fbpx
ದೇವರು

600 ವರ್ಷಗಳ ಹಳೆಯ ದೇವಾಲಯದಲ್ಲಿ ಇದ್ದಕ್ಕಿದ್ದ ಹಾಗೆ ಮಹಾಲಕ್ಷ್ಮೀ ದೇವಿಯ ವಿಗ್ರಹ ಪ್ರತ್ಯಕ್ಷವಾಗಿ ಪವಾಡದಿಂದ ಸುತ್ತಮುತ್ತಲಿನ ಹಳ್ಳಿ ಉದ್ಧಾರವಾಯಿತ್ತಂತೆ ಅಂತ ತಿಳ್ಕೊಂಡ್ರೆ ಆಶ್ಚರ್ಯ ಆಗ್ದೇ ಇರಲ್ಲ !

600 ವರ್ಷಗಳ ಪುರಾತನ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿಯ ದೇವಾಲಯ.

 

ಇಂದಿನ ಆಧುನಿಕ ಜಗತ್ತಿನಲ್ಲಿ ದೇವರ ಮೇಲೆ ಅಪನಂಬಿಕೆ ಕೆಲವರಿಗೆ ಇದ್ದೇ ಇರುತ್ತದೆ . ಅಷ್ಟೇ ಅಲ್ಲ ದೇವರ ಹುಂಡಿಯ ಕಳ್ಳತನ ಸಹ ಮಾಡುತ್ತಾರೆ. ಇಂತಹ ಕಾಲದಲ್ಲಿಯೂ ಸಹ ದೇವರು ಇದ್ದಾನೆ ಎಂಬುದಕ್ಕೆ ಕರ್ನಾಟಕದ ಈ ಊರಿನ ಪುರಾತನ ದೇವಾಲಯವೇ  ಸಾಕ್ಷಿ.

 

 

ಕರ್ನಾಟಕದ 600 ವರ್ಷಗಳ ಈ ಪುರಾತನ ದೇವಸ್ಥಾನದಲ್ಲಿ   ಇದ್ದಕ್ಕಿದ್ದ ಹಾಗೆ ಮಹಾಲಕ್ಷ್ಮೀ  ದೇವಿಯ ವಿಗ್ರಹವೊಂದು ಪ್ರತ್ಯಕ್ಷವಾಗುತ್ತದೆ.ಇದು ಎಲ್ಲರಲ್ಲೂ ಸಹ ಅಚ್ಚರಿ ಮೂಡಿಸುತ್ತದೆ. ಹಾಗೆ ಇನ್ನೂ ಅನೇಕ ಅದ್ಭುತ ಗಳಿಂದ ಜನ ಸಾಗರವನ್ನೇ ತನ್ನ ಕಡೆಗೆ ಸೆಳೆಯುತ್ತಿದೆ.

ಈ ವಿಗ್ರಹವನ್ನು ಪರೀಕ್ಷೆ ಸಹ ಮಾಡಲಾಗಿದೆ ಎಂದು ಹೇಳಲಾಗಿದೆ.ನೂರಾರು ವರ್ಷ ಹಳೆಯದು ಈ ವಿಗ್ರಹ ಹಾಗೂ ಪಂಚಲೋಹಗಳಿಂದ ತಯಾರಿಸಲಾಗಿದೆ ಈ ವಿಗ್ರಹ ಎಂದು ತಿಳಿದು ಬ೦ದಿದೆ.

 

 

ಶ್ರೀ  ಲಕ್ಷ್ಮೀ  ದೇವಿಯ ವಿಗ್ರಹ ಈ ಊರಿನ ದೇವಾಲಯದಲ್ಲಿ ಪ್ರತ್ಯಕ್ಷವಾದ ಮೇಲೆ ಊರಿನ ಜೊತೆಗೆ ದೇವಾಲಯ ಹಾಗೂ ಸುತ್ತಮುತ್ತಲಿನ ಹಳ್ಳಿಗಳು ಕೂಡ ಸಮೃದ್ಧಿಯಾಗಿರುವ ಸಾಕ್ಷಿ ಇಲ್ಲಿದೆ.

