fbpx
ಮನೋರಂಜನೆ

ತಾರಕ್ ನಡಿಗೆ 100ರ ಕಡೆಗೆ..!

ತಾರಕ್ ನಡಿಗೆ 100ರ ಕಡೆಗೆ..!

 

 

ಮಿಲನಾ ಪ್ರಕಾಶ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೋಡಿಯ ಚಮತ್ಕಾರ ನೂರರ ಹೊಸ್ತಿಲಿನತ್ತ ಬಂದು ನಿಂತಿದೆ. ಚೆಂದದ್ದೊಂದು ಫ್ಯಾಮಿಲಿ ಸೆಂಟಿಮೆಂಟ್ ಹೊಂದಿರೋ ಕಥೆ, ಎಂಥವರನ್ನೂ ಆವರಿಸಿಕೊಳ್ಳುವಂಥಾ ದರ್ಶನ್ ಅವರ ಭಾವಪೂರ್ಣ ಅಭಿನಯ ಸೇರಿಕೊಂಡು ತಾರಕ್ ಈ ವರ್ಷದ ಸೂಪರ್ ಹಿಟ್ ಚಿತ್ರವಾಗಿ ಹೊರ ಹೊಮ್ಮಿದೆ.

 

 

 

ದರ್ಶನ್ ಅಭಿಮಾನಿಗಳು ಪಕ್ಕಾ ಫೋರ್ಸ್‌ಫುಲ್ ಕಥೆಯ ಜೊತೆ ತಮ್ಮ ಬಾಸ್ ಭಾರೀ ಬಿಲ್ಡಪ್ ಚಿತ್ರಗಳಲ್ಲೇ ಮಿಂಚೋದನ್ನು ನಿರೀಕ್ಷೆ ಮಾಡುತ್ತಾರೆ. ಅಂಥಾದ್ದೊಂದು ಮನಸ್ಥಿತಿಯ ಅರಿವಿರೋದರಿಂದಲೇ ಅದಕ್ಕೆ ತಕ್ಕುದಾದ ಕಥೆಗಳೇ ಸಿದ್ಧಗೊಳ್ಳುತ್ತವೆ. ಆದರೆ ಅಂಥಾ ವಾತಾವರಣದಲ್ಲಿ ಭಿನ್ನವಾದ ಕಥೆಯೊಂದನ್ನು ಅಣಿಗೊಲಿಸೋದು ಮತ್ತು ಅದನ್ನು ಒಪ್ಪಿ ನಟಿಸೋದು ಅಸಲೀ ಚಾಲೆಂಜಿನ ಸಂಗತಿ. ಆ ವಿಚಾರದಲ್ಲಿ ನಿರ್ದೇಶಕ ಮಿಲನ ಪ್ರಕಾಶ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಭರ್ಜರಿ ಗೆಲುವಿನ ರೂವಾರಿಗಳಾಗಿದ್ದಾರೆ.

 

 

ಈ ಚಿತ್ರದಲ್ಲಿ ದರ್ಶನ್ ಅವರ ಭಾವುಕ ಅಭಿನಯ ಕಂಡು ಎಲ್ಲರೂ ಕರಗಿದ್ದರು. ಒಂದು ಹಾಸ್ಯ ದೃಷ್ಯದಲ್ಲಿ ಸಹಜವಾಗಿ ನಗಿಸೋದು ಎಷ್ಟು ಕಷ್ಟವೋ, ಒಂದು ಭಾವಪೂರ್ಣ ಸನ್ನಿವೇಶವನ್ನು ನೋಡುಗರ ಎದೆಗೆ ನಾಟುವಂತೆ, ಕಣ್ಣುಗಳು ಹನಿಗೂಡುವಂತೆ ಅಭಿನಯಿಸೋದು ಅಷ್ಟೇ ಕಷ್ಟ. ದರ್ಶನ್ ಅದನ್ನು ಅತ್ಯಂತ ಸಹಜವಾಗಿ ಲೀಲಾಜಾಲವಾಗಿ ನಿರ್ವಹಿಸಿದ್ದರಿಂದಲೇ ಈವತ್ತು ತಾರಕ್ ಚಿತ್ರ ಐವತ್ತು ದಿನ ಪೂರೈಸಿ ನೂರರತ್ತ ಸಾಗುತ್ತಿದೆ.

 

 

ಶ್ರುತಿ ಹರಿಹರನ್ ಮತ್ತು ಶಾನ್ವಿ ಶ್ರೀವಾತ್ಸವ್ ಕೂಡಾ ದರ್ಶನ್ ಅವರಿಗೆ ಜೋಡಿಯಾಗಿ ಅಭಿನಯದಲ್ಲೂ ಮನಸು ಮುಟ್ಟಿದ್ದಾರೆ. ಒಂದಕ್ಕೊಂದು ಪೂರಕವಾಗಿ ಅದ್ಭುತ ದೃಶ್ಯಕಾವ್ಯದಂತೆ ಮೂಡಿ ಬಂದ ಈ ಚಿತ್ರ ಸಂಬಂಧಗಳೇ ಸವಕಲಾಗುತ್ತಿರೋ ಈ ದಿನಮಾನದಲ್ಲಿ ಸಂಬಂಧಗಳ ಗಟ್ಟಿತನ ಸಾರೋ ಮೂಲಕ ಆ ನಿಟ್ಟಿನಲ್ಲಿಯೂ ಗಮನ ಸೆಳೆದಿದೆ. ಈವತ್ತಿನ ಬದಲಾದ ಸನ್ನಿವೇಶದಲ್ಲಿ ಒಂದು ಚಿತ್ರ ನೂರರ ಗಡಿ ದಾಟೋದೆಂದರೆ ಬಲು ಕಷ್ಟದ ಸಂಗತಿ. ಆದರೆ ತಾರಕ್ ಅದನ್ನು ಸುಸೂತ್ರವಾಗಿ ಸಾಧ್ಯವಾಗಿಸಿದೆ. ಈ ಮೂಲಕ ತಾರಕ್ ಒಂದೊಳ್ಳೆ ಫ್ಯಾಮಿಲಿ ಎಂಟರ್‌ಟೈನರ್ ಆಗಿ ಜನಮಾನಸದಲ್ಲಿ ನೆಲೆ ನಿಂತಿದೆ. ಚಿತ್ರರಂಗದಲ್ಲೂ ಒಂದು ವಿಭಿನ್ನವಾದ ಮೈಲಿಗಲ್ಲಾಗಿಯೂ ದಾಖಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top