fbpx
ಕಿರುತೆರೆ

ಪುಟ್ಟ ಹೆಗಲಿಗೆ ಬಿತ್ತು ನಾಯಕತ್ವದ ದೊಡ್ಡ ಜವಾಬ್ದಾರಿ.. ಮಾಡಿಲ್ಲದ ತಪ್ಪಿಗೆ ಬಿಕ್ಕಿ ಬಿಕ್ಕಿ ಅತ್ತು ಕಣ್ಣೀರಿಟ್ಟ ನಿವೇದಿತಾ..!

ಪುಟ್ಟ ಹೆಗಲಿಗೆ ಬಿತ್ತು ನಾಯಕತ್ವದ ದೊಡ್ಡ ಜವಾಬ್ದಾರಿ.. ಮಾಡಿಲ್ಲದ ತಪ್ಪಿಗೆ ಬಿಕ್ಕಿ ಬಿಕ್ಕಿ ಅತ್ತು ಕಣ್ಣೀರಿಟ್ಟ ನಿವೇದಿತಾ..!

 

 

ನಿಮಗೆಲ್ಲರಿಗೂ ಗೊತ್ತಿರುವಂತೆ ಬಿಗ್‌ಬಾಸ್‌ ಮನೆಯ ಈ ವಾರದ ಕ್ಯಾಪ್ಟನ್‌ ಆಗಿ ಬಾರ್ಬಿ ಡಾಲ್‌ ನಿವೇದಿತಾ ಗೌಡ ಆಯ್ಕೆಯಾಗಿದ್ದರು. ನಿವೇದಿತಾ ಚಿಕ್ಕವಳು ಹಾಗೂ ಸೂಕ್ಷ್ಮ ಮನಸ್ಸಿನವಳು ಎನ್ನುವ ಮನೋಭಾವನೆ ಎಲ್ಲರಲ್ಲಿ ಇದ್ದುದರಿಂದ ಆಕೆ ಹೇಗೆ ಮನೆಮಂದಿಯನ್ನೆಲ್ಲಾ ನಿಭಾಯಿಸುತ್ತಾಳೆ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು.. ಆದರೆ ತನ್ನ ಪುಟ್ಟ ಹೆಗಲಿಗೆ ಬಿದ್ದ ನಾಯಕತ್ವದ ಜವಾಬ್ದಾರಿಯಿಂದ ಬಿಕ್ಕಿ ಬಿಕ್ಕಿ ಅಳುವಂತಹ ಪರಿಸ್ಥಿತಿ ನಿವೇದಿತಾಗೆ ಎದುರಾಗಿದೆ.

 

 

ಈ ವಾರ ‘ಬಿಗ್ ಬಾಸ್ ಬೋರ್ಡಿಂಗ್ ಸ್ಕೂಲ್’ ಲಕ್ಷುರಿ ಬಜೆಟ್ ಟಾಸ್ಕ್ ಚಾಲ್ತಿಯಲ್ಲಿದ್ದು, ಇದರಂತೆ ಮನೆಯ ಸದಸ್ಯರೆಲ್ಲಾ ಶಾಲಾ ಮಕ್ಕಳಂತೆ ವೇಷತೊಟ್ಟು ಮಕ್ಕಳಂತೆ ವರ್ತಿಸಬೇಕು. ಹಿಂದಿನ ಸೀಸನ್ ನಲ್ಲಿ ಸ್ಪರ್ಧಿಯಾಗಿದ್ದ ಶಾಲಿನಿ ಅವರು ಶಿಕ್ಷಕಿಯಾಗಿ ಮನೆಯೊಳಗೆ ಪ್ರವೇಶಿಸಿದ್ದಾರೆ. ನೆನ್ನೆಯ ಚಟುವಟಿಕೆ ಮುಕ್ತಾಯವಾದಾಗ ಬಿಗ್‌ಬಾಸ್ ನೀಡಿದ ಶಾಲಾ ಸಮವಸ್ತ್ರಗಳನ್ನು ಹಿಂದಿರುಗಿಸುವಂತೆ ಸೂಚಿಸಲಾದ ಪತ್ರದ ವಿಷಯವಾಗಿ ದಿವಾಕರ್‌ ಹಾಗೂ ನಿವೇದಿತಾಳ ನಡುವೆ ಚಿಕ್ಕ ಗಲಾಟೆಯಾಯಿತು.

 

 

ಇಲ್ಲ ಸಲ್ಲದ ಕಾರಣಕ್ಕೆ ಯಾವುದೊ ಕೋಪನ ನಿವೇದಿತಾ ಮೇಲೆ ಹಾಕಿದ ದಿವಾಕರ್ “ನಿವೇದಿತಾ ನನ್ನನ್ನು ಸ್ಟುಪಿಡ್, ನಾನ್ ಸೆನ್ಸ್ ಅಂದಿದ್ದಾಳೆ” ಎಂದು ಜೋರು ಮಾತಿನಲ್ಲಿ ಕೂಗಾಡಿ ರಂಪಾಟ ಮಾಡಿದರು. ಈ ಕಡೆ ತಾನು ಹಾಗೆ ಹೇಳಿಲ್ಲ ಎಂದು ನಿವೇದಿತಾ ಕಣ್ಣೀರಿಡುತ್ತಾ ಹೇಳಿದರೂ ಕೇಳದ ದಿವಾಕರ್ ಇದೇ ಮೊದಲ ಬಾರಿಗೆ ವೀಕ್ಷಕರಿ ಕೆಟ್ಟವರಂತೆ ಕಂಡರು. ರಿಯಾಜ್ ಎಷ್ಟೇ ಹೇಳಿದರೂ ಕೇಳುವ ಸ್ಥಿತಿಯಲ್ಲಿ ದಿವಾಕರ್ ಇರಲಿಲ್ಲ.

 

 

ನಂತರ ದಿವಾಕರ್ ಬಳಿ ಸ್ವತಃ ನಿವೇದಿತಾರವರೇ ಕ್ಷಮೆ ಕೇಳಿದರು ಆದರೂ ದಿವಾಕರ್ ನಿವೇದಿತಾಳನ್ನು ಮತ್ತೆ ಕೆಣಕಿ ಆಕೆ ಕನ್ನೇರಿಡುವಂತೆ ಮಾಡಿದರು. ನಿವೇದಿತಾ ಬಿಕ್ಕಿ ಬಿಕ್ಕಿ ಅತ್ತಿದ್ದು, ಅವರಿಗೆ ಶಾಲಿನಿ, ಕಾರ್ತಿಕ್, ಶ್ರುತಿ ಸೇರಿದಂತೆ ಮೊದಲಾದ ಸ್ಪರ್ದಿಗಳು ಸಮಾಧಾನ ಪಡಿಸಿದರು.

 

 

ದಿವಾಕರ್ ಮತ್ತು ನಿವೇದಿತಾ ಜಗಳದ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಬಾಕ್ಸ್’ನಲ್ಲಿ ತಿಳಿಸಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment
Dhanu says:

Divakar is bad

To Top