ಜನಜೀವನ ಹಿಂದೆಂದೂ ಕಾಣದ ರೀತಿಯಲ್ಲಿ ಉತ್ತಮವಾಗಿದ್ದು. ಆರ್ಥಿಕವಾಗಿ ಹಿಂದುಳಿದವರು ಭಕ್ತಿಯಿಂದ ಬೇಡಿಕೊಂಡು, ಆಶ್ಚರ್ಯಕರ ರೀತಿಯಲ್ಲಿ ಕೋಟ್ಯಧಿಪತಿಯಾಗಿರುವ ಅನೇಕ ನಿದರ್ಶನಗಳು ಇಲ್ಲಿ ಸಿಗುತ್ತವೆ.

 

 

ಇಂತಹ ಅದ್ಭುತಗಳಿಂದ ಈ ದೇವಸ್ಥಾನ ಅಚ್ಚರಿ ಮೂಡಿಸಿದ್ದು ಜನರನ್ನು ತನ್ನ ಕಡೆಗೆ ಸರಿಯುತ್ತಿದೆ. ಕರ್ನಾಟಕದಲ್ಲಿ ನೆಲೆಗೊಂಡಿರುವ ಈ ದೇವಸ್ಥಾನಕ್ಕೆ ಸುಮಾರು 600 ವರ್ಷಗಳ ಇತಿಹಾಸವಿದೆ ಹಾಗೆ ಪ್ರತ್ಯಕ್ಷವಾದ ವಿಗ್ರಹ ಶ್ರೀ ಮಹಾಲಕ್ಷ್ಮೀ ದೇವಿಯ ವಿಗ್ರಹ  ಇದಾಗಿದ್ದು . ಶ್ರೀ ಲಕ್ಷ್ಮೀ ದೇವಿ ಮತ್ತು ರಂಗನಾಥ ಸ್ವಾಮಿಯು ಇಲ್ಲಿ ಜೊತೆಯಾಗಿ ನಿಲ್ಲಿಸಿದ್ದಾರೆ.

 

 

ಸುಮಾರು 600 ವರ್ಷಗಳ ಇತಿಹಾಸವಿರುವ ಹಾಗೂ ಪ್ರತ್ಯಕ್ಷವಾದ ವಿಗ್ರಹ ಶ್ರೀ ಮಹಾಲಕ್ಷ್ಮೀ  ದೇವಿಯದ್ದಾಗಿದೆ. ಇವೆರಡೂ ದೇವರುಗಳು ತನ್ನ ಬಳಿ ಬರುವ ಭಕ್ತರ ಕಷ್ಟಗಳನ್ನು ಆಲಿಸಿ ಇಷ್ಟಾರ್ಥಗಳನ್ನು ಆಲಿಸಿ ನೆರವೇರಿಸುವರು. ಇಲ್ಲಿಗೆ ಬರುವ ಬಹಳಷ್ಟು ಜನರು ಒಳಿತನ್ನು ಕಂಡಿದ್ದು ಕಷ್ಟಗಳಿಂದ ಮುಕ್ತಿ ಹೊಂದಿದ್ದು.

ಈ ದೇವಸ್ಥಾನದ ಅಭಿವೃದ್ಧಿಗೂ ಸಹ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಹಾಗೂ ಈ ಊರಿನ ಸುತ್ತಮುತ್ತ ವಾಸಿಸುವ ಜನರು ಯಾವುದೇ ಕಾಯಿಲೆಗಳಿಂದ ಬಳಲುತ್ತಿದ್ದರೂ ಸಹ ಮೊದಲು ಶ್ರೀ ಲಕ್ಷ್ಮೀ  ರ೦ಗನಾಥ ಸ್ವಾಮಿಯ  ದೇವಾಲಯಕ್ಕೆ ಭೇಟಿ ನೀಡುತ್ತಾರೆ.

 

 

ಶ್ರೀ ಲಕ್ಷ್ಮೀ  ರಂಗನಾಥ ಸ್ವಾಮಿಯ  ದೇವಸ್ಥಾನವಿರುವುದು ತುಮಕೂರು ಜಿಲ್ಲೆಯ, ಮಧುಗಿರಿ ತಾಲ್ಲೂಕಿನ ಹಂದ್ರಾಳು ಗ್ರಾಮದಲ್ಲಿ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top