fbpx
ಆರೋಗ್ಯ

ಚಳಿ ಕಾಲದಿಂದ ಅಥವಾ ಯಾವುದೋ ಚರ್ಮದ ಖಾಯಿಲೆಯಿಂದ ಬರುವ ಚರ್ಮ ಸುಲಿಯುವಿಕೆ ಸಮಸ್ಯೆಗೆ ಮನೆಯಲ್ಲೇ ಸುಲಭವಾಗಿ ಮದ್ದು ಮಾಡ್ಕೊಳ್ಳಿ

ಚರ್ಮ ಸುಲಿಯುವಿಕೆಗೆ ಮನೆಮದ್ದು :

 

 

ಚರ್ಮ ಸುಲಿಯುವಿಕೆ ಕೆಲವರಲ್ಲಿ ಸಾಮಾನ್ಯ ಸಮಸ್ಯೆ ಅದರಲ್ಲೂ ಈ ಚಳಿ ಕಾಲದಲ್ಲಿ ಈ ಚರ್ಮ ಸುಲಿದು ಹೊಸ ಚರ್ಮ ಬರುವುದು ಸರ್ವೇಸಾಮಾನ್ಯ .

ಚರ್ಮ ಸುಲಿಯುವಿಕೆಗೆ ಮುಖ್ಯ ಕಾರಣಗಳು :

 

೧.ಚರ್ಮದ ಸಮಸ್ಯೆ
೨.ಸೂರ್ಯನ ಶಾಖ
೩.ಸೋರಿಯಾಸಿಸ್
೪.ಒಣ ಚರ್ಮ
೫.ಹವಾಮಾನ ಬದಲಾವಣೆ

 

ಮನೆಮದ್ದು :

 

೧. ಅರಿಶಿನ ,ಗಂಧ,ಜೇನಿನ ತುಪ್ಪ ಮತ್ತು ಆಲಿವ್ ಎಣ್ಣೆ:

 

1 ಚಮಚ ಅರಿಶಿನ,1 ಚಮಚ ಗಂಧ,1 ಚಮಚ ಜೇನಿನ ತುಪ್ಪ ಅದಕ್ಕೆ ಸ್ವಲ್ಪ ಆಲಿವ್ ಎಣ್ಣೆ ಅಥವಾ ಬಾದಾಮಿ ಎಣ್ಣೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಚರ್ಮ ಸುಲಿದಂತ ಜಾಗದಲ್ಲಿ ಹಚ್ಚಿ 30 ನಿಮಿಷ ಬಿಟ್ಟು ತೊಳೆದುಕೊಳ್ಳಬೇಕು.

 

೨. ಪುದೀನಾ ಸೊಪ್ಪು:

 

 

ಪುದೀನಾ ಎಲೆಗಳನ್ನು ತೊಳೆದುಕೊಂಡು ಚೆನ್ನಾಗಿ ರುಬ್ಬಿಕೊಳ್ಳಬೇಕು ನಂತರ ಅದನ್ನು ನಿಮ್ಮ ಚರ್ಮ ಸುಲಿದಂತ ಜಾಗದಲ್ಲಿ ಹಾಕಿಕೊಂಡು ಸ್ವಲ್ಪ ಹೊತ್ತು ಬಿಟ್ಟು ತೊಳೆದುಕೊಳ್ಳಬೇಕು.ಇದನ್ನು ಹಚ್ಚಿಕೊಳ್ಳುವುದರಿಂದ ನಿಮ್ಮ ಯಾವುದೇ ಚರ್ಮದ ಸಮಸ್ಯೆ ಮಾಯಾವಾಗುತ್ತದೆ.

 

೩.ಸೌತೆಕಾಯಿ:

 

ಸೌತೆಕಾಯಿಯನ್ನು ಚೆನ್ನಾಗಿ ರುಬ್ಬಿಕೊಳ್ಳಬೇಕು ನಂತರ ಅದನ್ನು ನಿಮ್ಮ ಚರ್ಮ ಸುಲಿದಂತ ಜಾಗದಲ್ಲಿ ಹಾಕಿಕೊಂಡು ಸ್ವಲ್ಪ ಹೊತ್ತು ಬಿಟ್ಟು ತೊಳೆದುಕೊಳ್ಳಬೇಕು.ಇದನ್ನು ದಿನ ಒಂದು ಸಲ ಉಪಯೋಗಿಸಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top