂದ ದೂರವಾಗುತ್ತದೆ.

 

ನವಗ್ರಹ ಪ್ರದಕ್ಷಿಣೆ ಮಾಡುವಾಗ ಹೇಳಬೇಕಾದ ಮಂತ್ರ 

 

“ ಓಂ ನಮಃ ಸೂರ್ಯಾಯ, ಚಂದ್ರಾಯ ಮಂಗಳಾಯ, ಬುಧಾಯ ಚ, ಗುರು, ಶುಕ್ರ, ಶನೈಶ್ಚರಾಯ , ರಾಹುವೇ, ಕೇತುವು ನಮಃ”

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top