fbpx
ಸಮಾಚಾರ

ಜನಾರ್ಧನ ರೆಡ್ಡಿಗೆ ಸೆಡ್ಡುಹೊಡೆಯುವಂತಿದೆ ಜೆಡಿಎಸ್‌ ಶಾಸಕನ ಪುತ್ರಿ ಮದುವೆ ಆಮಂತ್ರಣ ಪತ್ರಿಕೆ..!

ಜನಾರ್ಧನ ರೆಡ್ಡಿಗೆ ಸೆಡ್ಡುಹೊಡೆಯುವಂತಿದೆ ಜೆಡಿಎಸ್‌ ಶಾಸಕನ ಪುತ್ರಿ ಮದುವೆ ಆಮಂತ್ರಣ ಪತ್ರಿಕೆ..!

 

 

ಮಾಜಿ ಸಚಿವ ಜನಾರ್ದನ ರೆಡ್ಡಿ ಮಗಳ ಮದುವೆಗೆ ಮಾಡಿಸಿದ್ದ ವಿಶೇಷ ಆಹ್ವಾನ ಪತ್ರಿಕೆಯನ್ನೇ ಮೀರುಸುವಂತೆ ನಾಗಮಂಗಲ ಜೆಡಿಎಸ್ ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ ಅವರು ತಮ್ಮ ಮಗಳ ಮದುವೆಯಾ ಆಮಂತ್ರಣ ಪತ್ರಿಕೆಯಲ್ಲಿ ಅದ್ದೂರಿ ವಿಡಿಯೋ ಹಾಡೊಂದನ್ನು ಮಾಡಿಸಿದ್ದಾರೆ.

 

 

ಶಿವರಾಮೇಗೌಡರು ತಮ್ಮ ಪುತ್ರಿ ವಿವಾಹವನ್ನು ಅದ್ಧೂರಿಯಾಗಿ ಮಾಡುತ್ತಿದ್ದು ಆಹ್ವಾನ ಪತ್ರಿಕೆಯಲ್ಲೂ ವಿಶೇಷತೆಯಿರಲಿ ಎಂಬ ಕಾರಣಕ್ಕೆ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಮಾಡಿಸಿದ್ದ ಮಾದರಿಯಲ್ಲೇ ವಿಶೇಷ ವಿಡಿಯೋ ಆಮಂತ್ರಣ ಪತ್ರಿಕೆಯನ್ನು ರೆಡಿಮಾಡಿಸಿದ್ದಾರೆ. ಆಮಂತ್ರಣ ಪತ್ರಿಕೆಯ ವಿಡಿಯೋದಲ್ಲಿ ಹಾಡು, ಡ್ಯಾನ್ಸ್, ಗೀತೆ ಸಂಯೋಜನೆ ವಿಶೇಷ ಡಿಜಿಟಲೈಜ್ಡ್ ನೊಂದಿಗೆ ಅದ್ಧೂರಿ ಗ್ರಾಫಿಕ್ಸ್ ಹಿನ್ನೆಲೆಯಲ್ಲಿ ಚಿತ್ರೀಕರಿಸಲಾಗಿದೆ. .

 

 

ಈ ಆಹ್ವಾನಪತ್ರಿಕೆ ಸಾಮಾಜಿಕಜಾಲ ತಾಣಗಳಲ್ಲಿ ವೈರಲ್ ಆಗಿದ್ದು ವಿಡಿಯೋದಲ್ಲಿ ಶಿವರಾಮೇಗೌಡರ ಕುಟುಂಬ ಸದಸ್ಯರು ಅಭಿನಯ ಮಾಡಿದ್ದು ತಮ್ಮ ಕುಟುಂಬದ ಮದುವೆಗೆ ವಿಶೇಷ ಆಹ್ವಾನ ಕೋರಿದ್ದಾರೆ. ಈ ಯಂತ್ರಣ ಪತ್ರಿಕೆಯನ್ನು ಕೇವಲ ವಿಐಪಿಗಳಿಗೆ ಮಾತ್ರ ನೀಡುತ್ತಿದ್ದು ಸಾಮಾನ್ಯಜನರಿಗೆ ಬೇರೆ ರೀತಿಯ ಆಮಂತ್ರಣ ಪತ್ರಿಕೆಯನ್ನ ಮಾಡಿಸಲಾಗಿದೆ.

 

 

ಶಿವರಾಮೇಗೌಡರ ಪುತ್ರಿ ಭವ್ಯ ಅವರ ಮದುವೆ ಶಿವಲಾಲ್‌ ಮತ್ತು ಕಾಮಿನಿ ದಂಪತಿ ಪುತ್ರ ರಾಜೀವ್‌ ಅವರೊಂದಿಗೆ ಡಿ.6 ಮತ್ತು 7ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. . ಕೋಟ್ಯಂತರ ರೂ.ಖರ್ಚು ಮಾಡಿ ಮಾಡುತ್ತಿರುವ ಈ ಮದುವೆಗೆ ದೇಶದ ಹಲವು ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ.

 

ಶಿವರಾಮೇಗೌಡ ಪುತ್ರಿ ವಿವಾಹದ ಅದ್ಧೂರಿ ಆಮಂತ್ರಣದ ವೀಡಿಯೋವನ್ನು ಇಲ್ಲಿ ನೋಡಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top