fbpx
ಮನೋರಂಜನೆ

ರಂಗಿತರಂಗ ತಂಡದ ‘ರಾಜರಥ’ ಚಿತ್ರ ಜನವರಿ 25ಕ್ಕೆ ರಜಿನಿಕಾಂತ್ ‘2.0’ ಎದುರು ತೆರೆಗೆ ಬರುತ್ತಿದೆ..!

ರಂಗಿತರಂಗ ತಂಡದ ‘ರಾಜರಥ’ ಚಿತ್ರ ಜನವರಿ 25ಕ್ಕೆ ರಜಿನಿಕಾಂತ್ ‘2.0’ ಎದುರು ತೆರೆಗೆ ಬರುತ್ತಿದೆ..!

 

 

ಅನೂಪ್ ಭಂಡಾರಿ ಮತ್ತು ನಿರೂಪ್ ಬಂಡಾರಿ ಸೇರಿ ಮಾಡಿದ್ದ ಚಿತ್ರ ರಂಗಿತರಂಗ ನಿರೀಕ್ಷೆಗೂ ಮೀರಿ ಯಶಸ್ಸನ್ನ ಗಳಿಸಿತ್ತು.ರಂಗಿತರಂಗ ಚಿತ್ರ ಬಾಹುಬಲಿ ಚಿತ್ರದ ಎದುರು ಬಿಡುಗಡೆಗೊಂಡು ಯಶಸ್ಸುಗೊಂಡಿದ್ದು ಎಲ್ಲರೂ ಅಚ್ಚರಿಗೊಳ್ಳುವಂತೆ ಮಾಡಿತ್ತು. ಈಗ ಅಂತಹುದೇ ಪರಿಸ್ಥಿತಿ ನಿರ್ಮಾಣವಾಗುವ ಎಲ್ಲಾ ಲಕ್ಷಣಗಳು ತುಂಬಾ ಇವೆ. ಹೇಗೆ ಅಂತೀರಾ ಮುಂದೆ ಓದಿ.

 

 

ಭಂಡಾರಿ ಸಹೋದರರ ಮುಂದಿನ ಚಿತ್ರ ರಾಜರಥ ಬಿಡುಗಡೆಗೆ ಸಿದ್ದವಾಗಿದ್ದು ವ್ಹಿತ್ರದ ಮೇಲೆ ಬಾರಿ ನಿರೀಕ್ಷೆ ಹುಟ್ಟಿಕೊಂಡಿದೆ. ಚಿತ್ರ ಮುಂದಿನ ಗಣರಾಜ್ಯೋತ್ಸವದ ಪ್ರಯುಕ್ತ ಜನವರಿ 25ನೇ ತಾರೀಕಿನಂದು ದೇಶಾದ್ಯಂತ ತೆರೆಗೆ ಬರುತ್ತಿದೆ..

 

 

ವಿಶೇಷವೆಂದರೆ ರಾಜರಥ ಚಿತ್ರ ಬಿಡುಗಡೆಗೊಳ್ಳುವ ದಿನದಂದೇ ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಹುನಿರೀಕ್ಷಿತ 2.0 ಚಿತ್ರ ಕೂಡ ಬಿಡುಗಡೆಗೊಳ್ಳಲಿದೆ.. ಹಾಗಾಗಿ ಕಳೆದ ಬಾರಿ ಬಾಹುಬಲಿ ಎದುರು ಜಯಗಳಿಸಿದ್ದ ರಂಗಿತರಂಗ ಚಿತ್ರ ತಂಡ ಈಗ ತಾವೇ ತಯಾರಿಸಿರುವ ರಾಜರಥ ಚಿತ್ರ ರಜಿನಿ ಚಿತ್ರದ ಎದುರು ಯಾವ ರೀತಿ ಪೈಪೋಟಿ ಕೊಡಲಿದೆ ಎನ್ನುವುದು ಕುತೂಹಲ ಕೆರಳಿಸಿದೆ. 2.0 ಚಿತ್ರದ ಎದುರು ಕನ್ನಡದ ರಾಜರಥ ಚಿತ್ರ ಗೆಲ್ಲಲಿ ಎನ್ನುವುದೇ ಕನ್ನಡಿಗರ ಆಶಯ.

 

 

ಅಂದಹಾಗೆ ‘ರಾಜರಥ’ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಮೂಡಿಬಂದಿದ್ದು ಅನೂಪ್ ಭಂಡಾರಿ ನಿರ್ದೇಶಿದ್ದಾರೆ. ಚಿತ್ರದಲ್ಲಿ ನಿರೂಪ್ ಭಂಡಾರಿ ಮತ್ತು ಅವಂತಿಕ ಶೆಟ್ಟಿ ನಾಯಕ ನಾಯಕಿರಾಗಿ ಕಾಣಿಸಿಕೊಂಡಿದ್ದು ರವಿಶಂಕರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳಿನ ಖ್ಯಾತ ನಟ ಆರ್ಯ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top